ಬೆಂಗಳೂರು: ಅನುಮತಿ ಪಡೆಯದೇ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಟ್ರೇಲರ್ ಹಾಗೂ ಪ್ರಮೋಶನಲ್ ಕಂಟೆಂಟ್ಗಳಲ್ಲಿ ತಮ್ಮ ದೃಶ್ಯಗಳನ್ನು ಬಳಸಿರುವುದಾಗಿ ಆರೋಪಿಸಿ, ಸಿನಿಮಾ ಬಿಡುಗಡೆಗೆ ತಡೆ ಕೋರಿ ನಟಿ ರಮ್ಯಾ ನ್ಯಾಯಾಲಯದ ಕದ ತಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಟಿ ಕೋರ್ಟ್ಗೆ ಹಾಜರಾಗಿದ್ದರು.
ಸಿನಿಮಾ ಇಂಡಸ್ಟ್ರಿಗೆ ಯಾವಾಗ? ಚಿತ್ರರಂಗ ಮರುಪ್ರವೇಶದ ಬಗ್ಗೆ ಮಾಧ್ಯಮಗಳಿಂದ ಪ್ರಶ್ನೆಗಳು ಎದುರಾದವು. ಅದಕ್ಕೆ ಪ್ರತಿಕ್ರಿಯಿಸಿದ ನಟಿ, ಒಂದೊಳ್ಳೆ ಸ್ಕ್ರಿಪ್ಟ್ ಸಿಕ್ಕಿದ್ರೆ ಖಂಡಿತವಾಗಿಯೂ ನಾನು ಸಿನಿಮಾ ಮಾಡುತ್ತೇನೆ. ಆದ್ರೆ ಇಲ್ಲಿವರೆಗೂ ನನಗೆ ಒಳ್ಳೆ ಸ್ಕ್ರಿಪ್ಟ್ ಸಿಕ್ಕಿಲ್ಲ ಎಂದು ತಿಳಿಸಿದರು. ಜೊತೆಗೆ, ಎಲ್ಲರಿಗೂ ಹೊಸ ವರ್ಷದ ಶುಭಾಶಯ ಕೋರಿದರು.
ರಾಜಕೀಯಕ್ಕೆ ಎಂಟ್ರಿ? ರಾಜಕೀಯ ಪ್ರವೇಶದ ಕುರಿತಾಗಿಯೂ ಪ್ರಶ್ನೆಗಳು ಎದುರಾದವು. ಅದಕ್ಕೆ ಸದ್ಯಕ್ಕೇನೂ ಇಲ್ಲ ಎಂದು ತಿಳಿಸಿದರು.
ನಟಿ ರಮ್ಯಾ (Photo: ETV Bharat) ಸಂಜು ವೆಡ್ಸ್ ಗೀತಾ 2 ರಿಲೀಸ್ ಗೊತ್ತಿರಲಿಲ್ಲ: ಇನ್ನೂ, ಯುಐ ಮತ್ತು ಮ್ಯಾಕ್ಸ್ ಯಶ ಕಂಡಿದ್ದು, ನನಗೆ ಬಹಳ ಖಷಿಯಾಗಿದೆ. ಮಹಿಳಾ ಪ್ರಧಾನ ಚಿತ್ರಗಳೂ ಬರಬೇಕಿದೆ ಎಂದು ತಿಳಿಸಿದರು. ಸಂಜು ವೆಡ್ಸ್ ಗೀತಾ 2 ಬಗ್ಗೆ ಪ್ರಶ್ನೆಗಳು ಎದುರಾದಾಗ ನನಗೆ ಈ ವಿಷಯ ಗೊತ್ತಿರಲಿಲ್ಲ. ಆದ್ರೆ ಸಿನಿಮಾ ಬಿಡುಗಡೆಯಾಗುತ್ತಿರುವುದು ಖುಷಿಯಾಗುತ್ತಿದೆ. ಚಿತ್ರಕ್ಕೆ ನನ್ನ ಶುಭ ಹಾರೈಕೆಗಳು. ಚಿತ್ರತಂಡಕ್ಕೆ ಒಳ್ಳೇದಾಗ್ಲಿ ಎಂದು ಶುಭ ಹಾರೈಸಿದರು.
ಇದನ್ನೂ ಓದಿ:ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿದ್ರೂ ಆಸ್ಕರ್ಗೆ ಎಂಟ್ರಿ; ಇದು ಸೂರ್ಯ ನಟನೆಯ 'ಕಂಗುವ' ಸಾಧನೆ
ಸ್ಯಾಂಡಲ್ವುಡ್ ಸೂಪರ್ ಸ್ಟಾರ್ಗಳಾದ ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಮುಖ್ಯಭೂಮಿಕೆಯ ಸಂಜು ವೆಡ್ಸ್ ಗೀತಾ 2 ಜನವರಿ 10, ಇದೇ ಶುಕ್ರವಾರದಂದು ಪ್ರಪಂಚದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ನಾಗಶೇಖರ್ ನಿರ್ದೇಶನದ ಸಿನಿಮಾ ಗೆಲ್ಲುವ ಎಲ್ಲಾ ಲಕ್ಷಣಗಳಿವೆ. ಚಿತ್ರದ ಮೊದಲ ಭಾಗ 2011ರ ಏಪ್ರಿಲ್ 1ರಂದು ತೆರೆಕಂಡು ಸೂಪರ್ ಹಿಟ್ ಆಗಿತ್ತು. ನಾಗಶೇಖರ್ ನಿರ್ದೇಶನದ ಮೊದಲ ಭಾಗದಲ್ಲೂ ಶ್ರೀನಗರ ಕಿಟ್ಟಿ ಅಭಿನಯಿಸಿದ್ದರು. ಇವರಿಗೆ ಜೋಡಿಯಾಗಿ ರಮ್ಯಾ ಕಾಣಿಸಿಕೊಂಡಿದ್ದರು.
ಮದುವೆ ವದಂತಿ:ಸೋಷಿಯಲ್ ಮೀಡಿಯಾದಲ್ಲಿ ಮದುವೆ ಬಗ್ಗೆ ಆಗಾಗ್ಗೆ ಸದ್ದಾಗುತ್ತಿರುತ್ತದೆ ಎಂಬ ಮಾಧ್ಯಮದವರ ಪ್ರಶ್ನೆಗೆ, ನೋ... ಆ ವಿಷಯ ಎಂದು ಹೇಳುತ್ತಾ ಹೊರಟೇ ಬಿಟ್ಟರು.
ಏನಿದು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಪ್ರಕರಣ?2024ರ ಜುಲೈನಲ್ಲಿಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಇಂದು ನಗರದ ವಾಣಿಜ್ಯ ವ್ಯವಹಾರಗಳ ನ್ಯಾಯಾಲಯದ ಸಂಕೀರ್ಣಕ್ಕೆ ನಟಿ ರಮ್ಯಾ ಅವರು ಹಾಜರಾಗಿದ್ದರು. ನಿತಿನ್ ಕೃಷ್ಣಮೂರ್ತಿ ನಿರ್ದೇಶನ ಹಾಗೂ ವರುಣ್ ಹಾಗೂ ಪ್ರಜ್ವಲ್ ಬಿ.ಪಿ ನಿರ್ಮಾಣದ ಈ ಚಿತ್ರದಲ್ಲಿ ಪ್ರಾಧ್ಯಾಪಕರ ಪಾತ್ರದಲ್ಲಿ ರಮ್ಯಾ ಕಾಣಿಸಿಕೊಂಡಿದ್ದರು. ಕೇವಲ ಸಿನಿಮಾದ ಪ್ರೋಮೋ ಶೂಟ್‌ಗಾಗಿ ಅಷ್ಟೇ ಚಿತ್ರೀಕರಿಸಲು ಅನುಮತಿ ಕೊಟ್ಟಿದ್ದೆ ಅನ್ನೋದು ನಟಿಯ ಮಾತು. ಆದರೆ, ಚಿತ್ರತಂಡ ಟ್ರೇಲರ್ ಹಾಗೂ ಸಿನಿಮಾದಲ್ಲಿ ದೃಶ್ಯಗಳನ್ನು ಬಳಸಿಕೊಂಡಿದ್ದಾರೆಂಬ ಆರೋಪ ಹೊರಿಸಿದ್ದಾರೆ.
ಇದನ್ನೂ ಓದಿ:ಸಂಧ್ಯಾ ಥಿಯೇಟರ್ ಕಾಲ್ತುಳಿತ: ಆಸ್ಪತ್ರೆಗೆ ತೆರಳಿ ಗಾಯಾಳು ಬಾಲಕನ ಆರೋಗ್ಯ ವಿಚಾರಿಸಿದ ಅಲ್ಲು ಅರ್ಜುನ್
ತಮ್ಮ ಅನುಮತಿ ಪಡೆಯದೇ ದೃಶ್ಯಗಳನ್ನು ಬಳಕೆ ಮಾಡಿಕೊಂಡಿರುವುದರ ವಿರುದ್ಧ ಅರ್ಜಿ ಸಲ್ಲಿಸಿರುವ ರಮ್ಯಾ, ಸಿನಿಮಾ ರಿಲೀಸ್‌ಗೆ ತಡೆಯಾಜ್ಞೆ ನೀಡಬೇಕು ಮತ್ತು ಒಂದು ಕೋಟಿ ರೂಪಾಯಿ ಪರಿಹಾರ ನೀಡುವಂತೆ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು. ಅಲ್ಲದೇ, ತಮ್ಮ ಅನುಮತಿ ಪಡೆಯದೇ ಬಳಕೆ ಮಾಡಿಕೊಂಡಿರುವ ದೃಶ್ಯಗಳನ್ನು ತೆಗೆದುಹಾಕಬೇಕು ಎಂದು ಕೋರಿದ್ದರು. ಸದ್ಯ ಪ್ರಕರಣ ನ್ಯಾಯಾಲಯದಲ್ಲಿರೋದ್ರಿಂದ ಈ ಬಗ್ಗೆ ಮಾಹಿತಿ ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.