Ind vs Pak Virat Kohli : ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 14 ರನ್ ಗಳಿಸುತ್ತಿದ್ದಂತೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದುಬಿದ್ದಿದೆ.
ದುಬೈನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿರುವ ಪಾಕಿಸ್ತಾನ 241 ರನ್ ಗಳಿಸಿ ಆಲೌಟ್ ಆಗಿದೆ. ಈ ಗುರಿಯನ್ನು ಬೆನ್ನತ್ತಿದ್ದ ಭಾರತ, 3 ವಿಕೆಟ್ ಕಳೆದುಕೊಂಡು ಗುರಿಯನ್ನು ಸುಲಭವಾಗಿ ತಲುಪಿ ಪಾಕಿಸ್ತಾನವನ್ನು ತಂಡವನ್ನು ಮಣಿಸಿತು. ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ (20), ಶುಭಮನ್ ಗಿಲ್ (46) ಪೆವಿಲಿಯನ್ ಸೇರಿದರು. ಶ್ರೇಯಸ್ ಅಯ್ಯರ್ 56 ರನ್ ಗಳಿಸಿ ಔಟ್ ಆದರು. ಪಾಂಡ್ಯ ಸಹ ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು.
1⃣4⃣0⃣0⃣0⃣ ODI RUNS for Virat Kohli 🫡🫡
— BCCI (@BCCI) February 23, 2025
And what better way to get to that extraordinary milestone 🤌✨
Live ▶️ https://t.co/llR6bWyvZN#TeamIndia | #PAKvIND | #ChampionsTrophy | @imVkohli pic.twitter.com/JKg0fbhElj
ರೊಹಿತ್ ಬಳಿಕ ಬ್ಯಾಟಿಂಗ್ಗೆ ಬಂದ ವಿರಾಟ್ ಭರ್ಜರಿ ಶತಕ ಸಿಡಿಸಿದರು. ಇದರೊಂದಿಗೆ ದಾಖಲೆಯನ್ನು ಬರೆದಿದ್ದಾರೆ. ಈ ಪಂದ್ಯದಲ್ಲಿ 15 ರನ್ ಗಳಿಸುತ್ತಿದ್ದಂತೆ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 14,000 ರನ್‌ಗಳನ್ನು ಪೂರ್ಣಗೊಳಿಸಿದರು. ಇದರೊಂದಿಗೆ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದರು.
ದಾಖಲೆ ಬರೆದ ಕೊಹ್ಲಿ : ವಿರಾಟ್ 287 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದರು. ಈ ಅನುಕ್ರಮದಲ್ಲಿ, ಅವರು ಏಕದಿನ ಪಂದ್ಯಗಳಲ್ಲಿ 14,000 ರನ್‌ಗಳನ್ನು ಪೂರ್ಣಗೊಳಿಸಿದ ಅತ್ಯಂತ ವೇಗದ ಆಟಗಾರ ಎಂಬ ದಾಖಲೆಯನ್ನು ಸೃಷ್ಟಿಸಿದರು. ಒಟ್ಟಾರೆ 14,000+ ಏಕದಿನ ರನ್ ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಸಚಿನ್ ಹೆಸರಲ್ಲಿತ್ತು. ಸಚಿನ್ 350 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರೆ, ಶ್ರೀಲಂಕಾದ ಬ್ಯಾಟ್ಸ್‌ಮನ್ 378 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದರು.
ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳು
- ಸಚಿನ್ ತೆಂಡೂಲ್ಕರ್ - 18426 ರನ್ಗಳು
- ಕುಮಾರ್ ಸಂಗಕ್ಕಾರ - 14234 ರನ್‌ಗಳು
- ವಿರಾಟ್ ಕೊಹ್ಲಿ - 14000* ರನ್‌ಗಳು
- ರಿಕಿ ಪಾಂಟಿಂಗ್ - 13704 ರನ್‌ಗಳು
- ಸನತ್ ಜಯಸೂರ್ಯ - 14430 ರನ್‌ಗಳು
ಕ್ಯಾಚ್ ದಾಖಲೆ : ಕೊಹ್ಲಿ ಏಕದಿನ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ಕ್ಯಾಚ್‌ಗಳನ್ನು ಹಿಡಿದ ದಾಖಲೆಯನ್ನು ಬರೆದಿದ್ದಾರೆ. ಟವರು ಒಟ್ಟು 157 ಕ್ಯಾಚ್‌ಗಳನ್ನು ಹಿಡಿಯುವ ಮೂಲಕ, ಮೊಹಮ್ಮದ್ ಅಜರುದ್ದೀನ್ ಅವರ 156 ಕ್ಯಾಚ್‌ಗಳ ದಾಖಲೆಯನ್ನು ಹಿಂದಿಕ್ಕಿದರು. ಇದರೊಂದಿಗೆ ಅತಿ ಹೆಚ್ಚು ಕ್ಯಾಚ್ ಪಡೆದ ದಾಖಲೆಯನ್ನು ಕೊಹ್ಲಿ ಬರೆದರು.
ಹರ್ಷಿತ್ ರಾಣಾ ಎಸೆತದಲ್ಲಿ ಖುಶ್ದಿಲ್ ಶಾ ಅವರನ್ನು ಔಟ್ ಮಾಡಿದಾಗ ಕೊಹ್ಲಿ ಡೀಪ್ ಮಿಡ್ ವಿಕೆಟ್ನಲ್ಲಿ ತಮ್ಮ 158ನೇ ಕ್ಯಾಚ್ ಪಡೆದರು. 1985 ರಿಂದ 2000ರವರೆಗೆ ಭಾರತ ಪರ ಆಡಿದ 334 ಏಕದಿನ ಪಂದ್ಯಗಳಲ್ಲಿ ಅಜರುದ್ದೀನ್ 156 ಕ್ಯಾಚ್‌ಗಳನ್ನು ಪಡೆದಿದ್ದರು.
ಇದನ್ನೂ ಓದಿ: 1 ರನ್ ಗಳಿಸಿ ವಿಶ್ವದಾಖಲೆ ಬರೆದ ರೋಹಿತ್ ಶರ್ಮಾ!