ETV Bharat / business

ದ್ವಿಚಕ್ರ ವಾಹನ ಮಾರುಕಟ್ಟೆ ಶೇ 22ರಷ್ಟು ಬೆಳವಣಿಗೆ: ಮುಂಚೂಣಿಯಲ್ಲಿ ಗ್ರಾಮೀಣ ಭಾರತ - Two Wheeler Market - TWO WHEELER MARKET

ಭಾರತದ ದ್ವಿಚಕ್ರ ವಾಹನ ಮಾರಾಟ ಸೆಪ್ಟೆಂಬರ್​ನಲ್ಲಿ ಶೇ 22ರಷ್ಟು ಏರಿಕೆಯಾಗಿದೆ.

ದ್ವಿಚಕ್ರ ವಾಹನ ಮಾರುಕಟ್ಟೆ ಶೇ 22ರಷ್ಟು ಬೆಳವಣಿಗೆ
ದ್ವಿಚಕ್ರ ವಾಹನ ಮಾರುಕಟ್ಟೆ ಬೆಳವಣಿಗೆ (IANS)
author img

By ETV Bharat Karnataka Team

Published : Oct 3, 2024, 7:58 PM IST

ನವದೆಹಲಿ: ಗ್ರಾಮೀಣ ಭಾಗದಲ್ಲಿ ವಾಹನ ಮಾರುಕಟ್ಟೆ ಬೆಳವಣಿಗೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ದ್ವಿಚಕ್ರ ವಾಹನ (2ಡಬ್ಲ್ಯೂ) ಉದ್ಯಮವು ಸೆಪ್ಟೆಂಬರ್ ತಿಂಗಳಲ್ಲಿ ಶೇ 22ರಷ್ಟು ಬೆಳವಣಿಗೆ (ವರ್ಷದಿಂದ ವರ್ಷಕ್ಕೆ) ಕಂಡಿದೆ ಎಂದು ವರದಿಯೊಂದು ತಿಳಿಸಿದೆ. ಬಿಎನ್ ಪಿ ಪರಿಬಾಸ್ ಇಂಡಿಯಾದ ವರದಿಯ ಪ್ರಕಾರ, ದೇಶದಲ್ಲಿ ತ್ರಿಚಕ್ರ ವಾಹನಗಳ (3W) ಮಾರಾಟ ಶೇಕಡಾ 8 ರಷ್ಟು ಬೆಳವಣಿಗೆಯಾಗಿದ್ದರೆ, ಟ್ರಾಕ್ಟರುಗಳ ಮಾರಾಟ ಶೇಕಡಾ 3 ರಷ್ಟು ಏರಿಕೆಯಾಗಿದೆ.

ಚಿಲ್ಲರೆ ಬೇಡಿಕೆ ಮಿಶ್ರವಾಗಿದ್ದರೂ ಈ ಬಾರಿಯ ಹಬ್ಬದ ಋತುವಿನಲ್ಲಿ ಮಾರಾಟ ಗಣನೀಯವಾಗಿ ಸುಧಾರಿಸಲಿದೆ ಎಂದು ಮೂಲ ಉಪಕರಣ ತಯಾರಕರು (ಒಇಎಂಗಳು) ಭರವಸೆ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಭಾರತದಲ್ಲಿ ಶೇಕಡಾ 62 ರಷ್ಟು ದ್ವಿಚಕ್ರ ವಾಹನಗಳನ್ನು ಈಗ ಸಾಲದ ಮೂಲಕ ಖರೀದಿಸಲಾಗುತ್ತಿದೆ ಎಂದು ವರದಿ ಹೇಳಿದೆ. ನಗರಗಳಲ್ಲಿ ಸಾಲದ ಮೂಲಕ ವಾಹನ ಖರೀದಿಸುವ ಪ್ರಮಾಣ ಶೇ 58 ರಷ್ಟಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ಯಿಂದಾಗಿ ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ಸಾಲ- ಚಾಲಿತ ಹಣಕಾಸು ಯೋಜನೆಗಳಲ್ಲಿ ದೊಡ್ಡ ಪ್ರಮಾಣದ ಏರಿಕೆ ಕಂಡುಬಂದಿದೆ.

ಪಿಎಂಜೆಡಿವೈ ಅಡಿಯಲ್ಲಿ 53 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು, ಲಕ್ಷಾಂತರ ಗ್ರಾಮೀಣ ಭಾರತೀಯರನ್ನು ಮೊದಲ ಬಾರಿಗೆ ಔಪಚಾರಿಕ ಹಣಕಾಸು ವ್ಯವಸ್ಥೆಗೆ ತರಲಾಗಿದೆ.

ದ್ವಿಚಕ್ರ ವಾಹನ ಮಾರಾಟದಿಂದ ಹಿಡಿದು ವೇಗವಾಗಿ ಮಾರಾಟವಾಗುವ ಗ್ರಾಹಕ ಸರಕುಗಳವರೆಗೆ (ಎಫ್ಎಂಸಿಜಿ) ಗ್ರಾಮೀಣ ಭಾರತದಲ್ಲಿ ಒಟ್ಟಾರೆ ಬಳಕೆ ಹೆಚ್ಚುತ್ತಿದೆ. ದೇಶದ ಶೇ 20ರಷ್ಟು ಅಂದರೆ 150 ಜಿಲ್ಲೆಗಳಲ್ಲಿ ವಾರ್ಷಿಕ 5 ಲಕ್ಷ ರೂ. ಗಿಂತ ಹೆಚ್ಚಿನ ಆದಾಯ ಹೊಂದಿರುವ ಶೇ 60 ರಷ್ಟು ಕುಟುಂಬಗಳಿವೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

ಏತನ್ಮಧ್ಯೆ, ಒಟ್ಟು ಎಲೆಕ್ಟ್ರಿಕ್ ವಾಹನಗಳ ಮಾರಾಟ ಸೆಪ್ಟೆಂಬರ್​ನಲ್ಲಿ 1.59 ಲಕ್ಷ ಯುನಿಟ್​ಗೆ ತಲುಪಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಈ ಪ್ರಮಾಣ 1.29 ಲಕ್ಷ ಯುನಿಟ್​ಗಳಾಗಿತ್ತು.

0.90 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದು, ಕಳೆದ ವರ್ಷದ ಇದೇ ತಿಂಗಳಲ್ಲಿ ಇದ್ದ 0.64 ಲಕ್ಷ ಯುನಿಟ್​ಗಳಿಗಿಂತ ಹೆಚ್ಚಾಗಿದೆ. ಅಂಕಿಅಂಶಗಳ ಪ್ರಕಾರ, ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಮಾರಾಟವು 2023 ರ ಸೆಪ್ಟೆಂಬರ್​ನಲ್ಲಿ ಇದ್ದ 0.58 ಲಕ್ಷ ಯುನಿಟ್​ಗಳಿಗೆ ಹೋಲಿಸಿದರೆ ಈ ಬಾರಿ 0.63 ಲಕ್ಷ ವಾಹನ ಮಾರಾಟವಾಗಿವೆ.

ಇದನ್ನೂ ಓದಿ: ಅಕಾಲಿಕ ಮಳೆಯಿಂದ ಉಪ್ಪು ಉತ್ಪಾದನೆ ಕುಂಠಿತ: ಬೆಲೆಯೇರಿಕೆಯ ಆತಂಕ - Salt production decline

ETV Bharat Logo

Copyright © 2025 Ushodaya Enterprises Pvt. Ltd., All Rights Reserved.