ನವದೆಹಲಿ: ಗುರುವಾರದ ವಹಿವಾಟಿನಲ್ಲಿ ಭಾರತದ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ತಲಾ 1 ಪ್ರತಿಶತದಷ್ಟು ಕುಸಿತದೊಂದಿಗೆ ಕೊನೆಗೊಂಡಿವೆ.
30 ಷೇರುಗಳ ಸೆನ್ಸೆಕ್ಸ್ 964.15 ಪಾಯಿಂಟ್ ಅಥವಾ ಶೇಕಡಾ 1.20 ರಷ್ಟು ಕುಸಿದು 79,218.05 ರಲ್ಲಿ ಕೊನೆಗೊಂಡಿತು. ಸೂಚ್ಯಂಕವು 79,516.17 ರಿಂದ 79,020.08 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.
ಅದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 247.15 ಅಂಕಗಳ ನಷ್ಟದೊಂದಿಗೆ 23,951.70 ರಲ್ಲಿ ಕೊನೆಗೊಂಡಿತು. ನಿಫ್ಟಿ 50 24,004.90 ರಿಂದ 23,870.30 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.
ಏರಿಕೆ: ನಿಫ್ಟಿ 50ಯ 50 ಘಟಕ ಷೇರುಗಳಲ್ಲಿ 36 ಇಳಿಕೆಯೊಂದಿಗೆ ಕೊನೆಗೊಂಡವು. ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಏಷ್ಯನ್ ಪೇಂಟ್ಸ್, ಜೆಎಸ್ ಡಬ್ಲ್ಯೂ ಸ್ಟೀಲ್ ಮತ್ತು ಗ್ರಾಸಿಮ್ ಷೇರುಗಳು ಶೇ 2.33ರಷ್ಟು ಇಳಿಕೆ ಕಂಡಿವೆ. ಮತ್ತೊಂದೆಡೆ ಡಾ.ರೆಡ್ಡೀಸ್, ಸಿಪ್ಲಾ, ಬಿಪಿಸಿಎಲ್, ಸನ್ ಫಾರ್ಮಾ ಮತ್ತು ಅಪೊಲೊ ಆಸ್ಪತ್ರೆ ಸೇರಿದಂತೆ 14 ಘಟಕ ಷೇರುಗಳು ಶೇಕಡಾ 4.04 ರಷ್ಟು ಏರಿಕೆ ಕಂಡವು.
ಇಳಿಕೆ: ನಿಫ್ಟಿ ಮಿಡ್ ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕಗಳು ಕ್ರಮವಾಗಿ ಶೇಕಡಾ 0.28 ಮತ್ತು ಶೇಕಡಾ 0.51 ರಷ್ಟು ಕುಸಿದವು. ನಿಫ್ಟಿ ಫಾರ್ಮಾ ಮತ್ತು ಹೆಲ್ತ್ ಕೇರ್ ಹೊರತುಪಡಿಸಿ ಎಲ್ಲಾ ವಲಯ ಸೂಚ್ಯಂಕಗಳು ಇಳಿಕೆಯೊಂದಿಗೆ ಕೊನೆಗೊಂಡವು. ಎನ್ಎಸ್ಇಯ ಎಲ್ಲಾ ಬ್ಯಾಂಕಿಂಗ್ ಸೂಚ್ಯಂಕಗಳು, ಐಟಿ, ಹಣಕಾಸು ಸೇವೆಗಳು, ಗ್ರಾಹಕ ಬಾಳಿಕೆ ಬರುವ ವಸ್ತುಗಳು ಮತ್ತು ಲೋಹ ತಲಾ 1 ಪ್ರತಿಶತದಷ್ಟು ಕುಸಿದವು.
₹4 ಲಕ್ಷ ಕೋಟಿ ನಷ್ಟ: ಇಂದಿನ ವಹಿವಾಟಿನಲ್ಲಿ ಹೂಡಿಕೆದಾರರು ಸುಮಾರು 4 ಲಕ್ಷ ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ. ಇಂದಿನ ವಹಿವಾಟಿನಲ್ಲಿ ಬಿಎಸ್ಇ-ಲಿಸ್ಟೆಡ್ ಎಲ್ಲಾ ಷೇರುಗಳ ಸಂಚಿತ ಮಾರುಕಟ್ಟೆ ಬಂಡವಾಳೀಕರಣವು 4,49,94,214.99 ಕೋಟಿ ರೂ.ಗೆ (ಅಥವಾ 450 ಲಕ್ಷ ಕೋಟಿ ರೂ.) ಇಳಿದಿದೆ. ಬುಧವಾರ ಇದು 45,399,764.79 ಕೋಟಿ ರೂ.(ಅಥವಾ 454 ಲಕ್ಷ ಕೋಟಿ ರೂ.) ಆಗಿತ್ತು.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (ಎನ್ಎಸ್ಇ) ಯುಎಸ್ ಡಾಲರ್ ವಿರುದ್ಧ ಭಾರತೀಯ ರೂಪಾಯಿ 18 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ 85.12 ಕ್ಕೆ ತಲುಪಿದೆ.
ಇದನ್ನೂ ಓದಿ : 10 ವರ್ಷಗಳಲ್ಲಿ ಡೇಟಾ ದರ 269ರಿಂದ 9 ರೂ.ಗೆ ಇಳಿಕೆ; ಬ್ರಾಡ್ ಬ್ಯಾಂಡ್ ವೇಗ ಶೇ 72ರಷ್ಟು ಏರಿಕೆ - MOBILE DATA COST IN INDIA