ಮೀರತ್ (ಉತ್ತರಪ್ರದೇಶ): ಬಿ.ಟೆಕ್-ಎಂ.ಬಿ.ಎ ಪಾಸ್ ಆಗಿರುವ ಯುವಕನೊಬ್ಬ ಇದೀಗ ಜಿಲ್ಲೆಯಲ್ಲಿ ಟೀ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ತನ್ನ ಇಷ್ಟದ ಕೆಲಸ ಸಿಗದಿದ್ದಾಗ ಕೆಟಲ್ ತರಹದ ಟೀ ಸ್ಟಾಲ್ ಅನ್ನು ವಿನ್ಯಾಸಗೊಳಿಸಿ ಚಹಾ ಮಾರಾಟ ಮಾಡುತ್ತಿದ್ದಾರೆ. ಈ ಟೀ ಸ್ಟಾಲ್ನಲ್ಲಿ ಸುಮಾರು 20ಕ್ಕೂ ಹೆಚ್ಚು ವಿವಿಧ ಫ್ಲೇವರ್‌ಗಳ ಚಹಾ ಸಿಗುತ್ತಿದೆ. ಅಷ್ಟೇ ಅಲ್ಲ, ಈ ಯುವಕ ತನ್ನ ಸ್ಟಾರ್ಟಪ್ ಮೂಲಕ ಹಲವರಿಗೆ ಉದ್ಯೋಗವನ್ನೂ ಸಹಾ ನೀಡಿದ್ದಾರೆ.
ಸ್ಟಾರ್ಟಪ್ ಆರಂಭಿಸಿದ ಯುವಕ: ಮೀರತ್ನ ಗಂಗಾನಗರದಲ್ಲಿ ನೆಲೆಸಿರುವ ಯುವಕನಿಗೆ ಕೆಲಸ ಸಿಗದೇ ಇದ್ದಾಗ ಸ್ವಂತ ಸ್ಟಾರ್ಟಪ್ ಆರಂಭಿಸಿದ್ದಾರೆ. ಯುವಕನ ಹೆಸರು ಚಿರಾಗ್ ಕಕ್ಕರ್. ಅವರು ಬಿ.ಟೆಕ್ ಮತ್ತು ಎಂಬಿಎ ಪದವಿಧರ. ಚಿರಾಗ್ ಅವರು ಸಾಕಷ್ಟು ಬಾರಿ ಕೆಲಸಕ್ಕಾಗಿ ಇತರೆ ಕಂಪನಿಗಳಿಗೆ ಅಲೆದಾಡಿದರು. ಆದ್ರೂ ಅವರ ಓದಿಗೆ ತಕ್ಕಂತೆ ಯಾವುದೇ ಕೆಲಸ ಸಿಗಲಿಲ್ಲ. ಹೀಗಾಗಿ ಕೆಲ ಯುವಕರಿಗೆ ಉದ್ಯೋಗ ನೀಡುವಂತೆ ಏನಾದರೂ ಮಾಡುಬೇಕೆಂದು ನಿರ್ಧರಿಸಿದರು. ಅದರಂತೆ ಚಿರಾಗ್ ಸಾಕಷ್ಟು ಶ್ರಮ ವಹಿಸಿದರು. ಬಳಿಕ ಕೆಟಲ್ ಆಕಾರದ ಟೀ ಸ್ಟಾಲ್ ಸಿದ್ಧಪಡಿಸಿ, 20ಕ್ಕೂ ಹೆಚ್ಚು ವಿವಿಧ ರುಚಿಯ ಚಹಾದ ವ್ಯವಸ್ಥೆ ಮಾಡಿ ಮಾರಾಟ ಶುರು ಮಾಡಿದರು.
ಮೂವರು ಯುವಕರಿಗೆ ಉದ್ಯೋಗ: ಮೂವರು ಯುವಕರಿಗೆ ಉದ್ಯೋಗವನ್ನೂ ಕಲ್ಪಿಸಿರುವುದು ಒಳ್ಳೆಯ ಸಂಗತಿ ಎನ್ನುತ್ತಾರೆ ಚಿರಾಗ್. ಈಗ ಅವರು ತಮ್ಮ ಕೆಟಲ್ ಆಕಾರದ ಅಂಗಡಿಗೆ ಪೇಟೆಂಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ದೇಶದ ವಿವಿಧ ಪ್ರಾಂತ್ಯಗಳಲ್ಲಿ ಚಹಾದೊಂದಿಗೆ ನೀಡುವ ಉತ್ಪನ್ನಗಳ ಬಗ್ಗೆಯೂ ನಾನು ಸಾಕಷ್ಟು ಸಂಶೋದನೆ ನಡೆಸಿದ್ದೇನೆ. ಶುದ್ಧತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದೇನೆ. ನಮ್ಮಲ್ಲಿ ಚಹಾ ಮಾತ್ರವಲ್ಲದೇ ಕಾಫಿಯಲ್ಲೂ ವಿಭಿನ್ನ ಫ್ಲೇವರ್‌ಗಳಿವೆ ಎಂದು ಹೇಳಿದರು.