ETV Bharat / health

ನಿಮ್ಮನ್ನು ಅತಿಯಾದ ತೇಗುವಿಕೆ ಸಮಸ್ಯೆ ಕಾಡುತ್ತಿದೆಯೇ?; ಈ ತೊಂದರೆ ಏಕೆ ಬರುತ್ತೆ? ಕಡಿಮೆ ಮಾಡೋದು ಹೇಗೆ ಗೊತ್ತೇ? - HOW TO STOP BURPING NATURALLY

How to Stop Burping Naturally: ಅತಿಯಾದ ತೇಗುವಿಕೆ ಸಮಸ್ಯೆಯನ್ನು ಪರಿಹರಿಸಲು ಒಂದು ಪೀಸ್​ ಶುಂಠಿ ಸೇವಿಸಿದರೆ ಪರಿಹಾರ ದೊರೆಯುತ್ತದೆ. ಇದರ ಜೊತೆಗೆ ತಜ್ಞರ ಮತ್ತಷ್ಟು ಸಲಹೆಗಳನ್ನು ತಿಳಿಯೋಣ.

HOW TO STOP BURPING NATURALLY  HOW TO RELIEVE BURPING NATURALLY  NATURAL REMEDIES TO STOP BURPING  HOME REMEDIES TO CURE BURPING
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Jan 22, 2025, 3:42 PM IST

How to Stop Burping Naturally: ಹಲವು ಜನರಿಗೆ ಊಟ ಮಾಡಿದ ನಂತರ ತೇಗುವಿಕೆ ಸಮಸ್ಯೆ ಕಾಡುತ್ತದೆ. ಆಹಾರ ಜೀರ್ಣವಾಗುವ ಸಂದರ್ಭಗಳಲ್ಲಿ ಹೊಟ್ಟೆಯಲ್ಲಿರುವ ಗ್ಯಾಸ್ ಶೇಖರಣೆಯಾಗುತ್ತದೆ. ಈ ಗ್ಯಾಸ್​ ಹೊರಗೆ ಬಂದರೆ ಕೊಂಚ ಸಮಾಧಾನ ಲಭಿಸುತ್ತದೆ. ನೀವು ನಾಲ್ಕು ಜನರ ಗುಂಪಿನಲ್ಲಿದ್ದರೆ ತೇಗುವಿಕೆ ಸಂಭವಿಸಿದರೆ, ನಿಮಗೆ ತುಂಬಾ ಅನಾನುಕೂಲ ಆಗುತ್ತದೆ. ಅಂತಹವರು ತಜ್ಞರು ತಿಳಿಸುವಂತಹ ಕೆಲವು ಸಲಹೆಗಳನ್ನು ಪಾಲಿಸಿದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಶುಂಠಿ: ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಶುಂಠಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ಔಷಧೀಯ ಗುಣಗಳು ತೇಗುವಿಕೆ ಸಮಸ್ಯೆ ತಡೆಯುತ್ತದೆ. ದಿನಕ್ಕೆ ಎರಡು ಅಥವಾ ಮೂರು ಬಾರಿ ಸಣ್ಣ ಶುಂಠಿಯನ್ನು ಅಗಿಯುವುದರಿಂದ ತೇಗುವಿಕೆ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತದೆ. ಶುಂಠಿಯನ್ನು ನೇರವಾಗಿ ತೆಗೆದುಕೊಳ್ಳಲು ಕಷ್ಟವಾಗುವವರು ಜೇನುತುಪ್ಪ ಇಲ್ಲವೇ ಸಕ್ಕರೆಯೊಂದಿಗೆ ಸೇವಿಸಲು ತಜ್ಞರು ತಿಳಿಸುತ್ತಾರೆ.

2018ರಲ್ಲಿ ಯುರೋಪಿಯನ್ ಜರ್ನಲ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿಯಲ್ಲಿ (European Journal of Gastroenterology and Hepatology) ಪ್ರಕಟವಾದ 'ಗ್ಯಾಸ್ಟ್ರಿಕ್ ಖಾಲಿಯಾಗುವುದು & ಬೆಲ್ಚಿಂಗ್ ಮೇಲೆ ಶುಂಠಿಯ ಸಾರದ ಪರಿಣಾಮ' (The effect of ginger extract on gastric emptying and belching) ಅಧ್ಯಯನದಲ್ಲಿ ಕಂಡು ಬಂದಿದೆ (ಸಂಶೋಧನೆ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).

ಇದರಿಂದಾಗಿ ಒಂದು ಟೀಸ್ಪೂನ್​ ಶುಂಠಿ ಪೀಸ್​ಗಳನ್ನು ತೆಗೆದುಕೊಂಡು 10 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ. ನಂತರ ಮಿಶ್ರಣವು ಬೆಚ್ಚಗಾಗುವವರೆಗೆ ಕಾಯಿರಿ. ಅದರೊಳಗೆ ಸ್ವಲ್ಪ ನಿಂಬೆ ರಸ ಇಲ್ಲವೇ ಜೇನುತುಪ್ಪದೊಂದಿಗೆ ಕುಡಿಯಿರಿ. ದಿನಕ್ಕೆ ಎರಡು ಅಥವಾ ಮೂರು ಬಾರಿ ಸೇವಿಸಿದರೆ ತೇಗುವಿಕೆ ಸಮಸ್ಯೆಯಿಂದ ಬೇಗನೆ ಪರಿಹಾರ ಪಡೆಯಬಹುದು.

ಪಪ್ಪಾಯಿ: ತೇಗುವಿಕೆ ಸಮಸ್ಯೆಯನ್ನು ನಿವಾರಿಸುವಲ್ಲಿ ಪಪ್ಪಾಯಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ಪಾಪೈನ್ ಕಿಣ್ವವು ಜೀರ್ಣಾಂಗ ವ್ಯವಸ್ಥೆ ಹಾಗೂ ಗ್ಯಾಸ್ಟ್ರಿಕ್​ಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಮೊಸರು: ಮೊಸರು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ ಎನ್ನುವುದನ್ನು ಅನೇಕ ಅಧ್ಯಯನಗಳು ಬಹಿರಂಗಪಡಿಸಿವೆ. ನಿರ್ದಿಷ್ಟವಾಗಿ ನಾವು ತೆಗೆದುಕೊಂಡ ಆಹಾರ ಜೀರ್ಣಿಸಿಕೊಳ್ಳಲು ಹಾಗೂ ತೇಗುವಿಕೆ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯವಾಗುವಂತಹ ಉತ್ತಮ ಬ್ಯಾಕ್ಟೀರಿಯಾಗಳನ್ನು ಉತ್ಪಾದಿಸಲು ಮೊಸರು ಪರಿಣಾಮಕಾರಿಯಾಗಿದೆ. ಮೊಸರು ತೇಗುವಿಕೆ ಸಮಸ್ಯೆಯನ್ನು ತ್ವರಿತವಾಗಿ ಕಡಿಮೆ ಮಾಡಲು ಬಳಕೆ ಮಾಡಬಹುದು. ಮೊಸರನ್ನು ಆಹಾರದ ಭಾಗವಾಗಿಸುವುದು. ಇದು ಜೀರ್ಣಕ್ರಿಯೆಯ ಕಾರ್ಯ ಸುಧಾರಿಸುತ್ತದೆ ಹಾಗೂ ಇತರ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಬಡೆಸೋಂಪು: ಹೆಚ್ಚಿನವರು ಊಟದ ನಂತರ ಬಡೆಸೋಂಪು ಸೇವಿಸುವ ಅಭ್ಯಾಸ ಹೊಂದಿದ್ದಾರೆ. ಇವುಗಳನ್ನು ತಿನ್ನುವುದರಿಂದ ತೆಗೆದುಕೊಂಡ ಆಹಾರ ತ್ವರಿತವಾಗಿ ಹಾಗೂ ಸುಲಭವಾಗಿ ಜೀರ್ಣವಾಗುತ್ತದೆ. ತೇಗುವಿಕೆ ಸಮಸ್ಯೆಯನ್ನು ಕಡಿಮೆ ಮಾಡಲು ಬಡೆಸೋಂಪು ಪರಿಣಾಮಕಾರಿಯಾಗಿದೆ. ಜೀರ್ಣಕ್ರಿಯೆಯು ಸುಗಮವಾಗಿ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತದೆ.

ನೀವು ನೇರವಾಗಿ ಬಡೆಸೋಂಪು ಸೇವಿಸದಿದ್ದರೆ, ಒಂದು ಕಪ್ ನೀರಿನಲ್ಲಿ ಒರಟಾಗಿ ರುಬ್ಬಿದ ಬಡೆಸೋಂಪು ಸೇರಿಸಿ ಹಾಗೂ ಸ್ವಲ್ಪ ಕಾಲ ಕುದಿಸಲು ಬಿಡಿ. ಈ ಮಿಶ್ರಣವನ್ನು ತಣ್ಣಗಾದ ಬಳಿಕ ಸೇವಿಸಿದರೆ ತೇಗುವಿಕೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ದಿನಕ್ಕೆರಡು ಬಾರಿ ಈ ಟಿಪ್ಸ್ ಪಾಲಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎನ್ನುತ್ತಾರೆ ತಜ್ಞರು.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು:

ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.