ಕರ್ನಾಟಕ

karnataka

ETV Bharat / bharat

ಅರಣ್ಯ ಇಲಾಖೆ ಸಿಬ್ಬಂದಿಗೆ ಕನಿಷ್ಠ ರೂ. 18,000 ವೇತನ ನಿಗದಿ ; ಯುಪಿ ಸರ್ಕಾರದಿಂದ ಉಡುಗೊರೆ - Forest department salary - FOREST DEPARTMENT SALARY

ಉತ್ತರ ಪ್ರದೇಶ ಅರಣ್ಯ ಇಲಾಖೆಯು ಉದ್ಯೋಗಿಗಳಿಗೆ ಕನಿಷ್ಠ 18,000 ರೂ. ವೇತನ ನಿಗದಿಪಡಿಸಿದೆ. ಇದರಿಂದ 3,209 ಉದ್ಯೋಗಿಗಳಿಗೆ ನೇರ ಪ್ರಯೋಜನ ಸಿಗಲಿದೆ.

CM Yogi Adityanath
ಸಿಎಂ ಯೋಗಿ ಆದಿತ್ಯನಾಥ್ (ETV Bharat)

By ETV Bharat Karnataka Team

Published : Sep 26, 2024, 5:17 PM IST

ಲಕ್ನೋ (ಉತ್ತರ ಪ್ರದೇಶ) : ಉತ್ತರ ಪ್ರದೇಶ ಅರಣ್ಯ ಇಲಾಖೆಯ (ಯುಪಿ ಸರ್ಕಾರಿ ನೌಕರರು) ಉದ್ಯೋಗಿಗಳಿಗೆ ಯೋಗಿ ಸರ್ಕಾರ ಉಡುಗೊರೆಯನ್ನು ನೀಡಿದೆ. ಈಗ ಅರಣ್ಯ ಇಲಾಖೆಯ ದಿನಗೂಲಿ ನೌಕರರಿಗೆ ಮಾಸಿಕ ಕನಿಷ್ಠ 18000 ರೂ. ಸಂಬಳ ಸಿಗಲಿದೆ. ಆದರೆ, ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ದಿನಗೂಲಿ ಕಾರ್ಮಿಕನ ಸೇವೆಗೆ ಕನಿಷ್ಠ 10 ವರ್ಷ ಆಗಿರಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.

ಸರ್ಕಾರದ ಈ ಕ್ರಮವು 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಕೆಲಸ ಮಾಡುವ ಸುಮಾರು 3,209 ಉದ್ಯೋಗಿಗಳಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ. ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೋಜ್ ಸಿಂಗ್ ಈ ಕುರಿತು ಸರ್ಕಾರಿ ಆದೇಶ ಹೊರಡಿಸಿದ್ದು, ಇದರಿಂದ ನೌಕರರು ಸಂತಸಗೊಂಡಿದ್ದಾರೆ.

ಸರ್ಕಾರದ ಆದೇಶದಲ್ಲಿ ಏನಿದೆ? ನವೆಂಬರ್ 9, 2023 ರಂದು ಅಲಹಾಬಾದ್ ಹೈಕೋರ್ಟ್‌ನ ಆದೇಶದ ಮೇರೆಗೆ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಈ ಆದೇಶವನ್ನು ಹೊರಡಿಸಿದ್ದಾರೆ. ಎಲ್ಲ ಇಲಾಖೆಗಳೊಂದಿಗೆ ಸಮಾಲೋಚಿಸಿ ಈ ನಿಟ್ಟಿನಲ್ಲಿ ನೀತಿ ರೂಪಿಸಲು ಕಾಲಾವಕಾಶ ಹಿಡಿಯುವ ಸಾಧ್ಯತೆ ಇದ್ದು, ಹೀಗಾಗಿ ನ್ಯಾಯಾಲಯದ ಆದೇಶ ಧಿಕ್ಕರಿಸುವುದನ್ನು ತಪ್ಪಿಸಲು ಈ ಆದೇಶ ಹೊರಡಿಸಲಾಗುತ್ತಿದೆ ಎಂದು ಸರ್ಕಾರದ ಈ ಆದೇಶದಲ್ಲಿ ಹೇಳಲಾಗಿದೆ. ಸಂಬಂಧಪಟ್ಟ ಎಲ್ಲ ವಿಭಾಗೀಯ ಅರಣ್ಯಾಧಿಕಾರಿಗಳು ಈ ಮೊತ್ತವನ್ನು ನೌಕರರಿಗೆ ಕೂಡಲೇ ನೀಡುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ವಿಭಾಗೀಯ ಅರಣ್ಯಾಧಿಕಾರಿಗಳಿಂದ ವೇತನ ಪಾವತಿ : ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಕೆಲಸ ಮತ್ತು ಬಜೆಟ್ ಆಧಾರದ ಮೇಲೆ ದೈನಂದಿನ ಕೂಲಿ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಾರೆ. ಅವರು ದಿನಗೂಲಿ ಕಾರ್ಮಿಕರ ಉದ್ಯೋಗದ ಅವಧಿಯನ್ನು ಪರಿಶೀಲಿಸಿದ ನಂತರವೇ ವಿಭಾಗೀಯ ಅರಣ್ಯಾಧಿಕಾರಿಗಳು ವೇತನ ಪಾವತಿ ಮಾಡುತ್ತಾರೆ.

ಎಷ್ಟು ಕಾರ್ಮಿಕರಿಗೆ ಅನುಕೂಲ? : ಕಾರ್ಮಿಕರಿಗೆ ಮಾಸಿಕ ಕನಿಷ್ಠ 18 ಸಾವಿರ ರೂ. ವೇತನ ನೀಡುವಂತೆ ಸ್ಪಷ್ಟ ಆದೇಶ ನೀಡಿರುವುದು ಗಮನಾರ್ಹ. ಅರಣ್ಯ ಇಲಾಖೆಯಲ್ಲಿ ನಿಯೋಜನೆಗೊಂಡಿರುವ ಸುಮಾರು 3,209 ಕಾರ್ಮಿಕರು ಮಾಸಿಕ ಕನಿಷ್ಠ 18,000 ರೂ. ಸಂಬಳ ಪಡೆಯಲಿದ್ದಾರೆ.

ಇದನ್ನೂ ಓದಿ :ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆಗೆ ಕೇಂದ್ರ ಸರ್ಕಾರ ಅಸ್ತು: ಏನಿದರ ಲಾಭ? - NEW Pension SCHEME

ABOUT THE AUTHOR

...view details