ETV Bharat / entertainment

Ind vs Pak: ಸ್ಟೇಡಿಯಂನಲ್ಲಿ ಊರ್ವಶಿ ರೌಟೇಲಾ ಬರ್ತ್​​ಡೇ ಸೆಲೆಬ್ರೇಷನ್​​; ನಟಿಯೊಂದಿಗೆ 'ಪುಷ್ಪ' ಡೈರೆಕ್ಟರ್​ - URVASHI RAUTELA MEETS SUKUMAR

ಭಾನುವಾರ ನಡೆದ ಹೈವೋಲ್ಟೇಜ್​​ ಭಾರತ ಮತ್ತು ಪಾಕಿಸ್ತಾನ ಪಂದ್ಯದ ವೇಳೆ ತಮ್ಮ ಸೌಂದರ್ಯದಿಂದಲೇ ವಿಶ್ವದಾದ್ಯಂತ ಹೆಸರು ಮಾಡಿರುವ ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಹಾಗೂ ಪುಷ್ಪ ಖ್ಯಾತಿಯ ಸ್ಟಾರ್​ ಡೈರೆಕ್ಟರ್​​ ಸುಕುಮಾರ್​ ಭೇಟಿಯಾಗಿದ್ದಾರೆ.

urvashi rautela meets Sukumar
ಸುಕುಮಾರ್ ಜೊತೆ ಊರ್ವಶಿ ರೌಟೇಲಾ (IANS)
author img

By ETV Bharat Entertainment Team

Published : Feb 24, 2025, 1:49 PM IST

ಫೆಬ್ರವರಿ 23, ಭಾನುವಾರದಂದು ದುಬೈನಲ್ಲಿ ನಡೆದ ಭಾರತ ವರ್ಸಸ್ ಪಾಕಿಸ್ತಾನ ಪಂದ್ಯದ ವೇಳೆ ಬಾಲಿವುಡ್​ ನಟಿ ಊರ್ವಶಿ ರೌಟೇಲಾ, ಸೋನಮ್ ಕಪೂರ್, ಸೌತ್​ ಸೂಪರ್​ ಸ್ಟಾರ್ ಚಿರಂಜೀವಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಟೀಮ್ ಇಂಡಿಯಾವನ್ನು ಹುರಿದುಂಬಿಸಿರುವ ಫೋಟೋ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ತಮ್ಮ ಅದ್ಭುತ ಸೌಂದರ್ಯದಿಂದಲೇ ಹೆಸರುವಾಸಿಯಾಗಿರುವ ಊರ್ವಶಿ ರೌಟೇಲಾ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದ ಹಲವು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಅವು ನೆಟ್ಟಿಗರನ್ನು ಬಹುವಾಗಿ ಸೆಳೆದಿದೆ.

ದುಬೈನಲ್ಲಿ ನಡೆದ ಹೈವೋಲ್ಟೇಜ್​​ ಭಾರತ ಮತ್ತು ಪಾಕಿಸ್ತಾನ ಮ್ಯಾಚ್​​​ನಲ್ಲಿ ಗಣ್ಯಾತಿಗಣ್ಯರು ಭಾಗಿಯಾಗಿದ್ದರು. ಕ್ರೀಡಾಂಗಣದಲ್ಲಿದ್ದ ಚೆಲುವೆ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಫೆಬ್ರವರಿ 25ರಂದು ನಟಿ 31ನೇ ವಸಂತಕ್ಕೆ ಕಾಲಿಡಲಿರುವ ನಟಿ ಎರಡು ದಿನಗಳ ಮುಂಚಿತವಾಗಿ, ಭಾನುವಾರದಂದು ಮ್ಯಾಚ್​ ಸಂದರ್ಭ ತಮ್ಮ ಬರ್ತ್​​ಡೇ ಸೆಲೆಬ್ರೇಟ್​ ಮಾಡಿಕೊಂಡಿದ್ದಾರೆ. ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಪೋಸ್ಟ್​​ನಲ್ಲಿ, ಅವರು ಸಿಬ್ಬಂದಿಯೊಂದಿಗೆ ಕೇಕ್ ಹಿಡಿದು ಕ್ಯಾಮರಾಗೆ ಪೋಸ್ ಕೊಡುತ್ತಿರುವುದನ್ನು ಕಾಣಬಹುದು. ಇದು ಅವರ ಅಭಿಮಾನಿ ಅಥವಾ ಸಿಬ್ಬಂದಿಯಿಂದ ಸಿಕ್ಕಿರುವ ಸರ್ಪೈಸ್ ಆಗಿದೆ.

ಕೇಕ್ ಹಿಡಿದು ಫೋಟೋ ವಿಡಿಯೋಗಳಿಗೆ ಪೋಸ್​ ಕೊಟ್ಟಿರುವ ದೃಶ್ಯವನ್ನು ಹಂಚಿಕೊಂಡಿರುವ ಊರ್ವಶಿ ರೌಟೇಲಾ, ನನ್ನ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಟ್ಟಿದ್ದಕ್ಕೆ ಧನ್ಯವಾದಗಳು (ರೆಡ್​ ಹಾರ್ಟ್​​ ಎಮೋಜಿಯೊಂದಿಗೆ) ಎಂದು ಬರೆದುಕೊಂಡಿದ್ದಾರೆ.

ಬ್ಲಾಕ್​ಬಸ್ಟರ್ ಹಿಟ್​ ಪುಷ್ಪ ಡೈರೆಕ್ಟರ್​​ ಸುಕುಮಾರ್​ ಅವರ ಜೊತೆಗಿರುವ ಸುಂದರ ಕ್ಷಣವನ್ನು ಹಂಚಿಕೊಂಡಿರುವ ನಟಿ, "ನಿಮ್ಮ ಎಲ್ಲ ಅದ್ಭುತ ಸಾಧನೆಗಳಿಗೆ ಅಭಿನಂದನೆಗಳು ಸುಕುಮಾರ್ ಗಾರು! ನಿಮ್ಮ ಪ್ರತಿಭೆ ಹಾಗೂ ಸಿನಿಮಾ ಮೇಲಿನ ಸಮರ್ಪಣೆ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ, ಅಪಾರ ಮೆಚ್ಚುಗೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಛಾವಾ: 10 ದಿನಗಳಲ್ಲಿ 326 ಕೋಟಿ ಕಲೆಕ್ಷನ್​ ಮಾಡಿದ ಸಂಭಾಜಿ ಮಹಾರಾಜರ ಜೀವನಾಧಾರಿತ ಚಿತ್ರ

ಮತ್ತೊಂದು ವಿಡಿಯೋದಲ್ಲಿ, ಇಂಡಿಯಾ ಫ್ಲ್ಯಾಗ್​ ಹಿಡಿದು ದೇಶದ ಮೇಲಿನ ತಮ್ಮ ಗೌರವ, ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ನಟಿ ಶೇರ್​ ಮಾಡಿರುವ ಫೋಟೋ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಜಿತ್ ಕಾರು​ ಮತ್ತೆ ಅಪಘಾತ: ಸ್ಪೇನ್​ನಲ್ಲಿ ನಡೆಯುತ್ತಿದ್ದ ರೇಸಿಂಗ್ ಸ್ಪರ್ಧೆ ವೇಳೆ ಘಟನೆ- ವಿಡಿಯೋ

ದುಬೈ ಮೈದಾನದಲ್ಲಿ ಭಾನುವಾರದಂದು ನಡೆದ ರೋಚಕ ಪಂದ್ಯದಲ್ಲಿ ಭಾರತ ಗೆಲುವಿನ ನಗೆ ಬೀರಿದೆ. ವಿರಾಟ್​ ಕೊಹ್ಲಿ ಶತಕ, ಶ್ರೇಯಸ್​ ಅಯ್ಯರ್​ ಅರ್ಧಶತಕದ ಆಟದಿಂದ ಭಾರತ ಜಯಭೇರಿ ಬಾರಿಸಿದೆ. ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ 241 ರನ್​ಗಳನ್ನು ಸಂಪಾದಿಸಿತ್ತು. ಭಾರತ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಸೆಮಿಫೈನಲ್​ಗೆ ಎಂಟ್ರಿಕೊಟ್ಟ ಮೊದಲ ತಂಡವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.