ಮುಂಬೈ:ಸರ್ಕಾರಿ ವಹಿವಾಟುಗಳನ್ನು ನಿರ್ವಹಿಸುವ ದೇಶದ ಎಲ್ಲಾ ಬ್ಯಾಂಕ್ಗಳು ಮಾರ್ಚ್ 31ರ ಭಾನುವಾರ ಕಾರ್ಯ ನಿರ್ವಹಿಸುವಂತೆ ಆರ್ಬಿಐ ಬುಧವಾರ ತಿಳಿಸಿದೆ. ಮಾರ್ಚ್ ತಿಂಗಳು ಹಣಕಾಸು ವರ್ಷ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಸರ್ಕಾರಿ ವಹಿವಾಟುಗಳನ್ನು ನಿರ್ವಹಿಸುವ ಎಲ್ಲಾ ಬ್ಯಾಂಕ್ಗಳು ಕಾರ್ಯನಿರ್ವಹಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಆರ್ಬಿಐ ತನ್ನ ಅಧೀನದಲ್ಲಿರುವ ಎಲ್ಲಾ ಬ್ಯಾಂಕ್ಗಳ ಶಾಖೆಗಳನ್ನು ಮುಕ್ತವಾಗಿಡಲು ಆದೇಶಿಸಿದೆ.
ಮಾರ್ಚ್ 31ರ ಭಾನುವಾರ ಎಲ್ಲಾ ಬ್ಯಾಂಕ್ಗಳು ಎಂದಿನಂತೆ ಕಾರ್ಯನಿರ್ವಹಣೆ - RBI - RBI
ತನ್ನ ಅಧೀನದಲ್ಲಿರುವ ದೇಶದ ಎಲ್ಲಾ ಬ್ಯಾಂಕ್ಗಳು ಮಾರ್ಚ್ 31ರ ಭಾನುವಾರ ಕಾರ್ಯನಿರ್ವಹಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರ್ದೇಶನ ನೀಡಿದೆ.
ಆರ್ಬಿಐ
Published : Mar 21, 2024, 12:02 PM IST
|Updated : Mar 21, 2024, 1:17 PM IST
ಇದರ ಜತೆಗೆ 31ರಂದು ಬ್ಯಾಂಕಿಂಗ್ ಸೇವೆಗಳ ಲಭ್ಯತೆಯ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುವಂತೆಯೂ ಸೂಚಿಸಲಾಗಿದೆ.
ಇದನ್ನೂ ಓದಿ:ನೀತಿ ಸಂಹಿತೆ ಉಲ್ಲಂಘನೆ ಆರೋಪ: ಶೋಭಾ ಕರಂದ್ಲಾಜೆ ವಿರುದ್ಧ ತಕ್ಷಣವೇ ಕ್ರಮಕ್ಕೆ ಚುನಾವಣಾ ಆಯೋಗದ ಸೂಚನೆ
Last Updated : Mar 21, 2024, 1:17 PM IST