ETV Bharat / state

ಮಹಿಳೆಗೆ ಕರೆ ಮಾಡಿ 'ಒಂದನ್ನು ಒತ್ತಿ' ಎಂದ ಸೈಬರ್​ ಖದೀಮರು: ಕ್ಷಣಮಾತ್ರದಲ್ಲೇ ₹2 ಲಕ್ಷ ವಂಚನೆ - CYBER CRIME CASE

ಬ್ಯಾಂಕ್​ ವಹಿವಾಟು ಖಚಿತಪಡಿಸಿಕೊಳ್ಳುವ ಸೋಗಿನಲ್ಲಿ ಕರೆ ಮಾಡಿ ಮಹಿಳೆಯೊಬ್ಬರ ಖಾತೆಯಿಂದ ಕ್ಷಣ ಮಾತ್ರದಲ್ಲೇ 2 ಲಕ್ಷ ರೂ. ಎಗರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

CYBER CRIME CASE
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Jan 24, 2025, 3:48 PM IST

ಬೆಂಗಳೂರು: ದೊಡ್ಡ ಪ್ರಮಾಣದ ಹಣ ವರ್ಗಾವಣೆಯಾದಾಗ ಬ್ಯಾಂಕ್‌ಗಳು ಖಚಿತಪಡಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಹಕರಿಗೆ ಮೇಲ್ ಅಥವಾ ಸಂದೇಶ ಕಳುಹಿಸುವುದು ಸಾಮಾನ್ಯ. ಆದರೆ ಬ್ಯಾಂಕ್‌ಗಳ ಈ ಕ್ರಮವನ್ನೂ ದುರ್ಬಳಕೆ ಮಾಡಿಕೊಂಡ ಸೈಬರ್ ಖದೀಮರು, ನಿಮ್ಮ ವಹಿವಾಟು ಖಚಿತಪಡಿಸಿ ಎಂದು ಕರೆ ಮಾಡಿ ಮಹಿಳೆಯೊಬ್ಬರ ಖಾತೆಯಿಂದ ಕ್ಷಣ ಮಾತ್ರದಲ್ಲಿ 2 ಲಕ್ಷ ರೂ. ಎಗರಿಸಿದ ಪ್ರಕರಣ ವರದಿಯಾಗಿದೆ.

ರಾಷ್ಟ್ರೀಕೃತ ಬ್ಯಾಂಕ್‌ವೊಂದರ ಪ್ರತಿನಿಧಿಗಳು ಎಂದು ಕರೆ ಮಾಡಿದ್ದ ವಂಚಕರು ಬೆಂಗಳೂರಿನ 58 ವರ್ಷದ ಮಹಿಳೆಯೊಬ್ಬರಿಗೆ ವಂಚಿಸಿದ್ದಾರೆ. ಈ ಬಗ್ಗೆ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬ್ಯಾಂಕ್ ರಿವಾರ್ಡ್ಸ್ ಪಾಯಿಂಟ್ಸ್​ ಹೆಸರಿನ ಲಿಂಕ್ ಕ್ಲಿಕ್: HAL ಹೆಲಿಕಾಪ್ಟರ್ ವಿಭಾಗದ ಮ್ಯಾನೇಜರ್‌ ಖಾತೆಗೆ ಕನ್ನ

ದೂರಿನ ವಿವರ: ದೂರುದಾರ ಮಹಿಳೆಗೆ ಜನವರಿ 20ರಂದು ಬ್ಯಾಂಕ್ ಪ್ರತಿನಿಧಿಯ ಸೋಗಿನಲ್ಲಿ ಕರೆ ಮಾಡಿರುವ ವಂಚಕ, ''ನಿಮ್ಮ ಖಾತೆಯಿಂದ ಬೇರೆ ಖಾತೆಗೆ 2 ಲಕ್ಷ ರೂ. ಹಣ ವರ್ಗಾವಣೆಯಾಗುತ್ತಿದೆ. ಈ ಹಣವನ್ನು ನೀವೇ ವರ್ಗಾಯಿಸಿದ್ದರೆ ಮೂರನ್ನು ಒತ್ತಿ, ಇಲ್ಲವಾಗಿದ್ದಲ್ಲಿ ಒಂದನ್ನು ಒತ್ತಿ" ಎಂದಿದ್ದಾನೆ. ಗಾಬರಿಗೊಂಡ ಮಹಿಳೆ ಒಂದನ್ನು ಒತ್ತಿದ್ದಾರೆ. ಬಳಿಕ ''ನಿಮ್ಮ ಬ್ಯಾಂಕ್ ಮ್ಯಾನೇಜರ್‌ನ ಸಂಪರ್ಕಿಸಿ'' ಎಂದು ಕರೆ ಸ್ಥಗಿತಗೊಳಿಸಿದ್ದಾರೆ. ಅನುಮಾನದ ಮೇಲೆ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ತಮ್ಮ ಖಾತೆಯಲ್ಲಿನ 2 ಲಕ್ಷ ರೂ. ವಂಚಕರ ಖಾತೆಗೆ ವರ್ಗಾವಣೆಯಾಗಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಹೀಗೂ ಮಾಡ್ತಾರೆ ಹುಷಾರ್​: ಬೆಂಗಳೂರಿನ ಟೆಕ್ಕಿಗೆ ಮೊಬೈಲ್ ಫೋನ್ ಗಿಫ್ಟ್ ಕಳುಹಿಸಿ ₹2.8 ಕೋಟಿ ವಂಚನೆ - ಸೈಬರ್ ವಂಚಕರ ಹೊಸ ವರಸೆ

ತಕ್ಷಣ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ (1930) ಗೆ ಪ್ರಾಥಮಿಕ ದೂರು ಸಲ್ಲಿಸಿರುವ ಮಹಿಳೆ, ನಂತರ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಳ್ಳಲಾಗುತ್ತಿದೆ. ಈ ರೀತಿಯ ಕರೆಗಳು ಬಂದಾಗ ಸಾರ್ವಜನಿಕರು ಅವರು ಹೇಳುವುದನ್ನು ಮಾಡದೇ ನೇರವಾಗಿ ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿಕೊಳ್ಳಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ನಕಲಿ ವೆಬ್​ಸೈಟ್​ಗಳ ಬಗ್ಗೆ ಇರಲಿ ಎಚ್ಚರಿಕೆ; ಹಾಗಿದ್ರೆ ಮಾತ್ರ ಸೈಬರ್​ ವಂಚನೆಯಿಂದ ಬಚಾವ್​ ಆಗಲು ಸಾಧ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.