ETV Bharat / technology

ಭಲೇ ಫೀಚರ್ಸ್​ ಪರಿಚಯಿಸಿದ ವಾಟ್ಸ್‌ಆ್ಯಪ್:​ ರಂಗು ರಂಗಿನಿಂದ ಕೂಡಿದ ಚಾಟ್​​ ಬಾಕ್ಸ್​! - WHATSAPP CHAT THEMES

WhatsApp Chat Themes: ಬಳಕೆದಾರರ ಅನುಭವವನ್ನು ಸುಧಾರಿಸಲು ಜನಪ್ರಿಯ ಮೆಸೇಜಿಂಗ್​ ಆ್ಯಪ್​ ವಾಟ್ಸ್‌ಆ್ಯಪ್ ಕಳೆದ ಕೆಲವು ತಿಂಗಳುಗಳಲ್ಲಿ ಹಲವು ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ.

HOW TO CHANGE WHATSAPP CHAT THEMES  HOW TO CUSTOMISE CHAT THEMES  WHATSAPP CHAT THEMES  HOW TO USE WHATSAPP CHAT THEMES
ಕಸ್ಟಮೈಸಬಲ್​ ಚಾಟ್ ಥೀಮ್ಸ್ ಫೀಚರ್​ (Photo Credit: WHATSAPP BLOG)
author img

By ETV Bharat Tech Team

Published : Feb 14, 2025, 6:55 PM IST

Updated : Feb 14, 2025, 8:04 PM IST

WhatsApp Chat Themes: ಮೆಟಾದ ಇನ್‌ಸ್ಟೆಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಅಂದರೆ ವಾಟ್ಸ್‌ಆ್ಯಪ್‌ ಹೊಸ 'ಚಾಟ್ ಥೀಮ್ಸ್​' ಪರಿಚಯಿಸಿದೆ. ಬಳಕೆದಾರರು ವರ್ಣರಂಜಿತ ಬಬಲ್ಸ್​ ಮತ್ತು ನ್ಯೂ ವಾಲ್​ಪೇಪರ್ಸ್​ ಜೊತೆ ತಮ್ಮ ಚಾಟ್‌ಗಳನ್ನು ಕಸ್ಟಮೈಸ್ ಮಾಡಬಹುದು. ಹೊಸ ಅಪ್‌ಡೇಟ್‌ನೊಂದಿಗೆ ಬಳಕೆದಾರರು ಈಗ ಪ್ರಿ-ಸೆಟ್​ ಥೀಮ್ಸ್​ ಪಡೆಯುತ್ತಾರೆ ಮತ್ತು ತಮ್ಮ ನೆಚ್ಚಿನ ಶೈಲಿಯನ್ನು ಆಧರಿಸಿ ಕಲರ್​​ ಸಹ ಬದಲಾಯಿಸಬಹುದಾಗಿದೆ.

ವಾಟ್ಸ್‌ಆ್ಯಪ್ ನ್ಯೂ ಕಸ್ಟಮೈಸೇಶನ್ ಫೀಚರ್ಸ್​: ಈಗ ಚಾಟ್ ಬಬಲ್ಸ್​ ಮತ್ತು ಬ್ಯಾಕ್​ಗ್ರೌಂಡ್​ ಅನ್ನು ತಮ್ಮ ನೆಚ್ಚಿನ ಬಣ್ಣಕ್ಕೆ ಬದಲಾಯಿಸಬಹುದು. ಇದಲ್ಲದೆ ಕಂಪನಿ ಹಲವಾರು ಪ್ರೀ-ಸೆಟ್ ಥೀಮ್‌ಗಳನ್ನು ಪರಿಚಯಿಸಿದೆ. ಇದು ಬ್ಯಾಕ್​ಗ್ರೌಂಡ್​ ಮತ್ತು ಬಬಲ್ ಕಲರ್​ ಹೊಂದಿಸುತ್ತದೆ. ಇಷ್ಟು ಮಾತ್ರವಲ್ಲದೆ ತಮ್ಮದೇ ಆದ ವಿಶಿಷ್ಟ ಬಣ್ಣವನ್ನೂ ಹೊಂದಿಸಬಹುದು.

30 ನ್ಯೂ ವಾಲ್‌ಪೇಪರ್ಸ್​ ಪರಿಚಯಿಸಿದ ವಾಟ್ಸ್‌ಆ್ಯಪ್​: ಚಾಟ್‌ಗಳನ್ನು ಇನ್ನಷ್ಟು ರೋಮಾಂಚಕವಾಗಿಸಲು ವಾಟ್ಸ್‌ಆ್ಯಪ್ 30 ಹೊಸ ವಾಲ್‌ಪೇಪರ್ಸ್​ ಸೇರಿಸಿದೆ. ಬಳಕೆದಾರರು ಈಗ ತಮ್ಮ ಕ್ಯಾಮೆರಾ ರೋಲ್‌ನಿಂದ ಕಸ್ಟಮ್ ಬ್ಯಾಕ್​ಗೌಂಡ್​ಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡುವ ಆಯ್ಕೆಯನ್ನೂ ಸಹ ಪಡೆಯುತ್ತಾರೆ. ಇದರ ಸಹಾಯದಿಂದ, ಬಳಕೆದಾರರು ಸಂಪೂರ್ಣವಾಗಿ ಕಸ್ಟಮ್​ಗೊಳಿಸಿದ ಅನುಭವ ಪಡೆಯಬಹುದು.

ವಾಟ್ಸ್‌ಆ್ಯಪ್ ಕಸ್ಟಮೈಸ್ ಆಪ್ಷನ್​: ಈಗ ವಾಟ್ಸ್‌ಆ್ಯಪ್​ ಬಳಕೆದಾರರು ಎಲ್ಲಾ ಚಾಟ್‌ಗಳಿಗೆ ಒಂದೇ ಥೀಮ್ ಅನ್ನು ಅನ್ವಯಿಸಬಹುದು ಅಥವಾ ಪ್ರತಿ ಚಾಟ್‌ಗೆ ವಿಭಿನ್ನ ಥೀಮ್‌ಗಳನ್ನು ಜೋಡಿಸಬಹುದು. ಆದರೂ ಈ ಥೀಮ್‌ಗಳು ಬಳಕೆದಾರರಿಗೆ ಮಾತ್ರ ಗೋಚರಿಸುತ್ತವೆ. ನೀವು ಈಗ ನಿಮ್ಮ ವಾಟ್ಸ್‌ಆ್ಯಪ್​ ಚಾಟ್‌ಗಳನ್ನು ಖಾಸಗಿಯಾಗಿ ಇರಿಸಿಕೊಳ್ಳುವ ಮೂಲಕ ಹೆಚ್ಚು ಆಕರ್ಷಕವಾಗಿ ಮಾಡಬಹುದು. ಬಳಕೆದಾರರು ಈಗ ತಮ್ಮ ವಾಟ್ಸ್‌ಆ್ಯಪ್​ ಚಾನೆಲ್‌ಗಳ ಥೀಮ್‌ಗಳನ್ನು ಸಹ ಬದಲಾಯಿಸಬಹುದು, ಇದು ಇತರ ವ್ಯಕ್ತಿಗೆ ಅವರ ಕಮ್ಯುನಿಕೇಶನಲ್ಲಿ ವಿಭಿನ್ನ ಅನುಭವ ನೀಡುತ್ತದೆ.

ಚಾಟ್ ಥೀಮ್ಸ್​ ಬಳಕೆ ಹೇಗೆ?: ಡೀಫಾಲ್ಟ್ ಚಾಟ್ ಥೀಮ್ ಅಪ್ಲೈ ಮಾಡಲು, ‘Settings’ಗೆ ಹೋಗಿ 'Chats' ಆಯ್ಕೆ ಮಾಡಿ. ನಂತರ ‘Default chat theme’ ಆಯ್ಕೆ ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಆಯ್ಕೆಯ ಥೀಮ್ ಅನ್ನು ನೀವು ಅಪ್ಲೈ ಮಾಡಬಹುದು. ನೀವು iOSನಲ್ಲಿ ಸ್ಕ್ರೀನ್​ ಮೇಲ್ಭಾಗದಲ್ಲಿರುವ Chat ಅನ್ನು ಟ್ಯಾಪ್ ಮಾಡುವ ಮೂಲಕ ಇದನ್ನು ಕಸ್ಟಮೈಸ್​ ಮಾಡಬಹುದು. ಆದರೂ ನೀವು ಆ್ಯಂಡ್ರಾಯ್ಡ್​ ಗ್ರಾಹಕರಾಗಿದ್ರೆ, ಬಲಭಾಗದಲ್ಲಿರುವ ತ್ರೀ-ಡಾಟ್ ಮೆನುವನ್ನು ಕ್ಲಿಕ್ ಮಾಡಿ ಮತ್ತು ‘ಥೀಮ್’ ಆಯ್ಕೆ ಮಾಡಬಹುದು. ಇಲ್ಲಿ ನೀವು ಈಗ ಈ ಎಲ್ಲಾ ಹೊಸ ಥೀಮ್‌ಗಳು ಮತ್ತು ಕಲರ್ಸ್ ಅನ್ನು​ ಕಾಣುವಿರಿ.

ವಾಟ್ಸ್‌ಆ್ಯಪ್ ಜಾಗತಿಕವಾಗಿ ಹೊಸ ಚಾಟ್ ಥೀಮ್‌ಗಳು ಮತ್ತು ವಾಲ್‌ಪೇಪರ್‌ಗಳನ್ನು ಹೊರತರಲು ಪ್ರಾರಂಭಿಸಿದೆ. ನೀವು ಈ ಹೊಸ ವೈಶಿಷ್ಟ್ಯಗಳನ್ನು ಇನ್ನೂ ಸ್ವೀಕರಿಸದಿದ್ದರೆ ಮುಂದಿನ ಕೆಲವು ವಾರಗಳಲ್ಲಿ ಅಪ್​ಡೇಟ್​ ಪಡೆಯಬಹುದು.

ಇದನ್ನೂ ಓದಿ: ಐಫೋನ್‌ಪ್ರಿಯರಿಗೆ ಸಿಹಿ ಸುದ್ದಿ ನೀಡಿದ ಟೀಮ್​ ಕುಕ್: ಏನದು ಗೊತ್ತಾ?

Last Updated : Feb 14, 2025, 8:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.