ಕರ್ನಾಟಕ

karnataka

ETV Bharat / entertainment

ನನ್ನಿಷ್ಟದಂತೆ ಮದುವೆ ಆಗಿದ್ದೇನೆ, ಗುಟ್ಟಾಗಿ ವಿವಾಹ ಆಗಿಲ್ಲ: ನಟಿ ದೀಪಿಕಾ ದಾಸ್​ - Deepika Das

ಕಿರುತೆರೆ ನಟಿ ದೀಪಿಕಾ ದಾಸ್​ ತಮ್ಮ ಮದುವೆ ಮತ್ತು ತಮ್ಮ ಪತಿ ಕುರಿತು ಸಾಕಷ್ಟು ವಿಚಾರಗಳನ್ನು ಮಾಧ್ಯಮದವರ ಜೊತೆ ಹಂಚಿಕೊಂಡಿದ್ದಾರೆ.

ನಟಿ ದೀಪಿಕಾ ದಾಸ್
ನಟಿ ದೀಪಿಕಾ ದಾಸ್

By ETV Bharat Karnataka Team

Published : Mar 13, 2024, 8:06 AM IST

Updated : Mar 13, 2024, 8:46 AM IST

ಬೆಂಗಳೂರು:ಕನ್ನಡ ಕಿರುತೆರೆಯಲ್ಲಿ ನಾಗಿಣಿಸೀರಿಯಲ್ ಮೂಲಕ ಮನಗೆದ್ದ ನಟಿ ದೀಪಿಕಾ ದಾಸ್​ ಅವರು ಇತ್ತೀಚೆಗೆ ಉದ್ಯಮಿ ದೀಪಕ್​ ಎಂಬುವರ ಜೊತೆ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ಎಲ್ಲರಿಗೂ ಗೊತ್ತೆ ಇದೆ. ಇದು ಅನೇಕರಿಗೆ ಇದು ಸರ್ಪ್ರೈಸ್​ ಎನಿಸಿತ್ತು. ಯಾರು ಈ ದೀಪಕ್? ಇದು ಲವ್ ಮ್ಯಾರೇಜಾ, ಅರೆಂಜ್ ಮ್ಯಾರೇಜಾ ಅಂತೆಲ್ಲ ಡೌಟ್‌ಗಳಿದ್ದವು. ಇದೀಗ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆರತಕ್ಷತೆಯನ್ನು ಆಚರಿಸಿಕೊಂಡಿರುವ ನಟಿ ದೀಪಿಕಾ, ತಮ್ಮ ಪತಿ ದೀಪಕ್​ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿದ್ದಾರೆ. ಜೊತೆಗೆ ತಮ್ಮ ಮದುವೆ ಬಗ್ಗೆಯು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ದೀಪಿಕಾ ದಾಸ್ "ನನ್ನಿಷ್ಟದಂತೆ ಮದುವೆ ನಡೆದಿದೆ. ನನಗೆ ತುಂಬಾ ಹಿಂದಿನಿಂದಲೂ ಡೆಸ್ಟಿನೇಷನ್​ ವೆಡ್ಡಿಂಗ್​ ಆಗಬೇಕು. ತುಂಬಾ ಚಿಕ್ಕ ಸಮಾರಂಭದಲ್ಲಿ ನಮ್ಮ ಫ್ಯಾಮಿಲಿ ಜೊತೆಗೆ ನಾನು ಅಂದುಕೊಂಡಂತೆ ಮದುವೆ ಆಗಬೇಕು ಅನ್ನೋದು ಆಸೆ ಆಗಿತ್ತು. ಆದರೆ ನನ್ನ ಪತಿ ದೀಪಕ್​ರದ್ದು ದೊಡ್ಡ ಫ್ಯಾಮಿಲಿ, ಎಲ್ಲರೂ ಬೆಂಗಳೂರಿನಲ್ಲೇ ಇದ್ದಾರೆ. ಹಾಗಾಗಿ, ಇದು ಆಗುತ್ತಾ ಇಲ್ಲವೋ ಅಂತ ಅನುಮಾನ ಇತ್ತು. ಆದರೂ ನನಗೆ ಬೆಂಬಲಿಸಿ, ನನ್ನಿಷ್ಟದಂತೆ ಮದುವೆ ಮಾಡಿಕೊಂಡರು. ನನಗೆ ತುಂಬ ಖುಷಿಯಾಗಿದೆ"ಎಂದರು.

ನಟಿ ದೀಪಿಕಾ ದಾಸ್​ ಮದುವೆ

"ಗೋವಾದಲ್ಲಿ ಮದುವೆ ಆಗೋಣ ಅಂದಾಗ ತುಂಬ ಕಷ್ಟ ಆಗುತ್ತೆ ಅನ್ನಿಸಿತ್ತು. ಆದರೂ 4-5 ತಿಂಗಳು ಅದಕ್ಕಾಗಿಯೇ ಕಷ್ಟಪಟ್ಟರು. ನಾನೂ ಕೂಡ ತಿಂಗಳಲ್ಲಿ ಎರಡು-ಮೂರು ಸಲ ಗೋವಾಗೆ ಹೋಗಿ ಬಂದು, ಎಲ್ಲ ಪ್ಲ್ಯಾನ್​ ಮಾಡಿದೆವು. ಊಟ, ಈವೆಂಟ್​ ಮ್ಯಾನೇಜ್‌ಮೆಂಟ್​ ಎಲ್ಲವನ್ನೂ ಮೊದಲೇ ರೆಡಿ ಮಾಡಿಕೊಂಡಿದ್ದೆವು. ಈ ಮದುವೆ ಸಡನ್​ ಪ್ಲ್ಯಾನ್ ಅಲ್ಲ. ನಾವು ಗುಟ್ಟಾಗಿ ಮದುವೆ ಆಗಿಲ್ಲ, ನಾವು ಟೈಮ್ ತಗೊಂಡಿದ್ದೇವೆ" ಎಂದು ತಿಳಿಸಿದರು.

"ನನಗೂ ಮತ್ತು ದೀಪಕ್​ ಅವರಿಗೂ ನಾಲ್ಕೈದು ವರ್ಷಗಳ ಪರಿಚಯ. ನಮಗೆ ಡೇಟ್​ ಮಾಡಬೇಕು. ಮದುವೆ ಆಗಬೇಕು ಎಂಬ ಯಾವ ಯೋಚನೆ​ ಕೂಡ ಇರಲಿಲ್ಲ. ಕಳೆದ ವರ್ಷ ಈ ಬಗ್ಗೆ ಮಾತುಕತೆ ಬಂದಾಗ, ಮೊದಲು ಡೇಟ್​ ಮಾಡೋಣ, ನಮ್ಮಿಬ್ಬರಿಗೆ ಸರಿಯಾಗುತ್ತೋ ಇಲ್ವೋ ಎಂದು ಯೋಚನೆ ಮಾಡೋಣ ಎಂದುಕೊಂಡೆವು. ಫೈನಲಿ, ಡೇಟಿಂಗ್​ ಬಳಿಕ ಒಂದು ವರ್ಷ ಆದ ಮೇಲೆ ಎಲ್ಲ ಸರಿ ಆಗುತ್ತಿದೆ, ಇನ್ನೂ ತಡ ಮಾಡುವುದೇಕೆ ಎಂದು ಅನಿಸಿ ಮದುವೆಯಾಗಲು ನಿರ್ಧರಿಸಿದೆವು. ಮೊದಲು ಕುಟುಂಬ ಸದಸ್ಯರ ಮಧ್ಯೆ ಮದುವೆ ಆಗೋಣ, ಆಮೇಲೆ ಆರತಕ್ಷತೆ ಅಥವಾ ಬೀಗರೂಟ ಕಾರ್ಯಕ್ರಮ ಮಾಡೋಣ ಎಂದುಕೊಂಡಿದ್ದೆವು" ಎಂದು ತಮ್ಮ ಮದುವೆ ಕುರಿತು ವಿವರಿಸಿದರು.

ನಟಿ ದೀಪಿಕಾ ದಾಸ್​ ಮದುವೆ

ಇತ್ತೀಚೆಗೆ ಬೆಂಗಳೂರು ನಗರದ ಖಾಸಗಿ ರೆಸಾರ್ಟ್​ನಲ್ಲಿ ದೀಪಿಕಾ ದಾಸ್ ಹಾಗೂ ದೀಪಕ್ ದಂಪತಿಯ ಆರತಕ್ಷತೆ ಹಾಗೂ ಬೀಗರೂಟ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಅನುಪಮ ಗೌಡ, ವಾಸುಕಿ ವೈಭವ್​, ದಿವ್ಯಾ ಉರುಡುಗ, ಕಿಶನ್​, ನೀತು, ಪ್ರಿಯಾಂಕಾ ಮುಂತಾದ‌ ಮಿತ್ರರು, ಆತ್ಮೀಯರು ಹಾಗೂ ಬಂಧು ಬಳಗದವರು ಆರತಕ್ಷತೆಗೆ ಸಾಕ್ಷಿಯಾದರು.

ಇದನ್ನೂ ಓದಿ:ಪುಲ್ಕಿತ್​​​ ಕೈ ಹಿಡಿಯಲಿರುವ 'ಗೂಗ್ಲಿ' ಬೆಡಗಿ: ಮದುವೆ ಸ್ಥಳಕ್ಕೆ ತೆರಳಿದ ಕೃತಿ ಖರಬಂದ - ವಿಡಿಯೋ

Last Updated : Mar 13, 2024, 8:46 AM IST

ABOUT THE AUTHOR

...view details