ಕರ್ನಾಟಕ

karnataka

ETV Bharat / business

ಆಸ್ಟನ್ ಮಾರ್ಟಿನ್​ನ 'Vantage' ಸ್ಪೋರ್ಟ್ಸ್ ಕಾರು ಬಿಡುಗಡೆ: ಬೆಲೆ ಎಷ್ಟು ಅಂತ ನೀವೇ ನೋಡಿ! - Aston Martin - ASTON MARTIN

ಆಸ್ಟನ್​ ಮಾರ್ಟಿನ್​ನ ಹೊಸ ಸ್ಪೋರ್ಟ್ಸ್​ ಕಾರು ವ್ಯಾಂಟೇಜ್ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

Aston Martin
Aston Martin

By ETV Bharat Karnataka Team

Published : Apr 23, 2024, 4:22 PM IST

ನವದೆಹಲಿ: ಆಸ್ಟನ್ ಮಾರ್ಟಿನ್ ಮಂಗಳವಾರ ಭಾರತದ ಮಾರುಕಟ್ಟೆಗೆ ತನ್ನ ಹೊಸ ಸ್ಪೋರ್ಟ್ಸ್ ಕಾರನ್ನು ಬಿಡುಗಡೆ ಮಾಡಿದೆ. ಆಸ್ಟನ್ ಮಾರ್ಟಿನ್​ನ 'ವ್ಯಾಂಟೇಜ್' ಮಾಡೆಲ್ ಕಾರಿಗೆ ಭಾರತದಲ್ಲಿ 3.99 ಕೋಟಿ ರೂ. (ಎಕ್ಸ್ ಶೋರೂಂ) ಬೆಲೆ ನಿಗದಿ ಮಾಡಲಾಗಿದೆ. ಕಂಪನಿಯ ಪ್ರಕಾರ, ಹೊಸ ವ್ಯಾಂಟೇಜ್ ಕಾರು ಬಲಿಷ್ಠವಾದ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಆಸ್ಟನ್ ಮಾರ್ಟಿನ್ ನ ಪ್ರಸಿದ್ಧ ಒನ್ -77 ಸೂಪರ್ ಕಾರ್​ನ ಮಾದರಿಯಲ್ಲೇ ಇದನ್ನು ವಿನ್ಯಾಸಗೊಳಿಸಲಾಗಿದೆ.

ಹೊಸ ವ್ಯಾಂಟೇಜ್ ಕಾರಿನಲ್ಲಿ ಅತ್ಯಾಧುನಿಕ 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ8 ಎಂಜಿನ್ ಅಳವಡಿಸಲಾಗಿದೆ. ಇದು ಕೇವಲ 3.4 ಸೆಕೆಂಡುಗಳಲ್ಲಿ 60 ಕಿ.ಮೀ ವೇಗವನ್ನು ತಲುಪುತ್ತದೆ ಹಾಗೂ 202 ಕಿ.ಮೀ ಗರಿಷ್ಠ ವೇಗದಲ್ಲಿ ಕಾರು ಚಲಿಸಬಹುದಾಗಿದೆ. ಇದಲ್ಲದೆ, ವಾಹನದ ಚಾಸಿಸ್ ಮತ್ತು ಪವರ್ ಟ್ರೇನ್ ಅನ್ನು ಉತ್ತಮವಾಗಿ ಟ್ಯೂನ್ ಮಾಡಲಾಗಿದೆ. ಇದು ಪರಿಪೂರ್ಣ 50:50 ತೂಕದ ಬ್ಯಾಲೆನ್ಸ್​ನಿಂದ ವಿನ್ಯಾಸಕ್ಕೆ ಪೂರಕವಾಗಿದೆ ಎಂದು ಕಂಪನಿ ಉಲ್ಲೇಖಿಸಿದೆ.

ವ್ಯಾಂಟೇಜ್ ಕಾರು 21-ಇಂಚಿನ ಫೋರ್ಜ್ಡ್​ ಚಕ್ರಗಳು, ಕ್ಯಾಸ್ಟ್-ಐರನ್ ಬ್ರೇಕ್ ಡಿಸ್ಕ್ ಗಳು ಮತ್ತು ಸುಧಾರಿತ ವಾಹನ ಡೈನಾಮಿಕ್ಸ್ ನಿಯಂತ್ರಣ ವ್ಯವಸ್ಥೆಯೊಂದಿಗೆ ಸ್ಟ್ಯಾಂಡರ್ಡ್ ಆಗಿದೆ ಎಂದು ಕಂಪನಿ ಹೇಳಿದೆ. ಒಳಭಾಗದಲ್ಲಿ, ವಾಹನವು ಹೊಸ 10.25-ಇಂಚಿನ ಇನ್ಫೋಟೈನ್ ಮೆಂಟ್ ಸಿಸ್ಟಮ್ ಮತ್ತು ಭೌತಿಕ ಬಟನ್ ಗಳು ಮತ್ತು ಸ್ವಿಚ್ ಗಳನ್ನು ಒಳಗೊಂಡಿರುವ ಡ್ಯಾಶ್ ಬೋರ್ಡ್ ಅನ್ನು ಹೊಂದಿದೆ.

ಆಸ್ಟನ್ ಮಾರ್ಟಿನ್​ ಇತರ ಕಾರುಗಳು: ಡಿಬಿ 11 ಇದು ಆಸ್ಟನ್ ಮಾರ್ಟಿನ್​ ಕಂಪನಿಯ ಅತ್ಯಂತ ಅಗ್ಗದ ಕಾರು ಆಗಿದೆ. ಇದರ ಬೆಲೆ ರೂ.3.29 ಕೋಟಿಗಳಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಕಂಪನಿಯ ಅತ್ಯಂತ ದುಬಾರಿ ಮಾದರಿ ಕಾರು ಡಿಬಿ 12 ನ ಬೆಲೆ ರೂ.4.59 ಕೋಟಿಗಳಿಂದ ಪ್ರಾರಂಭವಾಗುತ್ತದೆ. ಭಾರತದಲ್ಲಿ ಆಸ್ಟನ್ ಮಾರ್ಟಿನ್ 4 ಕಾರು ಮಾದರಿಗಳು ಲಭ್ಯವಿವೆ. ಇದರಲ್ಲಿ ಎಸ್ ಯುವಿ ವಿಭಾಗದಲ್ಲಿ 1 ಕಾರು, ಕನ್ವರ್ಟಿಬಲ್ ವಿಭಾಗದಲ್ಲಿ 1 ಕಾರು, ಕೂಪೆ ವಿಭಾಗದಲ್ಲಿ 2 ಕಾರುಗಳು ಸೇರಿವೆ.

ಆಸ್ಟನ್ ಮಾರ್ಟಿನ್ ಲಗೊಂಡ ಗ್ಲೋಬಲ್ ಹೋಲ್ಡಿಂಗ್ಸ್ ಪಿಎಲ್​ಸಿ ಇದು ಐಷಾರಾಮಿ ಸ್ಪೋರ್ಟ್ಸ್ ಕಾರುಗಳು ಮತ್ತು ಗ್ರ್ಯಾಂಡ್ ಟೂರರ್​ಗಳ ಬ್ರಿಟಿಷ್ ತಯಾರಕ ಕಂಪನಿಯಾಗಿದೆ. ಈ ಕಂಪನಿಯನ್ನು 1913 ರಲ್ಲಿ ಲಿಯೋನೆಲ್ ಮಾರ್ಟಿನ್ ಮತ್ತು ರಾಬರ್ಟ್ ಬ್ಯಾಮ್ ಫೋರ್ಡ್ ಸ್ಥಾಪಿಸಿದರು. ಆಸ್ಟನ್ ಮಾರ್ಟಿನ್ ಆರು ಖಂಡಗಳಲ್ಲಿ 50 ಕ್ಕೂ ಹೆಚ್ಚು ದೇಶಗಳಲ್ಲಿ 150 ಕ್ಕೂ ಹೆಚ್ಚು ಕಾರು ಡೀಲರ್ ಶಿಪ್ ಗಳನ್ನು ಹೊಂದಿದೆ.

ಇದನ್ನೂ ಓದಿ : ಗೂಗಲ್, ಎನ್ವಿಡಿಯಾದ ಎಐ ತಂತ್ರಜ್ಞಾನದಿಂದ ಚಂಡಮಾರುತಗಳ ನಿಖರ ಮುನ್ಸೂಚನೆ ಸಾಧ್ಯ: ವರದಿ - Artificial intelligence

For All Latest Updates

ABOUT THE AUTHOR

...view details