ನೀವು ಕೆಲವು ಜನಪ್ರಿಯ ಬ್ರ್ಯಾಂಡ್‌ಗಳ ಉತ್ಪನ್ನಗಳ ಶಾಪಿಂಗ್ ಮಾಡುತ್ತಿರುತ್ತೀರಾ?. ಆ ಖರೀದಿಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ಪಡೆಯಲು ಬಯಸುತ್ತೀರಾ?. ಹಾಗಾದರೆ ಕೋ ಬ್ರ್ಯಾಂಡೆಂಡ್ ಕ್ರೆಡಿಟ್ ಕಾರ್ಡ್‌ಗಳು ನಿಮ್ಮ ಅಗತ್ಯಗಳನ್ನು ಸಂಪೂರ್ಣವಾಗಿ ಪೂರೈಸುತ್ತವೆ. ಇದರ ಜೊತೆಗೆ ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತವೆ. ಏಕೆಂದರೆ ಈ ರೀತಿಯ ಕ್ರೆಡಿಟ್ ಕಾರ್ಡ್‌ಗಳನ್ನು ಆಯಾ ಬ್ರ್ಯಾಂಡ್ ಉತ್ಪನ್ನ ಕಂಪನಿಗಳು ಮತ್ತು ಬ್ಯಾಂಕ್‌ಗಳು ಜಂಟಿಯಾಗಿ ನೀಡುತ್ತವೆ. 2025 ರಲ್ಲಿ ನೀವು ಪರಿಗಣಿಸಬೇಕಾದ ಟಾಪ್ 6 ಕೋ ಬ್ರ್ಯಾಂಡ್ ಕ್ರೆಡಿಟ್ ಕಾರ್ಡ್‌ಗಳ ಕುರಿತ ಮಾಹಿತಿ ಇಲ್ಲಿದೆ.
ಟಾಪ್ 6 ಕೋ ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್‌ಗಳು:
'ಫಿನ್ ಬೂಸ್ಟರ್'(Fin Booster):
- ಫಿನ್ ಬೂಸ್ಟರ್ ಎಂಬ ಕೋ ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ಅನ್ನು ಯೆಸ್ ಬ್ಯಾಂಕ್ ಮತ್ತು ಬ್ಯಾಂಕ್ ಬಜಾರ್ ಜಂಟಿಯಾಗಿ ನೀಡುತ್ತಿವೆ. ಇದಕ್ಕೆ ಮೊದಲ ವರ್ಷಕ್ಕೆ ಯಾವುದೇ ಶುಲ್ಕವಿಲ್ಲ.
- ಈ ಕ್ರೆಡಿಟ್ ಕಾರ್ಡ್‌ನೊಂದಿಗೆ ಶಾಪಿಂಗ್ ಮಾಡುವುದರಿಂದ ಬಂದ ರಿವಾರ್ಡ್ ಪಾಯಿಂಟ್‌ಗಳಿಗೆ ಎಕ್ಸ್ಪೈರಿ ಡೇಟ್ ಇರುವುದಿಲ್ಲ.
- ಆನ್‌ಲೈನ್‌ನಲ್ಲಿ ದಿನ ಬಳಕೆ ವಸ್ತುಗಳು, ಬಟ್ಟೆಗಳ ಶಾಪಿಂಗ್ ಮಾಡಿ ಈ ಕಾರ್ಡ್‌ನಿಂದ ಹಣ ಪಾವತಿ ಮಾಡಿದರೆ 3 ಪಟ್ಟು ಹೆಚ್ಚು ರಿವಾರ್ಡ್ ಪಾಯಿಂಟ್‌ಗಳು ಸಿಗುತ್ತವೆ.
- ಈ ಕಾರ್ಡ್‌ನೊಂದಿಗೆ ಹೋಟೆಲ್ ಮತ್ತು ರೆಸ್ಟೋರೆಂಟ್ನಲ್ಲಿ ಊಟ ಮಾಡಿ ಮತ್ತು ಆನ್‌ಲೈನ್‌ನಲ್ಲಿ ಊಟ ಆರ್ಡರ್ ಮಾಡಿ ಈ ಕಾರ್ಡ್ನಲ್ಲಿ ಪಾವತಿ ಮಾಡಿದರೆ 5 ಪಟ್ಟು ಹೆಚ್ಚು ರಿವಾರ್ಡ್ ಪಾಯಿಂಟ್‌ಗಳು ಬರುತ್ತವೆ.
- ಇಂಧನವನ್ನು ಹೊರತುಪಡಿಸಿ ಇತರ ರಿಟೈಲ್ ಖರೀದಿಗಳಿಗೆ ಈ ಕಾರ್ಡ್‌ನೊಂದಿಗೆ ನೀವು ಪಾವತಿಗಳನ್ನು ಮಾಡಿದರೆ, ಪ್ರತಿ 200 ಪಾವತಿಗೆ ನೀವು 2 ಪಾಯಿಂಟ್‌ಗಳನ್ನು ಪಡೆಯುತ್ತೀರಿ.
- ನೀವು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಈ ರಿವಾರ್ಡ್ ಪಾಯಿಂಟ್‌ಗಳನ್ನು ಸಹ ಹಂಚಿಕೊಳ್ಳಬಹುದು ಅಥವಾ ಅವುಗಳನ್ನು ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್‌ನಂತೆ ಬಳಸಬಹುದು.
- 400 ರೂ ನಿಂದ 5 ಸಾವಿರದೊಳಗೆ ಇಂಧನ ಹಾಕಿಸಿಕೊಂಡು ಈ ಕಾರ್ಡ್‌ನಿಂದ ಪಾವತಿ ಮಾಡಿದರೆ ಶೇ.1 ವರೆಗಿನ ಸರ್ಚಾರ್ಜ್ ಅನ್ನು ಕಡಿತ ಮಾಡಲಾಗುತ್ತದೆ. ಈ ರೀತಿ ತಿಂಗಳಿಗೆ ಗರಿಷ್ಠ 125 ರೂ ಕಡಿತವಾಗುತ್ತದೆ.
- ಈ ಕಾರ್ಡ್ ಹೊಂದಿರುವವರು 2.50 ಲಕ್ಷ ರೂ ಅಪಘಾತ ವಿಮೆ ಪಡೆಯಬಹುದು.
- ಕ್ರೆಡಿಟ್ ಫಿಟ್ನೆಸ್ ಟ್ರ್ಯಾಕರ್ ಅನ್ನು ಕಾರ್ಡ್ದಾರರಿಗೆ ನೀಡಲಾಗುತ್ತದೆ. ಇದರಲ್ಲಿ ನೀವು ಮಾಸಿಕ ಕ್ರೆಡಿಟ್ ಫಿಟ್ನೆಸ್ ವರದಿಯನ್ನು ಪರಿಶೀಲಿಸಬಹುದು. ಕ್ರೆಡಿಟ್ ಫಿಟ್ನೆಸ್ ಟ್ರ್ಯಾಕರ್ ವಾರ್ಷಿಕ ಶುಲ್ಕ 400 ರೂ ಆಗಿದೆ. ಕಾರ್ಡ್ ಮೂಲಕ ವರ್ಷಕ್ಕೆ 1 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದರೆ ಈ ಶುಲ್ಕವನ್ನು ಕಡಿತ ಮಾಡಲಾಗುತ್ತದೆ.
ಆರ್ಬಿಎಲ್ ಬ್ಯಾಂಕ್ ಬ್ಯಾಂಕ್ ಬಜಾರ್ ಸೇವ್ಮ್ಯಾಕ್ಸ್ ಕ್ರೆಡಿಟ್ ಕಾರ್ಡ್ ( RBL Bank BankBazaar SaveMax Credit Card):
- ಬ್ಯಾಂಕ್ ಬಜಾರ್ ಸೇವ್ಮ್ಯಾಕ್ಸ್ ಕ್ರೆಡಿಟ್ ಕಾರ್ಡ್ ಮೊದಲ ವರ್ಷಕ್ಕೆ ಯಾವುದೇ ಶುಲ್ಕ ವಿರುವುದಿಲ್ಲ.
- ಕ್ರೆಡಿಟ್ ಕಾರ್ಡ್ ಮೂಲಕ 2,500 ರೂ. ಕ್ಕಿಂತ ಹೆಚ್ಚು ಪಾವತಿ ಮಾಡಿಬೇಕಾದ ಸಂದರ್ಭದಲ್ಲಿ ಆಗ ಇಎಂಐ ಆಗಿ ಪರಿವರ್ತಿಸಬಹುದು.
- ಕ್ರೆಡಿಟ್ ಕಾರ್ಡ್‌ನಿಂದ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ನಗದು ಕಳುಹಿಸುವ ಸೌಲಭ್ಯವಿದೆ.
- ದಿನ ಬಳಕೆ ವಸ್ತುಗಳ ಪಾವತಿಗಳ ಮೇಲೆ 5 ಪಟ್ಟು ಹೆಚ್ಚು ಪಾಯಿಂಟ್‌ಗಳನ್ನು ಗಳಿಸಬಹುದು. (ತಿಂಗಳಿಗೆ 1000 ಪಾಯಿಂಟ್ಗಳವರೆಗೆ)
- ಕ್ಯಾಶ್ ಬ್ಯಾಕ್ ಆಫರ್‌ಗಳು: ಬುಕ್ ಮೈ ಶೋ, ಜೊಮ್ಯಾಟೊದಲ್ಲಿ ಮಾಡಿದ ವಹಿವಾಟಿನ ಮೇಲೆ ಶೇ.10 ರಷ್ಟು ಕ್ಯಾಶ್ ಬ್ಯಾಕ್ ಬರುತ್ತದೆ.
- ಇಎಂಐ ಇನ್ಫಿನಿಟಿ ಪಾಸ್: ಇಎಂಐಗಳನ್ನು ಸಣ್ಣ ಮೊತ್ತಗಳಾಗಿ ವಿಭಜಿಸುವಾಗ ವಿಧಿಸುವ ಶುಲ್ಕಗಳ ಮೇಲೆ ಶೇ.100ರಷ್ಟು ರಿಯಾಯಿತಿ ಸಿಗುತ್ತದೆ.
- RBL ಬ್ಯಾಂಕ್ ಮೈಕಾರ್ಡ್ ಅಪ್ಲಿಕೇಶನ್: ನೀವು ಈ ಅಪ್ಲಿಕೇಶನ್ ಮೂಲಕ ಕಾರ್ಡ್‌ಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ನೋಡಬಹುದು.
- ಕಾಂಟ್ಯಾಕ್ಟ್ ಲೆಸ್ ಪಾವತಿಗಳು: ಈ ಕಾರ್ಡ್‌ನೊಂದಿಗೆ ನೀವು ಚಿಲ್ಲರೆ ಅಂಗಡಿಗಳಲ್ಲಿ 5000 ರೂ ವರೆಗೆ ಕಾಂಟ್ಯಾಕ್ಟ್ ಲೆಸ್ ಪಾವತಿಗಳನ್ನು ಮಾಡಬಹುದು.
ಸ್ಟ್ಯಾಂಡರ್ಡ್ ಚಾರ್ಟರ್ಡ್ ಈಜ್ ಮೈ ಟ್ರಿಪ್' ಕ್ರೆಡಿಟ್ ಕಾರ್ಡ್( Standard Chartered EaseMyTrip Credit Card Key Features):
- 'ಸ್ಟ್ಯಾಂಡರ್ಡ್ ಚಾರ್ಟರ್ಡ್ ಈಜ್ ಮೈ ಟ್ರಿಪ್' ಕ್ರೆಡಿಟ್ ಕಾರ್ಡ್‌ಗೆ ಮೊದಲ ವರ್ಷದ ಶುಲ್ಕ 350ರೂ. ಇರುತ್ತದೆ.
- ನಮ್ಮ ದೇಶದಲ್ಲಿ ಅಥವಾ ವಿದೇಶದಲ್ಲಿ ಇರುವ ಹೋಟೆಲ್ ಬುಕ್ಕಿಂಗ್ ಮಾಡಿದರೆ ಶೇ.20 ರಷ್ಟು ರಿಯಾಯಿತಿ ಸಿಗುತ್ತದೆ. ದೇಶದಲ್ಲಿನ ಹೋಟೆಲ್ ಬುಕ್ಕಿಂಗ್ಗೆ ಗರಿಷ್ಠ 5 ಸಾವಿರ, ವಿದೇಶದಲ್ಲಿ ಹೋಟೆಲ್ ಬುಕ್ಕಿಂಗ್ಗೆ ಗರಿಷ್ಠವಾಗಿ 10 ಸಾವಿರ ರೂ ರಿಯಾಯಿತಿ ಸಿಗುತ್ತದೆ.
- ದೇಶೀಯ, ವಿದೇಶಿ ವಿಮಾನಗಳ ಬುಕ್ಕಿಂಗ್ಗಳ ಮೇಳೆ ಶೇ.10 ರಿಯಾಯಿತಿ ಸಿಗುತ್ತದೆ. ದೇಶೀಯ ವಿಮಾನಗಳ ಮೇಲೆ ಗರಿಷ್ಠ ಒಂದು ಸಾವಿರ, ವಿದೇಶಿ ವಿಮಾನಗಳ ಮೇಲೆ ಗರಿಷ್ಠ 5 ಸಾವಿರ ರಿಯಾಯಿತಿ ದೊರೆಯುತ್ತದೆ.
- ಬಸ್ಗಳ ಬುಕ್ಕಿಂಗ್ 500 ರೂಪಾತಿ ಮೀರಿದರೆ 125 ರೂ ರಿಯಾಯಿತಿ ಸಿಗುತ್ತದೆ.
- ಮೂರು ತಿಂಗಳಿಗೊಮ್ಮೆ ವಿಮಾನ ನಿಲ್ದಾಣಗಳಲ್ಲಿ ಒಂದು ಕಾಂಪ್ಲಿಮೆಂಟರಿ ವಿಶ್ರಾಂತಿ ಕೊಠಡಿ ಬಳಸಬಹುದು.
- ವರ್ಷಕ್ಕೆ ಎರಡು ಬಾರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶ್ರಾಂತಿ ಕೊಠಡಿ ಉಪಯೋಗಿಸಬಹುದು.
- ರಿವಾರ್ಡ್ ಪಾಯಿಂಟ್‌ಗಳಿಗೆ ಯಾವುದೇ ಪರಿಮಿತಿ ಇಲ್ಲ. ವಾರ್ಷಿಕವಾಗಿ ಗರಿಷ್ಠ 32 ಸಾವಿರ ರೂ. ವರೆಗೆ ಪ್ರಯೋಜನಗಳನ್ನು ಪಡೆಯಬಹುದು.
- ರಿಯಾಯಿತಿಗಳನ್ನು ಪಡೆಯಲು "EMTSCB" ಕೋಡ್ ಬಳಸಬೇಕು.
ಯಾತ್ರಾ ಎಸ್‌ಬಿಐ ಕಾರ್ಡ್ (Yatra SBI Card):
- ಯಾತ್ರಾ ಎಸ್‌ಬಿಐ ಕಾರ್ಡ್'ಗೆ ಮೊದಲ ವರ್ಷದ ಶುಲ್ಕ 499 ರೂ ಇದೆ.
- ದೇಶೀಯ ವಿಮಾನ ಟಿಕೆಟ್‌ಗಳ ಮೇಲೆ 1,000 ರೂ ರಿಯಾಯಿತಿ ನೀಡಲಾಗುತ್ತದೆ. ಆದರೆ ಕನಿಷ್ಠ ವಹಿವಾಟಿನ ಮೌಲ್ಯ 5 ಸಾವಿರ ರೂ ಇರಬೇಕು.
- ಅಂತಾರಾಷ್ಟ್ರೀಯ ವಿಮಾನ ಟಿಕೆಟ್ ಮೇಲೆ 4 ಸಾವಿರ ರೂ ರಿಯಾಯಿತಿ ಲಭ್ಯವಿದೆ. ಆದರೆ ಕನಿಷ್ಠ ವಹಿವಾಟು ಮೌಲ್ಯ 40 ಸಾವಿರ ರೂ ಇರಬೇಕು.
- ದೇಶದಲ್ಲಿ ಮಾಡುವ ಹೋಟೆಲ್ ಬುಕ್ಕಿಂಗ್ ಮೇಲೆ ಶೇ.20 ರಷ್ಟು ರಿಯಾಯಿತಿ ಸಿಗುತ್ತದೆ. ಕನಿಷ್ಠ ವಹಿವಾಟು ಮೌಲ್ಯ 3 ಸಾವಿರ ರೂ. ಇರಬೇಕು. ಗರಿಷ್ಠ 2 ಸಾವಿರ ರೂ ರಿಯಾಯಿತಿ ದೊರೆಯುತ್ತದೆ.
- ಮೊದಲ ವರ್ಷದಲ್ಲಿ ಈ ಕಾರ್ಡ್‌ನೊಂದಿಗೆ ತಿಂಗಳಿಗೆ ಸರಾಸರಿ 8,334 ವರೆಗೆ ಖರ್ಚು ಮಾಡಿದರೆ, ಎರಡನೇ ವರ್ಷದಲ್ಲಿ ವಾರ್ಷಿಕ ಶುಲ್ಕವನ್ನು ಕಡಿತ ಮಾಡಲಾಗುತ್ತದೆ.
- ವಾಹನಕ್ಕೆ ಇಂಧನ ಹಾಕಿಸಿಕೊಳ್ಳಲು 500 ರೂ ರಿಂದ 3 ಸಾವಿರದವರೆಗೆ ಪಾವತಿ ಮಾಡಿದರೆ ಶೇ.1ರಷ್ಟು ಹೆಚ್ಚುವರಿ ಶುಲ್ಕವನ್ನು ಕಡಿತ ಮಾಡಲಾಗುತ್ತದೆ. ಇದರಿಂದ 100 ರೂ ವರೆಗೆ ಪ್ರಯೋಜನೆ ಪಡೆಯಬಹುದು.
- ಈ ಕಾರ್ಡ್‌ನೊಂದಿಗೆ ಯಾತ್ರಾ .ಕಾಮ್ ಪೋರ್ಟಲ್‌ನಲ್ಲಿ ನೀವು ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿದರೆ, ನಿಮಗೆ ವಿಮಾನ ಅಪಘಾತದ ಕವರೇಜ್ ಒದಗಿಸುವ ವಿಮಾ ಪಾಲಿಸಿಯನ್ನು ನೀಡಲಾಗುತ್ತದೆ. ಇದರ ಮೌಲ್ಯ 50 ಲಕ್ಷ ರೂ ಆಗಿದೆ.
IRCTC SBI ಪ್ಲಾಟಿನಂ ಕಾರ್ಡ್:
- ಐಆರ್ಸಿಟಿಸಿ ಎಸ್‌ಬಿಐ ಪ್ಲಾಟಿನಂ ಕಾರ್ಡ್‌ನ ಮೊದಲ ವರ್ಷದ ಶುಲ್ಕ 500 ರೂ. ಆಗಿದೆ.
- ಐಆರ್ಸಿಟಿಸಿ ಮೂಲಕ AC1, AC2, AC3, AC CC ರೈಲು ಟಿಕೆಟ್‌ಗಳನ್ನು ಬುಕ್ ಮಾಡುವುದರಿಂದ ಶೇ.10 ಮೌಲ್ಯದ ರಿವಾರ್ಡ್‌ಪಾಯಿಂಟ್ ಸಿಗುತ್ತದೆ. 1 ಪಾಯಿಂಟ್ನ ಮೌಲ್ಯ 1 ರೂಪಾಯಿ ಆಗಿದೆ.
- ಐಆರ್ಸಿಟಿಸಿ ಮೂಲಕ ರೈಲು ಟಿಕೆಟ್‌ಗಳ ಬುಕ್ಕಿಂಗ್ ಮಾಡಿದರೆ ಶುಲ್ಕದ ಶೇ.1 ರಷ್ಟು ವಿನಾಯಿತಿ ನೀಡಲಾಗುತ್ತದೆ.
- ವಾಹನಕ್ಕೆ ಇಂಧನ ಹಾಕಿಸಿಕೊಳ್ಳಲು 500 ರೂ.ರಿಂದ 3 ಸಾವಿರ ರೂ. ವರೆಗೆ ವಹಿವಾಟು ನಡೆಸಿದರೆ ಶೇ.1ರಷ್ಟು ವಿನಾಯಿತಿ ನೀಡಲಾಗುತ್ತದೆ. ಗರಿಷ್ಠ 100 ರೂ. ಪ್ರಯೋಜನೆ ಪಡೆಯಬಹುದು.
- ಈ ಕಾರ್ಡ್‌ಗೆ 500 ರೂ. ನವೀಕರಣ ಶುಲ್ಕವನ್ನು ಪಾವತಿಸಿದರೆ 500 ರಿವಾರ್ಡ್ ಪಾಯಿಂಟ್‌ಗಳನ್ನು ನೀಡಲಾಗುತ್ತದೆ.
ಏರ್ ಇಂಡಿಯಾ ಎಸ್‌ಬಿಐ ಪ್ಲಾಟಿನಂ ಕಾರ್ಡ್(Air India SBI Platinum Card):
- 'ಏರ್ ಇಂಡಿಯಾ ಎಸ್‌ಬಿಐ ಪ್ಲಾಟಿನಂ' ಕಾರ್ಡ್‌ಗೆ ಮೊದಲ ವರ್ಷದ ಶುಲ್ಕ 1,499 ರೂ. ಇದೆ.
- ಏರ್ ಇಂಡಿಯಾ ಟಿಕೆಟ್‌ಗಳನ್ನು ಕಾಯ್ದಿರಿಸಲು ಖರ್ಚು ಮಾಡಿದ ಪ್ರತಿ 100 ರೂ ವಹಿವಾಟಿನ ಮೇಲೆ 15 ರಿವಾರ್ಡ್ ಪಾಯಿಂಟ್‌ಗಳು ಸಿಗುತ್ತದೆ. ಆದರೆ ಟಿಕೆಟ್‌ಗಳನ್ನು ಏರ್ ಇಂಡಿಯಾ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಬೇಕು.
- ದೇಶದಲ್ಲಿನ ವಿಮಾನ ನಿಲ್ದಾಣಗಳಲ್ಲಿರುವ ವೀಸಾ ಲಾಂಜ್‌ಗಳಲ್ಲಿ ವರ್ಷಕ್ಕೆ 8 ಬಾರಿ ಉಚಿತವಾಗಿ ವಿಶ್ರಾಂತಿ ಪಡೆಯಬಹುದು.
- ಈ ಕಾರ್ಡ್ ಮೂಲಕ ವಾರ್ಷಿಕ ಖರ್ಚಿನ ಆಧಾರದ ಮೇಲೆ ಉಡುಗೊರೆಯಾಗಿ 2000 ಪಾಯಿಂಟ್‌ಗಳು ಮತ್ತು ಬೋನಸ್ ಆಗಿ 15000 ಪಾಯಿಂಟ್‌ಗಳು ಸಿಗುತ್ತದೆ.
- ದೇಶದಾದ್ಯಂತ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ವಹಿವಾಟುಗಳ ಮೇಲೆ ಶೇ.1 ರಷ್ಟು ಹೆಚ್ಚುವರಿ ಶುಲ್ಕ ವಿನಾಯಿತಿ ನೀಡಲಾಗುತ್ತದೆ.
ಇದನ್ನೂ ಓದಿ: ನವೆಂಬರ್ 2024ರಲ್ಲಿ EPF ಗೆ 14.63 ಲಕ್ಷ ನೌಕರರ ಸೇರ್ಪಡೆ: 18 - 25 ವಯೋಮಾನದವರೇ ಅಧಿಕ
ಇದನ್ನೂ ಓದಿ: ನೀವು 10 ವರ್ಷ ಕೆಲಸ ಮಾಡಿದ್ದೀರಾ?: ಇನ್ಮುಂದೆ ಪ್ರತಿ ತಿಂಗಳು ಬರುತ್ತೆ ಇಷ್ಟು ಕನಿಷ್ಠ ಇಪಿಎಫ್ ಪಿಂಚಣಿ ಹಣ