ETV Bharat / health

ಒಂದು ದಿನದ ಉಪವಾಸದಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಗೊತ್ತೇ? - FASTING BENEFITS

Fasting Benefits: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಬಹುತೇಕರು ಒಂದು ದಿನ ಉಪವಾಸ ವ್ರತಾಚರಣೆ ಮಾಡುತ್ತಾರೆ. ಈ ಉಪವಾಸದಿಂದ ದೇಹದಲ್ಲಾಗುವ ಬದಲಾವಣೆಗಳೇನು ನೋಡೋಣ.

ONE DAY FASTING BENEFITS  MAHASHIVRATRI 2025  ಉಪವಾಸದ ಲಾಭಗಳು  fasting Benefits
ಸಾಂದರ್ಭಿಕ ಚಿತ್ರ (Freepik)
author img

By ETV Bharat Health Team

Published : Feb 26, 2025, 4:20 PM IST

Fasting Benefits: ಶತ ಶತಮಾನಗಳಿಂದಲೂ ಉಪವಾಸ ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗ. ಹಿಂದೂ ಧರ್ಮದಲ್ಲಿ ಜನರು ಷಷ್ಠಿ, ವೈಕುಂಠ ಏಕಾದಶಿ ಮತ್ತು ಮಹಾಶಿವರಾತ್ರಿಯಂತಹ ಪವಿತ್ರ ದಿನಗಳಲ್ಲಿ ಉಪವಾಸ ಮಾಡುತ್ತಾರೆ. ಅದೇ ರೀತಿ ಮುಸ್ಲಿಮರು ರಂಜಾನ್​ ತಿಂಗಳಲ್ಲಿ ಉಪವಾಸ ಅನುಸರಿಸುತ್ತಾರೆ. ಉಪವಾಸಗಳ ಸಮಯದಲ್ಲಿ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳು ಸಂಭವಿಸುತ್ತವೆ. ಉಪವಾಸವು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಶಕ್ತಿಗಾಗಿ ಬಳಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನ ಹೇಳುತ್ತದೆ.

ಉಪವಾಸದ ಮೊದಲ 6 ಗಂಟೆಗಳು: ನೀವು ಉಪವಾಸ ಆರಂಭಿಸಿದ ನಂತರದ ಮೊದಲ 6 ಗಂಟೆಗಳಲ್ಲಿ ನಿಮ್ಮ ದೇಹವು ನೀವು ಕೊನೆಯದಾಗಿ ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಸಂಗ್ರಹವಾಗಿರುವ ಗ್ಲೂಕೋಸ್ ಅನ್ನು ಶಕ್ತಿಯಾಗಿ ಬಳಸಲಾಗುತ್ತದೆ. ಉಪವಾಸದ ಉಳಿದ ಸಮಯದಲ್ಲಿ ನಿಮ್ಮ ದೇಹವು ಶಕ್ತಿಗಾಗಿ ಸಂಗ್ರಹವಾಗಿರುವ ಕೊಬ್ಬನ್ನು ಬಳಸುತ್ತದೆ ಎಂದು ಹಾರ್ವರ್ಡ್ ಹೆಲ್ತ್ ಪಬ್ಲಿಷಿಂಗ್ ಪ್ರಕಟಿಸಿದ ಅಧ್ಯಯನ ಸ್ಪಷ್ಟಪಡಿಸುತ್ತದೆ. ಇದರರ್ಥ ಉಪವಾಸವು 24 ಗಂಟೆಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ, ದೇಹದಲ್ಲಿ ಸಂಗ್ರಹವಾಗಿರುವ ಪ್ರೋಟೀನ್‌ಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಆರಂಭಿಸುತ್ತದೆ.

ONE DAY FASTING BENEFITS  MAHASHIVRATRI 2025  ಉಪವಾಸದ ಲಾಭಗಳು  FASTING BENEFITS
ತಲೆ ನೋವು- ಸಾಂದರ್ಭಿಕ ಚಿತ್ರ (Pexels)

ಉಪವಾಸದಿಂದ ಉಂಟಾಗುವ ಬದಲಾವಣೆಗಳೇನು?:

ತಲೆನೋವು: ಊಟ ಮಾಡದೆ ದೀರ್ಘಕಾಲ ಉಪವಾಸ ಮಾಡುವುದರಿಂದ ತಲೆನೋವು ಬರಬಹುದು. ಉಪವಾಸದ ದಿನದ ಕೊನೆಯಲ್ಲಿ ನಿಮಗೆ ತಲೆತಿರುಗುವಿಕೆ, ವಾಕರಿಕೆ, ತೀವ್ರ ತಲೆನೋವು ಉಂಟಾಗಬಹುದು. ಇದು ದೇಹದಲ್ಲಿ ಶಕ್ತಿಯ ಕೊರತೆ ಹಾಗೂ ಪೋಷಕಾಂಶಗಳ ಕೊರತೆಯಿಂದ ಉಂಟಾಗುತ್ತದೆ. ನಾವು ದಿನನಿತ್ಯ ಸೇವಿಸುವ ಆಹಾರವು ಹೆಚ್ಚಾಗಿ ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿದೆ. ಇದರಿಂದ ಉತ್ಪತ್ತಿಯಾಗುವ ಶಕ್ತಿಯು ದಿನವಿಡೀ ಸರಾಗವಾಗಿ ಕಾರ್ಯನಿರ್ವಹಿಸಲು ನಮಗೆ ಸಹಾಯ ಮಾಡುತ್ತದೆ. ಉಪವಾಸದ ಸಮಯದಲ್ಲಿ ಕಾರ್ಬೋಹೈಡ್ರೇಟ್‌ಗಳ ಕೊರತೆಯಿಂದ ಮೆದುಳಿಗೆ ಅಗತ್ಯವಿರುವ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಇದರಿಂದ ತಲೆನೋವು ಬರುತ್ತದೆ.

ನಿರ್ಜಲೀಕರಣ: ಕೆಲವರು ಉಪವಾಸದ ಸಮಯದಲ್ಲಿ ನೀರು ಕುಡಿಯುವುದಿಲ್ಲ. ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಜೊತೆಗೆ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ನೀರನ್ನು ಹೊಂದಿರುವ ಆಹಾರ ಸೇವಿಸದಿದ್ದರೆ, ಯಕೃತ್ತು ಹೆಚ್ಚುವರಿ ಗ್ಲೂಕೋಸ್ ಅಥವಾ ಗ್ಲೈಕೋಜೆನ್ ಬಳಸುತ್ತದೆ. ಇದು ದೇಹದ ಸಾಮಾನ್ಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.

ಸೋಡಿಯಂ ಕೊರತೆ: ಉಪವಾಸ ಪ್ರಯೋಜನಗಳನ್ನು ನೀಡುತ್ತಿದ್ದರೂ, ಅದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಇದು ದೇಹದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನ ಉಂಟುಮಾಡಬಹುದು. ಇದರಿಂದಾಗಿ ಖನಿಜಗಳು, ದ್ರವಗಳು ಹಾಗೂ ಸೋಡಿಯಂ ಕೊರತೆ ಉಂಟಾಗುತ್ತದೆ. ದೇಹದಲ್ಲಿನ ಸೋಡಿಯಂ ಜೀವಕೋಶಗಳ ಒಳಗೆ ಮತ್ತು ಸುತ್ತಮುತ್ತಲಿನ ದ್ರವದ ಸಮತೋಲನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಉಪವಾಸದ ಸಂದರ್ಭದಲ್ಲಿ ಗಮನಹರಿಸಿ:

  • ಉಪವಾಸದ ಸಮಯದಲ್ಲಿ ನಿಮ್ಮ ದೇಹವನ್ನು ಹೈಡ್ರೀಕರಿಸಿಟ್ಟುಕೊಳ್ಳಲು ಸಾಕಷ್ಟು ನೀರು, ಮಜ್ಜಿಗೆ, ತೆಂಗಿನ ನೀರು ಹಾಗೂ ಹಣ್ಣಿನ ರಸವನ್ನು ಕುಡಿಯಿರಿ. ನೀವು ಹಣ್ಣುಗಳನ್ನು ಸೇವಿಸಬಹುದು.
  • ಇವು ದೇಹವನ್ನು ಹೈಡ್ರೇಟ್ ಆಗಿಡುತ್ತವೆ. ತಲೆತಿರುಗುವಿಕೆ, ಆಯಾಸ, ತಲೆನೋವು ಮತ್ತು ಕೀಲು ನೋವಿನಂತಹ ಸಮಸ್ಯೆಗಳನ್ನು ತಡೆಯುತ್ತವೆ. ಆರೋಗ್ಯಕರ ಉಪವಾಸ ಆಚರಿಸಲು ನಿಮಗೆ ಸಹಾಯವಾಗುತ್ತದೆ.

ಉಪವಾಸದ ಪ್ರಯೋಜನಗಳೇನು?:

ತೂಕ ಇಳಿಕೆ: ವಾರದಲ್ಲಿ 1 ಅಥವಾ 2 ದಿನ ಉಪವಾಸ ಮಾಡುವುದು ಎಂದರೆ ಕಡಿಮೆ ಕ್ಯಾಲೊರಿಗಳನ್ನು ಸೇವಿಸುವುದು ಎಂದರ್ಥ. ಇದಲ್ಲದೆ, ಅಂತಾರಾಷ್ಟ್ರೀಯ ಸಂಸ್ಥೆಯೊಂದು ನಡೆಸಿದ ಅಧ್ಯಯನವು 24 ಗಂಟೆಗಳ ಉಪವಾಸದಿಂದ ಬರುವ ಶಕ್ತಿಯ ನಿರ್ಬಂಧವು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ.

ದೇಹದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ- ಸಾಂದರ್ಭಿಕ ಚಿತ್ರ (Pexels)

ಕೊಲೆಸ್ಟ್ರಾಲ್ & ಸಕ್ಕರೆ ಮಟ್ಟ ನಿಯಂತ್ರಣ: ಉಪವಾಸ ನಿಮ್ಮ ದೇಹವು ಕೊಬ್ಬು ಹಾಗೂ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಮ್ಮ ಚಯಾಪಚಯ ಕ್ರಿಯೆಯಲ್ಲಿನ ಈ ಬದಲಾವಣೆಗಳು ಮಧುಮೇಹ ಮತ್ತು ಹೃದ್ರೋಗದಂತಹ ಪರಿಸ್ಥಿತಿಗಳನ್ನು ಅಭಿವೃದ್ಧಿಪಡಿಸುವ ಅಪಾಯ ಕಡಿಮೆ ಮಾಡಲು ಸಹಾಯವಾಗುತ್ತದೆ. ಇದು ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯುತ್ತದೆ.

ಹೆಚ್ಚಿನ ಮಾಹಿತಿಗೆ ಈ ವೆಬ್​ಸೈಟ್ ಅ​ನ್ನು ವೀಕ್ಷಿಸಬಹುದು:

https://www.health.harvard.edu/blog/should-you-try-intermittent-fasting-for-weight-loss-202207282790

ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.