ಹೈದರಾಬಾದ್: ದೆಹಲಿ ಮತ್ತು ಮುಂಬೈ ಮುಂದಿನ 16 ವರ್ಷಗಳಲ್ಲಿ ಶೇ 150ಕ್ಕಿಂತ ಹೆಚ್ಚಿನ ಪ್ರಮಾಣದ ಸೆಂಟಿ - ಮಿಲೇನಿಯರ್ಗಳ ಬೆಳವಣಿಗೆ ಹೊಂದಲಿದೆ ಎಂದು ಹೆನ್ಲೆಲಿ ಹಾಗೂ ಅದರ ಪಾಲುದಾರ ಸಂಸ್ಥೆ ಸೆಂಟಿ ಮಿಲಿಯನೇರ್ 2024 ವರದಿಯಲ್ಲಿ ಹೇಳಲಾಗಿದೆ. ಈ ವಿಶ್ವದ ಟಾಪ್ ಶ್ರೀಮಂತರು ಹಾಗೂ ಆ ಬಗೆಗಿನ ಬೆಳವಣಿಗೆ ಬಗ್ಗೆ ವರದಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ವಿಶ್ವದಾದ್ಯಂತ 29,350 ವ್ಯಕ್ತಿಗಳು 100 ಮಿಲಿಯನ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಹೂಡಿಕೆ ಮಾಡಬಹುದಾದ ಆಸ್ತಿಯನ್ನು ಹೊಂದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಅಂದಹಾಗೆ ಭಾರತದ ಮಟ್ಟಿಗೆ ಮುಂಬೈ ಅತಿ ಹೆಚ್ಚಿ ಸೆಂಟಿ ಮಿಲಿಯನೇರ್‌ಗಳನ್ನು ಹೊಂದಿರುವ ನಗರವಾಗಿದೆ. ಇಲ್ಲಿ ಸುಮಾರು 236 ಸೆಂಟಿ-ಮಿಲಿಯನೇರ್‌ಗಳು ಇದ್ದಾರೆ. ಈ ಮೂಲಕ ಹೆನ್ಲೆಲಿಯ ಸೆಂಟಿ - ಮಿಲಿಯನೇರ್ 2024ರ ವರದಿಲ್ಲಿ ಮುಂಬೈ ಪಟ್ಟಿಯಲ್ಲಿ 15 ನೇ ಸ್ಥಾನ ಪಡೆದುಕೊಂಡಿದೆ. ಇನ್ನು 23 ಸೆಂಟಿ-ಮಿಲಿಯನೇರ್‌ಗಳನ್ನು ಹೊಂದಿರುವ ದೆಹಲಿ 25 ನೇ ಸ್ಥಾನದಲ್ಲಿದೆ. ಕ್ರಮವಾಗಿ 3503 ಸೆಂಟಿ-ಮಿಲಿಯನೇರ್‌ಗಳನ್ನು ಹೊಂದಿರುವ ಅಮೆರಿಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಬರೋಬ್ಬರಿ 995 ಸೆಂಟಿ-ಮಿಲಿಯನೇರ್‌ಗಳೊಂದಿಗೆ ಚೀನಾ ಎರಡನೇ ಸ್ಥಾನದಲ್ಲಿದೆ. ಅಂದರೆ ಚೀನಾ ಯುರೋಪಿಯನ್ ಸ್ಟಾರ್ವಾಲ್ಟ್ಗಳನ್ನು ಮೀರಿ ಎತ್ತರದ ಸ್ಥಾನಕ್ಕೆ ಏರಿಕೆ ಕಂಡಿದೆ.
ಈ ಸೆಂಟಿ ಮಿಲಿಯನೇರ್‌ಗಳು ಎಂದರೆ ಯಾರು?: ಸೆಂಟಿಮಿಲಿಯನೇರ್ ಅತಿ ಹೆಚ್ಚು ನಿವ್ವಳ ಮೌಲ್ಯದ ವ್ಯಕ್ತಿಗಳ ದೊಡ್ಡ ವರ್ಗಕ್ಕೆ ಅಥವಾ 30,000,000 ಡಾಲರ್ಗಿಂತ ಹೆಚ್ಚಿನ ಆಸ್ತಿ ಹೊಂದಿರುವ ವರ್ಗವಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಎಲ್ಲಾ ಸೆಂಟಿ-ಮಿಲಿಯನೇರ್‌ಗಳು ಅತಿ-ಹೆಚ್ಚಿನ-ನಿವ್ವಳ-ಮೌಲ್ಯದ ವ್ಯಕ್ತಿಗಳಾಗಿದ್ದರೂ, ಎಲ್ಲ ಅಲ್ಟ್ರಾ-ಹೈ-ನೆಟ್-ವರ್ತ್ ವ್ಯಕ್ತಿಗಳು ಸೆಂಟಿ-ಮಿಲಿಯನೇರ್‌ಗಳಲ್ಲ.
ಏಷ್ಯನ್ ರಾಷ್ಟ್ರಗಳಿಗೆ ಪಟ್ಟಿಯಲ್ಲಿರೋ ಸ್ಥಾನ ಮಾನ ಏನು?: ಬೀಜಿಂಗ್, ಶಾಂಘೈ, ಸಿಂಗಾಪುರ, ಹಾಂಕಾಂಗ್ (SAR ಚೀನಾ), ಟೋಕಿಯೊ ಮತ್ತು ಮುಂಬೈ ಸೇರಿದಂತೆ ಪ್ರಮುಖ ನಗರಗಳು ಹೆಚ್ಚಿನ ಶ್ರೀಮಂತರನ್ನು ಹೊಂದಿವೆ. ಒಟ್ಟಾರೆಯಾಗಿ, ಏಷ್ಯಾದ ನಗರಗಳು ಜಾಗತಿಕ ಸೆಂಟಿಮಿಲಿಯನೇರ್ ಜನಸಂಖ್ಯೆಯ ಶೇಕಡಾ 10.84 ರಷ್ಟಿದೆ.
ಈ ಪಟ್ಟಿಯಲ್ಲಿ ಭಾರತೀಯರ ಸ್ಥಾನಮಾನ ಏನು?: : ವರದಿಯ ಪ್ರಕಾರ, ಭಾರತವು ಎರಡು ನಗರಗಳಾದ ಮುಂಬೈ ಮತ್ತು ದೆಹಲಿಯಲ್ಲಿ ಹೆಚ್ಚಿನ ಸೆಂಟಿ ಮಿಲಿಯನೇರ್‌ಗಳನ್ನು ಹೊಂದಿದೆ. ಮುಂಬೈ 236 ಸೆಂಟಿ-ಮಿಲಿಯನೇರ್‌ಗಳೊಂದಿಗೆ 15 ನೇ ಸ್ಥಾನದಲ್ಲಿದ್ದರೆ ಮತ್ತು 123-ಸೆಂಟಿ ಮಿಲಿಯನೇರ್‌ಗಳನ್ನು ಹೊಂದಿರುವ ದೆಹಲಿ 25 ನೇ ಸ್ಥಾನದಲ್ಲಿದೆ.
ಪಟ್ಟಿಯಲ್ಲಿ ಬೆಂಗಳೂರಿಗೂ ಇದೆ ಸ್ಥಾನ:ಅತ್ಯಂತ ಶ್ರೀಮಂತರ ಕೇಂದ್ರವಾಗುತ್ತಿರುವ ಭಾರತದ ಸಿಲಿಕಾನ್ ಸಿಟಿ, ನಿವೃತ್ತರ ಸ್ವರ್ಗ ಹಾಗೂ ಉದ್ಯಾನ ನಗರ ಎಂಬ ಬಿರುದು ಪಡೆದ ಬೆಂಗಳೂರು ಪಟ್ಟಿಯಲ್ಲಿ ತುಂಬಾ ಏನೂ ಹಿಂದುಳಿದಿಲ್ಲ. 90 ರ ದಶಕದಲ್ಲಿ ತಂತ್ರಜ್ಞಾನದ ಉತ್ಕರ್ಷದಿಂದ ನಗರವು ಭೌಗೋಳಿಕವಾಗಿ ಮಾತ್ರ ವಿಸ್ತರಿಸುತ್ತಿಲ್ಲ, ಶ್ರೀಮಂತರ ಜನಸಂಖ್ಯೆಯನ್ನೂ ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಿದೆ.
ಶೇಕಡಾವಾರು ಪ್ರಮಾಣ:ಮುಂಬೈ ಮತ್ತು ದೆಹಲಿಯ ಆರ್ಥಿಕ ಪರಿಸರವು ಕಳೆದ 10 ವರ್ಷಗಳಲ್ಲಿ ಮಿಲಿಯನೇರ್‌ಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವನ್ನು ತೋರಿಸಿದೆ, ಸಂಪತ್ತಿನ ಕ್ರೋಢೀಕರಣಕ್ಕಾಗಿ ವಿಶ್ವದ ಅಗ್ರ ನಗರಗಳಲ್ಲಿ ಅವರನ್ನು ಇರಿಸಿದೆ. "ವೀಕ್ಷಿಸಬೇಕಾದ ನಗರಗಳ" ಪಟ್ಟಿಗೆ ಬೆಂಗಳೂರು ವೇಗವಾಗಿ ಪ್ರಗತಿ ಕಾಣುತ್ತಿದೆ. ಶೀಘ್ರ ಬೆಳೆವಣಿಗೆ ದಾಖಲಿಸುತ್ತಿರುವ ಬೆಂಗಳೂರು ಆರ್ಥಿಕ ಕೇಂದ್ರವಾಗಿ ನಗರದ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತಿದೆ. ಈ ಅಂಶವನ್ನು ಸೆಂಟಿ - ಮಿಲಿಯನೇರ್ ವರದಿಯಲ್ಲಿ ಒತ್ತಿ ಹೇಳಲಾಗಿದೆ.