ಕರ್ನಾಟಕ

karnataka

ETV Bharat / business

ಎರಡು ದಿನಗಳ ಲಾಭ ಅಂತ್ಯ: ಸೆನ್ಸೆಕ್ಸ್​ 427 ಅಂಕ ಕುಸಿತ, 24,340ಕ್ಕೆ ಇಳಿದ ನಿಫ್ಟಿ - STOCK MARKET

ಭಾರತದ ಷೇರು ಮಾರುಕಟ್ಟೆ ಇಂದು ಕುಸಿತದೊಂದಿಗೆ ಕೊನೆಗೊಂಡಿತು.

ಸೆನ್ಸೆಕ್ಸ್​ 427 ಅಂಕ ಕುಸಿತ
ಷೇರು ಮಾರುಕಟ್ಟೆ ಸಮಾಚಾರ (IANS)

By ETV Bharat Karnataka Team

Published : Oct 30, 2024, 5:11 PM IST

ಮುಂಬೈ:ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ತಮ್ಮ ಎರಡು ದಿನಗಳ ಏರಿಕೆಯ ಹಾದಿಯನ್ನು ಕೊನೆಗೊಳಿಸಿ, ಮಿಶ್ರ ಜಾಗತಿಕ ಸೂಚನೆಗಳ ನಡುವೆ ಬುಧವಾರ ಇಳಿಕೆಯೊಂದಿಗೆ ಕೊನೆಗೊಂಡವು.

ಬಿಎಸ್ಇ ಸೆನ್ಸೆಕ್ಸ್ 426.85 ಪಾಯಿಂಟ್ಸ್ ಅಥವಾ ಶೇಕಡಾ 0.53ರಷ್ಟು ಕುಸಿದು 79,942.18ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 125.99 ಪಾಯಿಂಟ್ ಅಥವಾ ಶೇಕಡಾ 0.51ರಷ್ಟು ಕುಸಿದು 24,340.85ರಲ್ಲಿ ಕೊನೆಗೊಂಡಿದೆ.

ಈ ಷೇರುಗಳಿಗೆ ನಷ್ಟ: ಸಿಪ್ಲಾ, ಶ್ರೀರಾಮ್ ಫೈನಾನ್ಸ್, ಇನ್ಫೋಸಿಸ್, ಎಚ್​ಡಿಎಫ್​ಸಿ ಲೈಫ್ ಇನ್ಶೂರೆನ್ಸ್ ಕಂಪನಿ ಮತ್ತು ಟ್ರೆಂಟ್ ಷೇರುಗಳು ಶೇಕಡಾ 4.03ರಷ್ಟು ನಷ್ಟದೊಂದಿಗೆ ಕುಸಿದವು. 50 ಷೇರುಗಳ ಪೈಕಿ 31 ಷೇರುಗಳು ಇಳಿಕೆಯೊಂದಿಗೆ ಕೊನೆಗೊಂಡವು.

ಲಾಭ ಗಳಿಸಿದ ಷೇರುಗಳಿವು: ಅದಾನಿ ಎಂಟರ್‌ಪ್ರೈಸಸ್, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್, ಹೀರೋ ಮೋಟೊಕಾರ್ಪ್, ಬ್ರಿಟಾನಿಯಾ ಇಂಡಸ್ಟ್ರೀಸ್ ಮತ್ತು ಮಾರುತಿ ಸುಜುಕಿ ಇಂಡಿಯಾ ಷೇರುಗಳು ಲಾಭ ಗಳಿಸಿದ್ದು, ಬುಧವಾರ ಶೇಕಡಾ 3.74ರಷ್ಟು ಲಾಭದೊಂದಿಗೆ ಕೊನೆಗೊಂಡವು.

ಗಮನಾರ್ಹವಾಗಿ, ನಿಫ್ಟಿ ಸ್ಮಾಲ್ ಕ್ಯಾಪ್ 200 ಸೂಚ್ಯಂಕವು ಶೇಕಡಾ 1.05ರಷ್ಟು ಏರಿಕೆಯಾಗಿದ್ದರಿಂದ ಸಣ್ಣ ಕ್ಯಾಪ್ ಷೇರುಗಳು ವಿಶಾಲ ಸೂಚ್ಯಂಕಗಳಲ್ಲಿ ಉತ್ತಮವಾಗಿ ಲಾಭ ಗಳಿಸಿದವು. ಏತನ್ಮಧ್ಯೆ, ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕವು ಶೇಕಡಾ 0.16ರಷ್ಟು ಕುಸಿದಿದೆ. ನಿಫ್ಟಿ ಎಫ್ಎಂಸಿಜಿ, ಮೀಡಿಯಾ, ಮೆಟಲ್ ಮತ್ತು ಆಯ್ದ ಹೆಲ್ತ್ ಕೇರ್ ಹೊರತುಪಡಿಸಿ ವಲಯ ಸೂಚ್ಯಂಕಗಳು ಬುಧವಾರ ಕುಸಿದವು.

ಡಾಲರ್‌ ಎದುರು ರೂಪಾಯಿ ಬೆಲೆ: ಬುಧವಾರ ಆರಂಭಿಕ ವ್ಯವಹಾರಗಳಲ್ಲಿ ಯುಎಸ್ ಡಾಲರ್ ವಿರುದ್ಧ ರೂಪಾಯಿ 2 ಪೈಸೆ ಕುಸಿದು 84.07ಕ್ಕೆ ತಲುಪಿದೆ. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಡಾಲರ್ ವಿರುದ್ಧ ರೂಪಾಯಿ 84.06ಕ್ಕೆ ಪ್ರಾರಂಭವಾಯಿತು. ಆರಂಭಿಕ ವಹಿವಾಟಿನಲ್ಲಿ ಇದು ಹಿಂದಿನ ಮುಕ್ತಾಯಕ್ಕಿಂತ 2 ಪೈಸೆ ಕುಸಿದು 84.07ಕ್ಕೆ ತಲುಪಿದೆ.

ಮಂಗಳವಾರ, ಯುಎಸ್ ಡಾಲರ್ ವಿರುದ್ಧ ರೂಪಾಯಿ 2 ಪೈಸೆ ಏರಿಕೆಯಾಗಿ 84.05ಕ್ಕೆ ಸ್ಥಿರವಾಗಿತ್ತು. ರೂಪಾಯಿ ಸದ್ಯ ತನ್ನ ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿದೆ. ಅಕ್ಟೋಬರ್ 11ರಂದು ಡಾಲರ್ ವಿರುದ್ಧ ರೂಪಾಯಿ ತನ್ನ ಕನಿಷ್ಠ ಮುಕ್ತಾಯ ಮಟ್ಟವಾದ 84.10ಕ್ಕೆ ತಲುಪಿತ್ತು.

ತೈಲ ದರ: ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲವು ಫ್ಯೂಚರ್ಸ್​ ವಹಿವಾಟಿನಲ್ಲಿ ಬ್ಯಾರೆಲ್​ಗೆ 0.51% ಏರಿಕೆಯಾಗಿ 71.48 ಡಾಲರ್​ಗೆ ತಲುಪಿದೆ.

ಇದನ್ನೂ ಓದಿ: ಎನ್​ಎಸ್​ಇಯಲ್ಲಿ 20 ಕೋಟಿ ದಾಟಿದ ನೋಂದಾಯಿತ ಗ್ರಾಹಕ ಖಾತೆಗಳ ಸಂಖ್ಯೆ

ABOUT THE AUTHOR

...view details