ETV Bharat / business

ಸೆನ್ಸೆಕ್ಸ್ 1,176 ಅಂಕ ಕುಸಿತ, 23,587ಕ್ಕೆ ಇಳಿದ ನಿಫ್ಟಿ: ವಾರದಲ್ಲಿ ₹20 ಲಕ್ಷ ಕೋಟಿ ನಷ್ಟ - STOCK MARKET

ಶುಕ್ರವಾರ ಭಾರತದ ಷೇರು ಮಾರುಕಟ್ಟೆ ಇಳಿಕೆಯಾಗಿದೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್
ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (IANS)
author img

By ETV Bharat Karnataka Team

Published : Dec 20, 2024, 4:49 PM IST

ಮುಂಬೈ: ಡಿಸೆಂಬರ್ 20 ರ ಶುಕ್ರವಾರದಂದು ಭಾರತದ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ತಲಾ ಶೇ 1.5 ರಷ್ಟು ಕುಸಿದಿವೆ. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ಷೇರುಗಳಲ್ಲಿನ ಭಾರಿ ಮಾರಾಟವು ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕೊಡುಗೆ ನೀಡಿದೆ.

ಶುಕ್ರವಾರದ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 1,176.46 ಪಾಯಿಂಟ್ಸ್ ಅಥವಾ ಶೇಕಡಾ 1.49 ರಷ್ಟು ಕುಸಿದು 78,041.59 ರಲ್ಲಿ ಕೊನೆಗೊಂಡಿದೆ. ನಿಫ್ಟಿ 364.20 ಪಾಯಿಂಟ್ ಅಥವಾ ಶೇಕಡಾ 1.52 ರಷ್ಟು ಕುಸಿದು 23,587.50 ರಲ್ಲಿ ಕೊನೆಗೊಂಡಿದೆ. ನಿಫ್ಟಿ ಸ್ಮಾಲ್ ಕ್ಯಾಪ್ 100 ಶೇ 2.19, ನಿಫ್ಟಿ ಮಿಡ್ ಕ್ಯಾಪ್ 100 ಶೇ 2.82 ಮತ್ತು ನಿಫ್ಟಿ ಮೈಕ್ರೋಕ್ಯಾಪ್ 250 ಶೇ 2.27 ರಷ್ಟು ಕುಸಿದಿವೆ.

ರಿಯಾಲ್ಟಿ, ಐಟಿ ಮತ್ತು ಟೆಲಿಕಾಂ ವಲಯದ ಸೂಚ್ಯಂಕಗಳು ಶೇ 3 ಕ್ಕಿಂತ ಹೆಚ್ಚು ಕುಸಿದು ಅಗ್ರ ವಲಯದ ನಷ್ಟ ಅನುಭವಿಸಿದವು. ಆಟೋ, ಐಟಿ ಮತ್ತು ಪಿಎಸ್​ಯು ಬ್ಯಾಂಕ್ ಸೂಚ್ಯಂಕಗಳು ತಲಾ ಶೇ 2 ಕ್ಕಿಂತ ಹೆಚ್ಚು ಕುಸಿದಿವೆ. ಯಾವುದೇ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿಲ್ಲ.

12 ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್ ಷೇರುಗಳನ್ನು ಟ್ರ್ಯಾಕ್ ಮಾಡುವ ನಿಫ್ಟಿ ಬ್ಯಾಂಕ್ ಸೂಚ್ಯಂಕ 816.50 ಪಾಯಿಂಟ್ ಅಥವಾ ಶೇ 1.58 ರಷ್ಟು ಕುಸಿದು 50,759.20 ಕ್ಕೆ ತಲುಪಿದೆ.

ಅತ್ಯಧಿಕ ಲಾಭ ಮತ್ತು ನಷ್ಟಕ್ಕೀಡಾದ ಷೇರುಗಳು: ಟೆಕ್ ಮಹೀಂದ್ರಾ (-3.97%), ಮಹೀಂದ್ರಾ & ಮಹೀಂದ್ರಾ (-3.60%), ಇಂಡಸ್ಇಂಡ್ ಬ್ಯಾಂಕ್ (-3.53%), ಆಕ್ಸಿಸ್ ಬ್ಯಾಂಕ್ (-3.28%), ಮತ್ತು ಟಾಟಾ ಮೋಟಾರ್ಸ್ (-2.73%) ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟಿಸಿಎಸ್, ಲಾರ್ಸೆನ್ ಆಂಡ್ ಟೂಬ್ರೊ, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ನಂತರದ ಸ್ಥಾನಗಳಲ್ಲಿವೆ. ಇವೆಲ್ಲವೂ ಶೇ 2 ರಿಂದ 2.5ರಷ್ಟು ಕುಸಿತ ಕಂಡಿವೆ. 30 ಷೇರುಗಳ ಸೂಚ್ಯಂಕದಲ್ಲಿ ಜೆಎಸ್​ಡಬ್ಲ್ಯೂ ಸ್ಟೀಲ್, ನೆಸ್ಲೆ ಇಂಡಿಯಾ ಮತ್ತು ಟೈಟನ್ ಮಾತ್ರ ಲಾಭ ಗಳಿಸಿದವು.

ನಿಫ್ಟಿ-50 ಷೇರುಗಳ ಪೈಕಿ ಟೆಕ್ ಮಹೀಂದ್ರಾ, ಆಕ್ಸಿಸ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಮಹೀಂದ್ರಾ & ಮಹೀಂದ್ರಾ ಮತ್ತು ಟ್ರೆಂಟ್ ನಷ್ಟ ಅನುಭವಿಸಿದರೆ, ಡಾ. ರೆಡ್ಡೀಸ್, ಜೆಎಸ್ ಡಬ್ಲ್ಯೂ ಸ್ಟೀಲ್, ಐಸಿಐಸಿಐ ಬ್ಯಾಂಕ್, ನೆಸ್ಲೆ ಇಂಡಿಯಾ ಮತ್ತು ಎಚ್​ಡಿಎಫ್​ಸಿ ಲೈಫ್ ಷೇರುಗಳು ಲಾಭ ಗಳಿಸಿದವು.

ಹೂಡಿಕೆದಾರರಿಗೆ 10 ಲಕ್ಷ ಕೋಟಿ ನಷ್ಟ: ಇಂದಿನ ವಹಿವಾಟಿನಲ್ಲಿ ಹೂಡಿಕೆದಾರರು 10 ಲಕ್ಷ ಕೋಟಿ ರೂ.ಗಿಂತ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಬಿಎಸ್ಇ-ಲಿಸ್ಟೆಡ್ ಕಂಪನಿಗಳ ಸಂಚಿತ ಮಾರುಕಟ್ಟೆ ಕ್ಯಾಪ್ 441.09 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಹಿಂದಿನ ದಿನ ಇದು 451.14 ಲಕ್ಷ ಕೋಟಿ ರೂ. ಆಗಿತ್ತು. ಕಳೆದ ಒಂದು ವಾರದಲ್ಲಿ ಬಿಎಸ್ಇ ಲಿಸ್ಟೆಡ್ ಕಂಪನಿಗಳು ಸುಮಾರು 20 ಲಕ್ಷ ಕೋಟಿ (19.73 ಲಕ್ಷ ಕೋಟಿ ರೂ.) ನಷ್ಟ ಅನುಭವಿಸಿವೆ.

ಇದನ್ನೂ ಓದಿ : ಯುಎಸ್​ ವೀಸಾ ಸಂದರ್ಶನ ನಿಯಮ ಮಾರ್ಪಾಡು: ಕಾಯುವ ಸಮಯ ಕಡಿಮೆಯಾಗುವ ನಿರೀಕ್ಷೆ - US VISA APPOINTMENT

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.