Carrot Cucumber Pan Cake Recipe: ಸಂಜೆಯ ಸಮಯದಲ್ಲಿ ಅನೇಕರಿಗೆ ಏನನ್ನಾದರೂ ಸ್ನ್ಯಾಕ್ಸ್ ತಿನ್ನಬೇಕು ಅನಿಸುತ್ತದೆ. ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಮಮ್ಮಿ ತಿನ್ನಲು ಏನಾದರೂ ತಿಂಡಿ ಇದೆಯೇ ಎಂದು ಸಾಮಾನ್ಯವಾಗಿ ಕೇಳುತ್ತಾರೆ. ಈ ವೇಳೆಯಲ್ಲಿ ಹೆಚ್ಚಿನವರು ಬಜ್ಜಿ, ಪಕೋಡಾ, ವಡೆ ಹಾಗೂ ವಿವಿಧ ತಿಂಡಿಗಳನ್ನು ಸಿದ್ಧಪಡಿಸುತ್ತಾರೆ. ಯಾವಾಗಲೂ ಒಂದೇ ಬಗೆಯ ತಿಂಡಿಗಳನ್ನು ಸೇವಿಸಿ ಬೇಜಾರಾಗಿದೆ. ಇದರಿಂದ ನಾವು ನಿಮಗೆ ಅದ್ಭುತವಾದ ರೆಸಿಪಿಯನ್ನು ನಾವು ತಂದಿದ್ದೇವೆ. ಅದುವೇ...'ಸೌತೆಕಾಯಿ- ಗಜ್ಜರಿ ಪ್ಯಾನ್ ಕೇಕ್ಸ್'. ಇವುಗಳು ತುಂಬಾ ರುಚಿಕರವಾಗಿದ್ದು, ಒಮ್ಮೆ ಸೇವಿಸಿದರೆ ಮತ್ತೆ ಮತ್ತೆ ಸೇವಿಸಬೇಕು ಅನಿಸುತ್ತದೆ. ಸೌತೆಕಾಯಿ- ಗಜ್ಜರಿ ಪ್ಯಾನ್ ಕೇಕ್ಸ್ ಎಣ್ಣೆಯನ್ನು ಹೀರಿಕೊಳ್ಳುವುದಿಲ್ಲ. ಈ ಸೂಪರ್ ಟೇಸ್ಟಿ ಸ್ನ್ಯಾಕ್ ರೆಸಿಪಿಗೆ ಯಾವ ಪದಾರ್ಥಗಳು ಬೇಕಾಗುತ್ತವೆ ಹಾಗೂ ರೆಡಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.
ಸೌತೆಕಾಯಿ- ಗಜ್ಜರಿ ಪ್ಯಾನ್ ಕೇಕ್ಸ್ಗೆ ಬೇಕಾಗುವ ಪದಾರ್ಥಗಳು:
- ಅಕ್ಕಿ ಹಿಟ್ಟು - ಕಾಲು ಕಪ್
- ಕಡಲೆ ಹಿಟ್ಟು - ಎರಡು ಟೀಸ್ಪೂನ್
- ಕಾರ್ನ್ ಹಿಟ್ಟು - ಎರಡು ಟೀಸ್ಪೂನ್
- ಸ್ಟಫಿಂಗ್ ಹಿಟ್ಟು - ಒಂದು ಟೀಸ್ಪೂನ್
- ಉಪ್ಪು - ರುಚಿಗೆ ಬೇಕಾಗುವಷ್ಟು
- ಕ್ಯಾರೆಟ್ - 1
- ಈರುಳ್ಳಿ - 1
- ಸೌತೆಕಾಯಿ - 1
- ಕಟ್ ಮಾಡಿದ ಕೊತ್ತಂಬರಿ ಸೊಪ್ಪು - ಸ್ವಲ್ಪ
- ಶುಂಠಿ ಪೇಸ್ಟ್ - ಅರ್ಧ ಟೀಸ್ಪೂನ್
- ಕಾಳುಮೆಣಸಿನ ಪುಡಿ - ಅರ್ಧ ಟೀಸ್ಪೂನ್
- ಬೇಕಿಂಗ್ ಪೌಡರ್ - ಅರ್ಧ ಟೀಸ್ಪೂನ್
- ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು (ಡೀಪ್ ಫ್ರೈ ಮಾಡಲು ಬೇಕಾಗುವಷ್ಟು)
ಸೌತೆಕಾಯಿ- ಗಜ್ಜರಿ ಪ್ಯಾನ್ ಕೇಕ್ಸ್ ತಯಾರಿಸುವ ವಿಧಾನ:
- ಮೊದಲು ಈರುಳ್ಳಿ ಸಣ್ಣಗೆ ಕತ್ತರಿಸಿ ಪಕ್ಕಕ್ಕೆ ಇಟ್ಟುಕೊಳ್ಳಿ. ಕ್ಯಾರೆಟ್ ಮತ್ತು ಸೌತೆಕಾಯಿಯನ್ನು ತುರಿದು ಇಟ್ಟುಕೊಳ್ಳಬೇಕಾಗುತ್ತದೆ.
- ಈಗ ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಸಣ್ಣದಾಗಿ ಕಟ್ ಮಾಡಿದ ಈರುಳ್ಳಿ, ತುರಿದ ಕ್ಯಾರೆಟ್ ಮತ್ತು ಸೌತೆಕಾಯಿ ಸೇರಿಸಿ.
- ನಂತರ ಅಕ್ಕಿ ಹಿಟ್ಟು, ಕಡೆಲೆ ಬೇಳೆ ಹಿಟ್ಟು, ಕಾರ್ನ್ ಫ್ಲೋರ್, ಸ್ಟಫಿಂಗ್ ಫ್ಲೋರ್, ಶುಂಠಿ ಪೇಸ್ಟ್, ಪೆಪ್ಪರ್ ಪೌಡರ್, ಉಪ್ಪು, ಬೇಕಿಂಗ್ ಪೌಡರ್, ಕೊತ್ತಂಬರಿ ಸೊಪ್ಪಿನ ಪುಡಿ, ಅರ್ಧ ಕಪ್ ನೀರು ಸೇರಿಸಿ ಹಾಗೂ ಈ ಹಿಟ್ಟಿನ ಮಿಶ್ರಣವನ್ನು ಚೆನ್ನಾಗಿ ಕಲಸಿಟ್ಟುಕೊಳ್ಳಿ. ನಂತರ ಸಣ್ಣ ವಡೆ ರೀತಿ ಮಾಡಿ ಇಡಬೇಕಾಗುತ್ತದೆ.
- ಅದಕ್ಕಾಗಿ ಚಪಾತಿ ಮಣೆಯ ಮೇಲೆ ಪಾಲಿಥಿನ್ ಪೇಪರ್ ಹರಡಿ. ಅದರ ಮೇಲೆ ಸ್ವಲ್ಪ ಎಣ್ಣೆಯನ್ನು ಹಚ್ಚಿ ಹಾಗೂ ಈ ಹಿಟ್ಟಿನಿಂದ ಸಣ್ಣ ವಡೆ ರೀತಿ ಮಾಡಿ. ಪ್ರತಿಯೊಂದನ್ನು ನಿಮ್ಮ ಬೆರಳುಗಳ ಸಹಾಯದಿಂದ ಅವುಗಳನ್ನು ಕಟ್ಲೆಟ್ನಂತೆಯೂ (ಪ್ಯಾನ್‌ಕೇಕ್) ಮಾಡಬಹುದು.
- ಈಗ ಸ್ಟೌವ್ ಮೇಲೆ ಪ್ಯಾನ್ ಇಟ್ಟು ಬಿಸಿ ಮಾಡಿ. ಪ್ಯಾನ್ ಬಿಸಿಯಾದ ಬಳಿಕ, ಈ ಹಿಂದೆ ಮಾಡಿದ ಪ್ಯಾನ್‌ಕೇಕ್‌ಗಳನ್ನು ಹಾಕಿ, ಎರಡೂ ಬದಿಗಳಲ್ಲಿ ಚೆನ್ನಾಗಿ ಫ್ರೈ ಮಾಡಬೇಕು.
- ಸರಿಯಾಗಿ ಬೆಂದ ಬಳಿಕ, ಪ್ಯಾನ್‌ಕೇಕ್ ತಟ್ಟೆಯಲ್ಲಿ ತೆಗೆದುಕೊಂಡು, ಟೊಮೆಟೊ ಸಾಸ್, ಕೆಚಪ್ ಅಥವಾ ರೈತಾದೊಂದಿಗೆ ತಿನ್ನಬಹುದು. ಇದೀಗ ತುಂಬಾ ರುಚಿಯಾದ ಸೌತೆಕಾಯಿ- ಗಜ್ಜರಿ ಪ್ಯಾನ್ ಕೇಕ್ಸ್ ರೆಡಿ! ನಿಮಗೆ ಇಷ್ಟವಾದರೆ ಸಂಜೆ ವೇಳೆಯಲ್ಲಿ ಟ್ರೈ ಮಾಡಿ ನೋಡಿ. ಮಕ್ಕಳಿಂದ ಹಿಡಿದು ಹಿರಿಯರೆಲ್ಲರೂ ಇಷ್ಟಪಟ್ಟು ಸೇವಿಸುತ್ತಾರೆ.
ಇದನ್ನೂ ಓದಿ: ಕ್ರಿಸ್ಪಿ & ಟೇಸ್ಟಿಯಾದ ಈರುಳ್ಳಿ ಬಜ್ಜಿ ಹತ್ತೇ ನಿಮಿಷದಲ್ಲಿ ರೆಡಿ: ಟೀ ಜೊತೆಗೆ ಬಿಸಿ ಬಿಸಿ ಬಜ್ಜಿ ತಿನ್ನುವ ಮಜವೇ ಬೇರೆ!