ನವದೆಹಲಿ:ಟೆಲಿಕಾಂ ದೈತ್ಯ ಭಾರ್ತಿ ಏರ್ ಟೆಲ್ ಜುಲೈ 3 ರಿಂದ ಜಾರಿಗೆ ಬರುವಂತೆ ಮೊಬೈಲ್ ಟಾರಿಫ್ಗಳನ್ನು ಹೆಚ್ಚಿಸುವುದಾಗಿ ಶುಕ್ರವಾರ ಪ್ರಕಟಿಸಿದೆ. ಪ್ರಿಪೇಡ್ ಅನ್ಲಿಮಿಟೆಡ್ ಕಾಲ್ ಯೋಜನೆಗಳನ್ನು ನೋಡುವುದಾದರೆ - 179 ರೂ. ಪ್ಲಾನ್ 199 ರೂ.ಗೆ, 455 ರೂ. ಪ್ಲಾನ್ 599 ರೂ.ಗೆ ಮತ್ತು 1,799 ರೂ. ಪ್ಲಾನ್ 1,999 ರೂ.ಗೆ ಹೆಚ್ಚಿಸಿದೆ.
ಪೋಸ್ಟ್ - ಪೇಯ್ಡ್ ಯೋಜನೆಗಳಿಗೆ 399 ರೂ.ಗಳ ಟ್ಯಾರಿಫ್ ಯೋಜನೆ ಈಗ 449 ರೂ., 499 ರೂ.ಗಳ ಯೋಜನೆ 549 ರೂ., 599 ರೂ.ಗಳ ಯೋಜನೆಯ ಬೆಲೆ 699 ರೂ. ಮತ್ತು 999 ರೂ.ಗಳ ಯೋಜನೆಯ ದರ ಈಗ 1199 ರೂ.ಗೆ ಹೆಚ್ಚಾಗಲಿದೆ. ಏರ್ಟೆಲ್ನ ಹೊಸ ಟಾರಿಫ್ಗಳು ಜುಲೈ 3 ರಿಂದ ಜಾರಿಗೆ ಬರಲಿದೆ.
ಪ್ರಿಪೇಯ್ಡ್ ಯೋಜನೆಗಳು:199 ರೂ.ಗಳ ಯೋಜನೆ: ಈ ಹಿಂದೆ 179 ರೂ.ಗಳ ದರ ಹೊಂದಿದ್ದ ಈ ಯೋಜನೆಯ ದರ ಈಗ 199 ರೂ. ಆಗಲಿದೆ. ಇದು 2 ಜಿಬಿ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್, 28 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ.
509 ರೂ.ಗಳ ಯೋಜನೆ: ಈ ಹಿಂದೆ 455 ರೂ.ಗಳಿದ್ದ ಈ ಯೋಜನೆಯ ದರ ಈಗ 509 ರೂ. ಆಗಲಿದೆ. ಇದು 6 ಜಿಬಿ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್, 84 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ.
- 1999 ರೂ.ಗಳ ಯೋಜನೆ: ಈ ಹಿಂದೆ 1799 ರೂ.ಗಳ ದರ ಹೊಂದಿದ್ದ ಈ ಯೋಜನೆಯ ದರ ಈಗ 1999 ರೂ. ಆಗಲಿದೆ. ಇದು 24 ಜಿಬಿ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್, 365 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ.
- 299 ರೂ.ಗಳ ಯೋಜನೆ: ಈ ಹಿಂದೆ 265 ರೂ.ಗಳಿದ್ದ ಈ ಯೋಜನೆಯ ದರ ಈಗ 299 ರೂ. ಆಗಲಿದೆ. ಇದು ದಿನಕ್ಕೆ 1 ಜಿಬಿ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್, 28 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ.
- 349 ರೂ.ಗಳ ಯೋಜನೆ:ಈ ಹಿಂದೆ 299 ರೂ.ಗಳ ದರ ಹೊಂದಿದ್ದ ಈ ಯೋಜನೆಯ ದರ ಈಗ 349 ರೂ. ಆಗಲಿದೆ. ಇದು ದಿನಕ್ಕೆ 1.5 ಜಿಬಿ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್, 28 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ.
- 409 ರೂ.ಗಳ ಯೋಜನೆ: ಈ ಹಿಂದೆ 359 ರೂ.ಗಳಿದ್ದ ಈ ಯೋಜನೆಯ ದರ ಈಗ 409 ರೂ. ಆಗಲಿದೆ. ಇದು ದಿನಕ್ಕೆ 2.5 ಜಿಬಿ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್, 28 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ.
- 449 ರೂ.ಗಳ ಯೋಜನೆ: ಈ ಹಿಂದೆ 399 ರೂ.ಗಳ ಬೆಲೆ ಹೊಂದಿದ್ದ ಈ ಯೋಜನೆಯ ಬೆಲೆ ಈಗ 449 ರೂ. ಇದು ದಿನಕ್ಕೆ 3 ಜಿಬಿ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ಅನ್ನು 28 ದಿನಗಳವರೆಗೆ ಒಳಗೊಂಡಿದೆ.
- 579 ರೂ.ಗಳ ಯೋಜನೆ:ಈ ಹಿಂದೆ 479 ರೂ.ಗಳಿದ್ದ ಈ ಯೋಜನೆಯ ಬೆಲೆ ಈಗ 579 ರೂ. ಇದು ದಿನಕ್ಕೆ 1.5 ಜಿಬಿ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ಅನ್ನು 56 ದಿನಗಳವರೆಗೆ ನೀಡುತ್ತದೆ.
- 649 ರೂ.ಗಳ ಯೋಜನೆ: ಈ ಹಿಂದೆ 549 ರೂ.ಗಳ ದರ ಹೊಂದಿದ್ದ ಈ ಯೋಜನೆಯ ದರ ಈಗ 649 ರೂ. ಆಗಲಿದೆ. ಇದು ದಿನಕ್ಕೆ 2 ಜಿಬಿ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್, 56 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ.
- 859 ರೂ.ಗಳ ಯೋಜನೆ: ಈ ಹಿಂದೆ 719 ರೂ.ಗಳಿದ್ದ ಈ ಯೋಜನೆಯ ದರ ಈಗ 859 ರೂ. ಆಗಲಿದೆ. ಇದು ದಿನಕ್ಕೆ 1.5 ಜಿಬಿ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್, 84 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ.
- 979 ರೂ.ಗಳ ಯೋಜನೆ: ಈ ಹಿಂದೆ 839 ರೂ.ಗಳಿದ್ದ ಈ ಯೋಜನೆಯ ದರ ಈಗ 979 ರೂ. ಆಗಲಿದೆ. ಇದು ದಿನಕ್ಕೆ 2 ಜಿಬಿ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್, 84 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ.
- 3599 ರೂ.ಗಳ ಯೋಜನೆ: ಈ ಹಿಂದೆ 2999 ರೂ.ಗಳಿದ್ದ ಈ ಯೋಜನೆಯ ದರ ಈಗ 3599 ರೂ. ಆಗಲಿದೆ. ಇದು ದಿನಕ್ಕೆ 2 ಜಿಬಿ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್, 365 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ.