ಕರ್ನಾಟಕ

karnataka

ETV Bharat / business

ನಿನ್ನೆ ಏರಿಕೆ ಇಂದು ಇಳಿಕೆ: 150 ರೂ ಕುಸಿತ ಕಂಡ ಬಂಗಾರದ ಬೆಲೆ; ಬೆಂಗಳೂರಲ್ಲಿ ಇಂದು ಎಷ್ಟಿದೆ ಚಿನ್ನದ ದರ? - GOLD RATE TODAY

ಜಾಗತಿಕ ಉತ್ಪಾದನೆ, ದೇಶದ ಕರೆನ್ಸಿಯ ಬಲ, ದೇಶೀಯ ಬೇಡಿಕೆ, ತೈಲದಂತಹ ಇತರ ಸರಕುಗಳ ಬೆಲೆಗಳಿಂದ ಬಂಗಾರದ ಬೆಲೆ ಪ್ರಭಾವಿತಗೊಂಡಿರುತ್ತದೆ.

Gold Rate Today Price Trends in Banglore and Hyderabad
ಸಾಂದರ್ಭಿಕ ಚಿತ್ರ (Getty image)

By ETV Bharat Karnataka Team

Published : Nov 28, 2024, 4:01 PM IST

ಹೈದರಾಬಾದ್​: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ. ಬುಧವಾರ 10 ಗ್ರಾಂ ಬಂಗಾರದ ಬೆಲೆ 78,270 ರಷ್ಟಿದ್ದರೆ, ಗುರುವಾರದ ವೇಳೆಗೆ ರೂ.150ರಷ್ಟು ಇಳಿಕೆಯಾಗಿದ್ದು, 78,120ರೂಗೆ ತಲುಪಿದೆ. ಬೆಳ್ಳಿಯ ದರ ಹಿಂದಿನ ದಿನಕ್ಕಿಂತ 1,631 ರೂ.ನಷ್ಟು ಭಾರಿ ಇಳಿಕೆ ಕಂಡಿದ್ದು, ಕೆಜಿಗೆ 89,500 ರೂ ದಾಖಲಾಗಿದೆ.

ಚಿನ್ನದ ಬೆಲೆಯು ಜಾಗತಿಕ ಚಿನ್ನದ ಬೆಲೆಗಳ ನೇರ ಪರಿಣಾಮ ಬೀರುತ್ತದೆ. ಇದು ಜಾಗತಿಕ ಉತ್ಪಾದನೆ, ದೇಶದ ಕರೆನ್ಸಿಯ ಬಲ, ದೇಶೀಯ ಬೇಡಿಕೆ, ತೈಲದಂತಹ ಇತರ ಸರಕುಗಳ ಬೆಲೆಗಳ ಆಧಾರದ ಮೇಲೆ ಏರಿಳಿತ ಕಾಣುತ್ತದೆ.

ಬೆಂಗಳೂರಿನಲ್ಲಿ ಚಿನ್ನದ ದರ:

22 ಕ್ಯಾರೆಟ್​ ಒಂದು ಗ್ರಾಮ್​ ಚಿನ್ನಕ್ಕೆ 15 ರೂ ಇಳಿಕೆಯಾಗಿದ್ದು, 7,090 ರೂ ಇದೆ.

24 ಕ್ಯಾರೆಟ್​ ಚಿನ್ನ ಗ್ರಾಂಗೆ 16 ರೂ. ಕಡಿಮೆಯಾಗುವ ಮೂಲಕ 7,735 ರೂಗೆ ಮಾರಾಟ ವಾಗುತ್ತಿದೆ.

18 ಕ್ಯಾರೆಟ್​ ಒಂದು ಗ್ರಾಂ ಬಂಗಾರ 12 ರೂ ಇಳಿಕೆಯಾಗಿದ್ದು, 5,801ರೂ ದರ ಹೊಂದಿದೆ.

ಷೇರು ಮಾರುಕಟ್ಟೆ: ಋಣಾತ್ಮಕ ಅಂತಾರಾಷ್ಟ್ರೀಯ ಸೂಚ್ಯಂಕಗಳ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಇಂದು ಭಾರಿ ಕುಸಿತದೊಂದಿಗೆ ವಹಿವಾಟು ಮುಕ್ತಾಯಗೊಳಿಸಿದೆ. ಸೆನ್ಸೆಕ್ಸ್ 1,190 ಅಂಕಗಳಕುಸಿತದೊಂದಿಗೆ 79,043.74ದಲ್ಲಿ ವ್ಯವಹಾರ ಕೊನೆಗೊಳಿಸಿದೆ. ನಿಫ್ಟಿ 360 ಪಾಯಿಂಟ್‌ಗಳ ಕುಸಿತದೊಂದಿಗೆ 23,914.ಕ್ಕೆ ಸ್ಥಿರವಾಯಿತು.

ರೂಪಾಯಿ ದರ: ಅಮೆರಿಕನ್ ಡಾಲರ್ ಎದುರು ರೂಪಾಯಿ ವಿನಿಮಯ ದರ ರೂ.84.46 ಆಗಿದೆ.

ಇದನ್ನೂ ಓದಿ: ಚಿನ್ನದ ದರದ ದಿಢೀರ್​ ಏರಿಕೆಗೆ ಕಾರಣ ಏನು?; ಹೀಗಿದೆ ಇಂದಿನ ಬಂಗಾರದ ದರ.. ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್​ ಮಾಡಿ!

ABOUT THE AUTHOR

...view details