ಕರ್ನಾಟಕ

karnataka

ETV Bharat / entertainment

''ಅಹಂಕಾರಿ, ಕಳಪೆ ಮೋಕ್ಷಿತಾ'': ದನಿ ಎತ್ತಿದ ಧನರಾಜ್​​; ಬಿಗ್ ಬಾಸ್​ ಸ್ಪರ್ಧಿಗಳಿಗೆ ಆಶ್ಚರ್ಯ - MOKSHITHA DHANARAJ FIGHT

''ಕಳಪೆ ಆಯ್ಕೆಗಾಗಿ ಕಟ್ ಆಯ್ತಾ ಪಾರ್ಟ್ನರ್​ಶಿಪ್?'' ಎಂಬ ಕ್ಯಾಪ್ಷನ್​ನೊಂದಿಗೆ ಬಿಗ್​ ಬಾಸ್​ ಪ್ರೋಮೋ ಅನಾವರಣಗೊಂಡಿದೆ. ಮೋಕ್ಷಿತಾ ಮತ್ತು ಧನರಾಜ್​​ ವಾಗ್ವಾದಕ್ಕಿಳಿದಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ.

clash between mokshitha and dhanaraj
ಧನರಾಜ್​ ಮೋಕ್ಷಿತಾ ನಡುವೆ ವಾಗ್ವಾದ (Photo: Bigg Boss Team)

By ETV Bharat Entertainment Team

Published : Nov 15, 2024, 4:14 PM IST

ಕಿರುತೆರೆ ಲೋಕದ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್​​ ಕನ್ನಡ ಸೀಸನ್​​ 11' ಏಳನೇ ವಾರಾಂತ್ಯ ಸಮೀಪಿಸಿದೆ. ಏಳನೇ ವಾರದ ಟಾಸ್ಕ್​ ಭಾಗವಾಗಿ ಜೋಡಿ ಚಟುವಟಿಕೆಗಳು ನಡೆದಿದೆ. ಅದರಂತೆ, ಮೋಕ್ಷಿತಾ ಮತ್ತು ಧನರಾಜ್​ ಒಂದು ಜೋಡಿಯಾಗಿ ಆಟ ಆಡಿದ್ದರು. ಆದರೆ ಈಗ ಇವರ ನಡುವೆ ಬಿರುಕು ಮೂಡಿದಂತೆ ತೋರುತ್ತಿದೆ. ಬಹಳ ನಾಜೂಕು ನಡೆಯಿಂದ ಗುರುತಿಸಿಕೊಂಡಿದ್ದ ಧನರಾಜ್​ ಆಚಾರ್​​ ಅವರಿಂದು ಕೆರಳಿ ಕೆಂಡವಾಗಿದ್ದಾರೆ.

''ಕಳಪೆ ಆಯ್ಕೆಗಾಗಿ ಕಟ್ ಆಯ್ತಾ ಪಾರ್ಟ್ನರ್​ಶಿಪ್?'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​​ನೊಂದಿಗೆ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದೆ. ಪ್ರತೀ ವಾರದಂತೆ ಕಳಪೆ ಪಟ್ಟ ಕೊಡಲು ಸ್ಪರ್ಧಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಧನರಾಜ್​ ಆಚಾರ್​​ ಪಾರ್ಟರ್ ಆಗಿದ್ದ ಮೋಕ್ಷಿತಾ ಅವರು ಧನರಾಜ್​ ಅವರಿಗೇನೆ ಕಳಪೆ ಪಟ್ಟ ಕೊಟ್ಟಿದ್ದಾರೆ. ಧನರಾಜ್​ ಅವರ ಸರದಿ ಬಂದಾಗ ಅವರ ಪ್ರತಿಕ್ರಿಯೆ ಬಹಳ ಖಾರವಾಗಿತ್ತು. ಈ ನಡೆ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ.

ಕಳಪೆಯನ್ನು ನಾನು ಧನರಾಜ್​ ಅವರಿಗೆ ಕೊಡುತ್ತೇನೆ. ಟಾಸ್ಕ್ ವಿಚಾರ ಬಂದಾಗ ಸ್ಮಾರ್ಟ್​ ಆಗಿ ನೀವು ಯೋಚನೆ ಮಾಡುತ್ತಿರಲಿಲ್ಲ ಎಂದು ಮೋಕ್ಷಿತಾ ತಮ್ಮ ಕಾರಣ ಕೊಟ್ಟಿದ್ದಾರೆ. ಅದಕ್ಕೆ ಧನ್ಯವಾದಗಳು ಎಂದು ಧನರಾಜ್​ ಕೈಮುಗಿದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ತುಳುನಾಡಿನ ಸಂಪ್ರದಾಯ ಮರೆಯದ ಐಶ್ವರ್ಯಾ ರೈ: ಭಾಷಾಪ್ರೇಮದ ವಿಡಿಯೋ ನೋಡಿ

ನಂತರ ಧನರಾಜ್​ ಆಚಾರ್ ಅವರ ಸರದಿ ಬಂದಾಗ, ನನ್ನ ಪಾರ್ಟ್ನರ್​ ನನಗೆ ಕಳಪೆ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಂತೆ ಮೋಕ್ಷಿತಾ ವಾದಕ್ಕಿಳಿದಿದ್ದಾರೆ. ಪಾರ್ಟ್ನರ್​ ಆಗಿ ಎಷ್ಟು ಸಪೋರ್ಟಿವ್​ ಆಗಿದ್ರಿ? ಎಂದು ಪ್ರಶ್ನಿಸಿದ್ದಾರೆ. ಕಿಚನ್ ಡಿಪಾರ್ಟ್​​​ಮೆಂಟ್​​ ಇದ್ದಾಗ್ಲೇ ಗೊತ್ತಾಯ್ತು.... ಅಂತಾ ಧನರಾಜ್​ ತಿಳಿಸಿದ್ದಾರೆ. ಅದಕ್ಕೆ ಮೋಕ್ಷಿತಾ, ಕಿಚನ್ ಡಿಪಾರ್ಟ್​​​ಮೆಂಟ್ ಬಗ್ಗೆ ಮಾತಾಡ್ಬೇಡಿ ನೀವು ಎನ್ನುತ್ತಿದ್ದಂತೆ, ನಾನು ಮಾತನಾಡುವಾಗ ನೀವ್ಯಾಕೆ ಮಾತನಾಡುತ್ತಿದ್ದೀರಾ ಎಂದು ಧನರಾಜ್​ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಭೈರತಿ ರಣಗಲ್​: ಡಾಲಿ ಧನಂಜಯ್​ ಭರ್ಜರಿ ಡ್ಯಾನ್ಸ್; ಹೇಗಿದೆ ಸಿನಿಮಾ?

ಕುತ್ಕೊಳ್ರಿ ಸುಮ್ನೆ ಅಂತಾ ಮೋಕ್ಷಿತಾ ಹೇಳುತ್ತಿದ್ದಂತೆ ಸಿಡಿದೆದ್ದ ಧನರಾಜ್​, ಅಹಂಕಾರ ಇದೆ ನಿಮ್ಗೆ, ಕಳಪೆ ಮೋಕ್ಷಿತಾ ಅವ್ರು ಎಂದು ತಿಳಿಸಿದ್ದಾರೆ. ಆ ಕೂಡಲೇ ಉಗ್ರಂ ಮಂಜು ಪ್ರತಿಕ್ರಿಯಿಸಿ, ಸೂಪರ್ ಧನರಾಜ್​ ಎಂದು ಚಪ್ಪಾಳೆ ತಟ್ಟಿದ್ದಾರೆ. ಅವರಿಗೆ ಅಸಲಿ ಆಟ ತೋರಿಸ್ತೀನಿ ಎಂದು ಧನರಾಜ್​ ಕಳಪೆ ಬಟ್ಟೆ ತೊಟ್ಟು ಬಿಗ್​ ಬಾಸ್​ ಜೈಲಿನೊಳಗೆ ಹೋಗಿದ್ದಾರೆ. ನಂತರ ಅಹಂಕಾರದ ಬಗ್ಗೆ ಮಾತನಾಡುತ್ತಾ, ಮೋಕ್ಷಿತಾ ತಮ್ಮವರೊಂದಿಗೆ ಕಣ್ಣೀರಿಟ್ಟಿದ್ದಾರೆ. ಧನರಾಜ್​ ಅವರ ಧೈರ್ಯ ಹೆಚ್ಚಿನವರ ಮೆಚ್ಚುಗೆಗೆ ಪಾತ್ರವಾಗಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಕಾತರರಾಗಿದ್ದಾರೆ.

ABOUT THE AUTHOR

...view details