ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ಸ್ಟಾರ್ ಡೈರೆಕ್ಟರ್ ಎಸ್.ಎಸ್.ರಾಜಮೌಳಿ ಕಾಂಬಿನೇಷನ್ನಲ್ಲಿ ನಿರ್ಮಾಣಗೊಳ್ಳುತ್ತಿರೋ ಆ್ಯಕ್ಷನ್ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. 'SSMB 29' ಎಂಬ ತಾತ್ಕಾಲಿಕ ಶೀರ್ಷಿಕೆಯುಳ್ಳ ಸಿನಿಮಾಗೆ ಸಂಬಂಧಿಸಿದಂತೆ ನಿರ್ದೇಶಕರು ಇಂಟ್ರೆಸ್ಟಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ. ಜಕ್ಕಣ್ಣ ಶೇರ್ ಮಾಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಎಸ್.ಎಸ್. ರಾಜಮೌಳಿ ತಮ್ಮ ಅಫೀಶಿಯಲ್ ಇನ್ಸ್ಟಾಗ್ರಾಮ್ನಲ್ಲಿ ಶಾರ್ಟ್ ವಿಡಿಯೋ ಶೇರ್ ಮಾಡಿದ್ದಾರೆ. ಸಿಂಹದ ಫೋಟೋ ನೋಡುತ್ತಾ ನಿಂತ ನಿರ್ದೇಶಕರು ಕ್ಯಾಮರಾಗೆ ಪಾಸ್ಪೋರ್ಟ್ ತೋರಿಸಿದ್ದಾರೆ. ಕೂಡಲೇ ಸಿಂಹ ಬೋನ್ನೊಳಗೆ ಬಂಧಿಯಾದಂತೆ ತೋರಿದೆ. ಸಿಂಹವನ್ನು ಬಂಧಿಸಿದಂತೆ ತೋರುವ ದೃಶ್ಯ ಹಂಚಿಕೊಂಡ ಅವರು, 'ಕ್ಯಾಪ್ಚರ್' ಎಂಬ ಕ್ಯಾಪ್ಷನ್ ನೀಡಿದ್ದಾರೆ.
ಪಾಸ್ಪೋರ್ಟ್ ಯಾರದ್ದು?ಅಲ್ಲಿಗೆ, ಶೂಟಿಂಗ್ ಪೂರ್ಣಗೊಳ್ಳೋವರೆಗೂ ನಾಯಕ ನಟ ಮಹೇಶ್ ಬಾಬು ಎಲ್ಲೂ ಹೋಗುವಂತಿಲ್ಲ ಎಂಬುದನ್ನು ನಿರ್ದೇಶಕರು ಇಂಟ್ರೆಸ್ಟಿಂಗ್ ವಿಡಿಯೋ ಮೂಲಕ ತಿಳಿಸಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಮಹೇಶ್ ಬಾಬು ಹೆಚ್ಚು ವಿದೇಶ ಪ್ರವಾಸ ಕೈಗೊಳ್ಳುವ ಭಾರತೀಯ ನಟ. ಹಾಗಾಗಿ ಈ ಪಾಸ್ಪೋರ್ಟ್ ಅವರದ್ದೇ ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ.
ಸಿನಿಮಾ ಯಾವ ಮಟ್ಟಿಗೆ ಮೂಡಿ ಬರಬಹುದು? ಮಹೇಶ್ ಬಾಬು ಅವರನ್ನು ಸಿಂಹಕ್ಕೆ ಹೋಲಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಸಿನಿಮಾ ಯಾವ ಮಟ್ಟಿಗೆ ಮೂಡಿ ಬರಬಹುದು ಎಂದು ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಈ ಪೋಸ್ಟ್ಗೆ ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ಪ್ರತಿಕ್ರಿಯಿಸಿದ್ದಾರೆ.
ಸೆಲೆಬ್ರಿಟಿಗಳ ಪ್ರತಿಕ್ರಿಯೆ: ನಟಿ ಪ್ರಿಯಾಂಕಾ ಚೋಪ್ರಾ "ಫೈನಲಿ" (ನಗುವ ಎಮೋಜಿಯೊಂದಿಗೆ) ಎಂದು ಕಾಮೆಂಟ್ ಮಾಡಿದ್ರೆ, ಮಹೇಶ್ ಬಾಬು ಒಮ್ಮೆ ಕಮಿಟ್ ಆದ್ರೆ ನನ್ನ ಮಾತು ನಾನೇ ಕೇಳೋದಿಲ್ಲ ಎಂದು ತಿಳಿಸಿದ್ದಾರೆ. ಶೂಟಿಂಗ್ ಸುತ್ತಲಿನ ಉತ್ಸಾಹ ದುಪ್ಪಟ್ಟಾಗಿದೆ.