ಕರ್ನಾಟಕ

karnataka

ETV Bharat / business

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ಬಂಗಾರದ ದರ ಎಷ್ಟು? : ತಿಳಿಯಲು ಇಲ್ಲಿ ಕ್ಲಿಕ್​ ಮಾಡಿ - Gold Rate Today - GOLD RATE TODAY

ಇಂದಿನ ಚಿನ್ನ ಮತ್ತು ಬೆಳ್ಳಿಯ ದರ ಹೇಗಿದೆ. ಪೆಟ್ರೋಲ್​, ಡೀಸೆಲ್​ ಬೆಲೆ, ಸ್ಟಾಕ್​ ಮಾರ್ಕೆಟ್​ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

Today's gold rate in major cities of the Karnataka state: Silver rate on the decline
ರಾಜ್ಯದ ಪ್ರಮುಖ ನಗರಗಳ ಇಂದಿನ ಬಂಗಾರದ ದರ: ಇಳಿಕೆ ಕಂಡ ಬೆಳ್ಳಿ ದರ (ETV Bharat)

By ETV Bharat Karnataka Team

Published : Jun 19, 2024, 12:12 PM IST

ಬೆಂಗಳೂರು/ಹೈದರಾಬಾದ್​: ದೇಶದಲ್ಲಿ ಇಂದು ಚಿನ್ನದ ದರ ಸ್ಥಿರವಾಗಿದ್ದು, ಬೆಳ್ಳಿ ಬೆಲೆಯಲ್ಲಿ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ. ಮಂಗಳವಾರ 10 ಗ್ರಾಂ ಚಿನ್ನದ ಬೆಲೆ 73,950 ರೂ.ಗಳಾಗಿದ್ದರೆ, ಬುಧವಾರದಂದು 73,950 ರೂ. ಅಷ್ಟೇ ಇದೆ. ಮಂಗಳವಾರ ಪ್ರತಿ ಕೆ.ಜಿ ಬೆಳ್ಳಿ ಬೆಲೆ 91,023 ರೂ.ಗಳಾಗಿದ್ದರೆ, ಬುಧವಾರ 208 ರೂ.ನಷ್ಟು ಇಳಿಕೆ ಕಂಡಿದೆ. ಇಂದು ಬೆಳ್ಳಿ ಬೆಲೆ 90,815 ರೂ.ಗೆ ತಲುಪಿದೆ. ದೇಶ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿವೆ.

ನಗರ ತೂಕ ಕ್ಯಾರೆಟ್ ​ ದರ
ಬೆಂಗಳೂರು 10 ಗ್ರಾಂ 24 ಕ್ಯಾರೆಟ್ 72,220 ರೂ.
10 ಗ್ರಾಂ 22 ಕ್ಯಾರೆಟ್ 66,200 ರೂ.
10 ಗ್ರಾಂ 18 ಕ್ಯಾರೆಟ್ 54,160 ರೂ.
ಮಂಗಳೂರು 10 ಗ್ರಾಂ 24 ಕ್ಯಾರೆಟ್ 72,220 ರೂ.
10 ಗ್ರಾಂ 22 ಕ್ಯಾರೆಟ್ 66,200 ರೂ.
10 ಗ್ರಾಂ 18 ಕ್ಯಾರೆಟ್ 54,160 ರೂ.
ಮೈಸೂರು 10 ಗ್ರಾಂ 24 ಕ್ಯಾರೆಟ್ 72,220 ರೂ.
10 ಗ್ರಾಂ 22 ಕ್ಯಾರೆಟ್ 66,200 ರೂ.
10 ಗ್ರಾಂ 18 ಕ್ಯಾರೆಟ್ 54,160 ರೂ.

ಮೇಲಿನವುಗಳು ಚಿನ್ನದ ದರಗಳಾಗಿದ್ದು, ಜಿಎಸ್​ಟಿ, ಟಿಎಸ್​ಸಿ ಮತ್ತು ಇತರ ಲೆವಿಗಳನ್ನು ಒಳಗೊಂಡಿರುವುದಿಲ್ಲ. ನಿಖರವಾದ ದರಗಳಿಗಾಗಿ ನಿಮ್ಮ ಸ್ಥಳೀಯ ಆಭರಣ ಮಳಿಗೆಗಳನ್ನು ಸಂಪರ್ಕಿಸಿ.

ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ:

ನಗರ ಚಿನ್ನ ದರ ಬೆಳ್ಳಿ ದರ
ಹೈದರಾಬಾದ್‌ 10 ಗ್ರಾಂ 73,950 ರೂ. 1ಕೆಜಿ 90,815 ರೂ.
ವಿಜಯವಾಡ 10 ಗ್ರಾಂ 73,950 ರೂ. 1ಕೆಜಿ 90,815 ರೂ.
ವಿಶಾಖಪಟ್ಟಣಂ 10 ಗ್ರಾಂ 73,950 ರೂ. 1ಕೆಜಿ 90,815 ರೂ.
ಪ್ರದ್ದತ್ತೂರು 10 ಗ್ರಾಂ 73,950 ರೂ. 1ಕೆಜಿ 90,815 ರೂ.

ಗಮನಿಸಿ:ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾಗುತ್ತವೆ.

ಸ್ಪಾಟ್ ಚಿನ್ನದ ದರ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಸ್ವಲ್ಪಮಟ್ಟಿಗೆ ಹೆಚ್ಚಿವೆ. ಮಂಗಳವಾರ, ಒಂದು ಔನ್ಸ್ ಚಿನ್ನದ ಬೆಲೆ 2,325 ಡಾಲರ್‌ಗಳಷ್ಟಿತ್ತು, ಆದರೆ ಬುಧವಾರದ ವೇಳೆಗೆ ಅದು 4 ಡಾಲರ್‌ಗಳಷ್ಟು ಏರಿಕೆಯಾಗಿ 2,329 ಡಾಲರ್‌ಗೆ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 29.44 ಡಾಲರ್ ಆಗಿದೆ.

ಕ್ರಿಪ್ಟೋ ದರ: ಕ್ರಿಪ್ಟೋಕರೆನ್ಸಿ ವಹಿವಾಟು ಸೋಮವಾರ ಸಮತೋಲನದಲ್ಲಿದೆ. ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಪ್ರಸ್ತುತ ಮೌಲ್ಯ ರೂಪಾಯಿ ದರದಲ್ಲಿ ಹೀಗಿದೆ.

ಕ್ರಿಪ್ಟೋ ಕರೆನ್ಸಿ ಪ್ರಸ್ತುತ ದರ
ಬಿಟ್​ ಕಾಯಿನ್​ 51,00,106 ರೂ.
ಎಥೆರೆಮ್ 2,57,777 ರೂ.
ಟೆಥರ್ 79.13 ರೂ.
ಬಿನನ್ಸ್​ ಕಾಯಿನ್ 49,636 ರೂ.
ಸೊಲೊನಾ 11,585 ರೂ.

ಸ್ಟಾಕ್ ಮಾರ್ಕೆಟ್: ದೇಶೀಯ ಸ್ಟಾಕ್ ಮಾರುಕಟ್ಟೆಗಳು ಬುಧವಾರ ಲಾಭದಿಂದ ಪ್ರಾರಂಭಗೊಂಡಿದ್ದು, ಆರಂಭಿಕ ವಹಿವಾಟಿನಲ್ಲಿ ಎರಡೂ ಪ್ರಮುಖ ಸೂಚ್ಯಂಕಗಳು ತಾಜಾ ಗರಿಷ್ಠ ಮಟ್ಟವನ್ನು ತಲುಪಿವೆ. ಪ್ರಸ್ತುತ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 186 ಅಂಕ ಏರಿಕೆಯೊಂದಿಗೆ 77,487ರಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 40 ಅಂಕಗಳ ಏರಿಕೆ ಕಂಡು 23,598ಕ್ಕೆ ತಲುಪಿದೆ.

ಲಾಭದಲ್ಲಿ ಮುಂದುವರಿಯುತ್ತಿರುವ ಷೇರುಗಳು: ಇಂಡಸ್‌ಇಂಡ್ ಬ್ಯಾಂಕ್, ಜೆಎಸ್‌ಡಬ್ಲ್ಯೂ ಸ್ಟೀಲ್, ಐಸಿಐಸಿಐ ಬ್ಯಾಂಕ್, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಇನ್ಫೋಸಿಸ್, ಆಕ್ಸಿಸ್ ಬ್ಯಾಂಕ್, ಐಟಿಸಿ, ಟಿಸಿಎಸ್, ಎಸ್‌ಬಿಐ, ಕೋಟಕ್ ಮಹೀಂದ್ರಾ ಬ್ಯಾಂಕ್.

ನಷ್ಟದ ಷೇರುಗಳು:ಟೈಟಾನ್, NTPC, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್, M&M, L&T, ಭಾರ್ತಿ ಏರ್‌ಟೆಲ್, ಏಷ್ಯನ್ ಪೇಂಟ್ಸ್, ಟೆಕ್ ಮಹೀಂದ್ರಾ, ಪವರ್‌ಗ್ರಿಡ್ ಷೇರುಗಳು

ರೂಪಾಯಿ ಮೌಲ್ಯ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಸ್ಥಿರವಾಗಿ ವಹಿವಾಟು ನಡೆಸುತ್ತಿದೆ. ಪ್ರಸ್ತುತ, ಡಾಲರ್ ಎದುರು ರೂಪಾಯಿ ವಿನಿಮಯ ದರ 85.34 ರೂ. ಆಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ: ಬೆಂಗಳೂರಿನಲ್ಲಿ ಲೀಟರ್​ ಡೀಸೆಲ್​ ಬೆಲೆ 88.94 ರೂ., ಪೆಟ್ರೋಲ್​ ಬೆಲೆ 102.86 ರೂಪಾಯಿ., ಹೈದರಾಬಾದ್​ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.39 ರೂ., ಡೀಸೆಲ್ ಬೆಲೆ 95.63 ರೂ., ವಿಶಾಖಪಟ್ಟಣಂನಲ್ಲಿ ಲೀಟರ್ ಪೆಟ್ರೋಲ್ ಬೆಲೆ 108.27 ರೂ., ಡೀಸೆಲ್ ಬೆಲೆ 96.16 ರೂ., ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ.94.76 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ರೂ.87.66 ಆಗಿದೆ.

ಇದನ್ನೂ ಓದಿ:ಆಭರಣ ಪ್ರಿಯರಿಗೆ ಗುಡ್​ ನ್ಯೂಸ್​: ಮತ್ತೆ 1900 ರೂ. ಇಳಿಕೆ ಕಂಡ ಬಂಗಾರದ ಬೆಲೆ: ನಿಮ್ಮೂರಲ್ಲಿ ಎಷ್ಟಿದೆ ದರ? - Gold and silver Rates in Bengaluru

ABOUT THE AUTHOR

...view details