ಕರ್ನಾಟಕ

karnataka

ETV Bharat / entertainment

ಅಯೋಧ್ಯೆಗೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆದ ನಟಿ ಊರ್ವಶಿ ರೌಟೇಲಾ - Urvashi Rautela visited Ayodhya - URVASHI RAUTELA VISITED AYODHYA

ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಕುಟುಂಬ ಸಮೇತ ಅಯೋಧ್ಯೆಗೆ ಭೇಟಿ ನೀಡಿದ್ದು, ಶ್ರೀ ರಾಮಲಲ್ಲಾನ ದರ್ಶನ ಪಡೆದರು.

Actress Urvashi Rautela visited Ayodhya and had darshan of Ramlalla
ಅಯೋಧ್ಯೆಗೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆದ ನಟಿ ಊರ್ವಶಿ ರೌಟೇಲಾ

By ETV Bharat Karnataka Team

Published : Mar 23, 2024, 5:58 PM IST

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದಾಗಿನಿಂದ ಸೆಲೆಬ್ರೆಟಿಗಳ ಆಗಮನ ನಿರಂತರವಾಗಿದೆ. ಅದಕ್ಕೆ ಸಿನಿಮಾ ತಾರೆಗಳೂ ಹೊರತಾಗಿಲ್ಲ. ಇದೀಗ ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಕೂಡ ಕುಟುಂಬ ಸಮೇತ ಅಯೋಧ್ಯೆಗೆ ಆಗಮಿಸಿದ್ದು, ರಾಮಲಲ್ಲಾನ ದರ್ಶನವನ್ನು ಪಡೆದರು.

ರಾಮಮಂದಿರಕ್ಕೆ ಆಗಮಿಸಿದ ರೌಟೇಲಾ ಸುಮಾರು 30 ನಿಮಿಷಗಳ ಕಾಲ ಬಾಲಕ ರಾಮನನ್ನು ನೋಡುತ್ತಲೇ ಭಕ್ತಿ ಪರವಶರಾದರು. ದೇವಾಲಯದ ಸೊಬಗನ್ನು ಕಂಡು ಭಾವುಕರಾದರು. ದೇವರ ಆಶೀರ್ವಾದ ಪಡೆದ ನಟಿ ಊರ್ವಶಿ ಹಾಗೂ ಅವರ ಕುಟುಂಬದವರಿಗೆ ಅರ್ಚಕ ಪ್ರದೀಪ್​ ದಾಸ್​ ಪ್ರಸಾದ ನೀಡಿದರು. ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಊರ್ವಶಿ ರೌಟೇಲಾ ನೇರವಾಗಿ ರಾಮಮಂದಿರಕ್ಕೆ ತಲುಪಿ ರಾಮಲಲ್ಲಾನ ದರ್ಶನ ಪಡೆದರು.

ಅಯೋಧ್ಯೆ ರಾಮಮಂದಿರಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪ್ರಪಂಚದಾದ್ಯಂತದಿಂದ ಅನೇಕ ಪ್ರತಿಷ್ಠಿತ ವ್ಯಕ್ತಿಗಳು ಭಾಗವಹಿಸಿದ್ದರು. ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವವರು ನಂತರದ ದಿನಗಳಲ್ಲಿ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.

ಪತಿ, ಮಗಳೊಂದಿಗೆ ಭೇಟಿ ನೀಡಿದ್ದ ಪ್ರಿಯಾಂಕಾ: ಕೆಲವು ದಿನಗಳ ಹಿಂದೆ ಬಾಲಿವುಡ್​ ಹಾಗೂ ಹಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಕೂಡ ತಮ್ಮ ಪತಿ ನಿಕ್​ ಜಾನ್ಸ್​ ಹಾಗೂ ಮಗಳು ಮಾಲ್ತಿ ಜೊತೆಗೆ ಅಯೋಧ್ಯಗೆ ಭೇಟಿ ನೀಡಿ, ಶ್ರೀ ರಾಮನ ದರ್ಶನ ಪಡೆದಿದ್ದರು. ಪ್ರಿಯಾಂಕಾ ಮಗಳು ಹಾಗೂ ಪತಿಯೊಂದಿಗೆ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರು ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಅಲ್ಲದೇ ಅವರು ಭೇಟಿ ನೀಡಿದಾಗಿನ ಅಯೋಧ್ಯೆಯ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿತ್ತು. ರಾಮಮಂದಿರಕ್ಕೆ ಭೇಟಿ ನೀಡಿದ್ದ ಪ್ರಿಯಾಂಕಾ ಹಳದಿ ಸೀರೆಯುಟ್ಟು, ನಿಕ್​ ಜಾನ್ಸ್​ ಕುರ್ತಾ ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು.

ಕೇಶವ್​ ಮಹಾರಾಜ್​ ಹಾಗೂ ರವಿ ಬಿಷ್ಣೋಯ್​ ಭೇಟಿ:ಐಪಿಎಲ್​ ಆರಂಭಕ್ಕೂ ಮುನ್ನ ಲಕ್ನೋ ಸೂಪರ್​ಜೈಂಟ್ಸ್​ ತಂಡದ ಬೌಲರ್​ಗಳಾದ ಕೇಶವ್​ ಮಹಾರಾಜ್​ ಹಾಗೂ ರವಿ ಬಿಷ್ಣೋಯ್​ ಕೂಡ ಮಾರ್ಚ್​ 21 ರಂದು ರಾಮಮಂದಿರಕ್ಕೆ ಭೇಟಿ ನೀಡಿದ್ದರು. ಇವರ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ದಕ್ಷಿಣ ಆಫ್ರಿಕಾದ ಕ್ರಿಕೆಟಿಗನಾಗಿರುವ ಕೇಶವ್​ ಮಹಾರಾಜ್​ ಐಪಿಎಲ್​ನಲ್ಲಿ ಲಕ್ನೋ ಸೂಪರ್​ಜೈಂಟ್ಸ್​ ತಂಡಕ್ಕೆ ಆಡುತ್ತಿದ್ದಾರೆ.

ಇದನ್ನೂ ಓದಿ:ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ನಟ ವಿಜಯ್​: ಶೂಟಿಂಗ್​ ಲೊಕೇಶನ್​ನಿಂದ ವಿಡಿಯೋ ಶೇರ್ - Thalapathy Vijay

ABOUT THE AUTHOR

...view details