ETV Bharat / bharat

ಭಾಗವತ್ ಸಂವಿಧಾನ ರಚನೆಕಾರರಲ್ಲ, ರಾಜಕೀಯದಿಂದ ರಾಮನನ್ನು ದೂರವಿಡಿ: ಸಂಜಯ್​ ರಾವುತ್ - SANJAY RAUT ON BHAGWAT

ಸ್ವಾತಂತ್ರ್ಯದ ಬಗ್ಗೆ ಹೇಳಿಕೆ ನೀಡಿದ್ದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಅವರಿಗೆ ಶಿವಸೇನಾ ನಾಯಕ ಸಂಜತ್​ ರಾವುತ್​ ತಿರುಗೇಟು ನೀಡಿದ್ದಾರೆ.

ಮೋಹನ್ ಭಾಗವತ್, ಸಂಜಯ್​ ರಾವುತ್
ಮೋಹನ್ ಭಾಗವತ್, ಸಂಜಯ್​ ರಾವುತ್ (ETV Bharat)
author img

By PTI

Published : Jan 14, 2025, 8:09 PM IST

ಮುಂಬೈ (ಮಹಾರಾಷ್ಟ್ರ) : ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣದ ಬಳಿಕ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಉದ್ಧವ್​ ಠಾಕ್ರೆ ಬಣದ ಶಿವಸೇನಾ ಸಂಸದ ಸಂಜಯ್ ರಾವುತ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್​​) ಮುಖ್ಯಸ್ಥರು ಸಂವಿಧಾನದ ನಿರ್ಮಾತೃಗಳಲ್ಲ. ಪ್ರಭು ಶ್ರೀರಾಮನನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು. ಸ್ವಾತಂತ್ರ್ಯ ಸಿಕ್ಕಿದ್ದು 1947 ರಲ್ಲಿ ಎಂದು ಹೇಳಿದ್ದಾರೆ.

"ಆರ್‌ಎಸ್‌ಎಸ್ ಮುಖ್ಯಸ್ಥರು ಗೌರವಾನ್ವಿತ ವ್ಯಕ್ತಿ. ಆದರೆ, ಅವರು ಸಂವಿಧಾನದ ರಚನೆಕಾರರಲ್ಲ. ಅವರಿಂದ ಈ ದೇಶದ ಕಾನೂನುಗಳನ್ನು ರಚಿಸಲು ಮತ್ತು ಬದಲಿಸಲು ಸಾಧ್ಯವಿಲ್ಲ. ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ನಿಜಕ್ಕೂ ದೇಶಕ್ಕೆ ಹೆಮ್ಮೆಯ ಕ್ಷಣ. ಮಂದಿರ ನಿರ್ಮಾಣಕ್ಕೆ ಎಲ್ಲರೂ ಕೊಡುಗೆ ನೀಡಿದ್ದಾರೆ. ಇದರಿಂದಾಗಿ ದೇಶವು ಈಗ ಸ್ವತಂತ್ರವಾಯಿತು ಎಂದು ಭಾವಿಸುವುದು ತಪ್ಪು" ಎಂದಿದ್ದಾರೆ.

ಭಾರತವು 1947 ರಲ್ಲಿ ಸ್ವಾತಂತ್ರ್ಯ ಹೊಂದಿತು. ರಾಜಕೀಯ ಲಾಭಕ್ಕಾಗಿ ರಾಮನ ಬಳಕೆ ಸಲ್ಲದು. ಪ್ರಭು ಶ್ರೀರಾಮ ಈ ಭೂಮಿ ಮೇಲೆ ಸಾವಿರಾರು ವರ್ಷಗಳಿಂದ ಅಸ್ತಿತ್ವ ಹೊಂದಿದ್ದಾನೆ. ನಾವು ರಾಮನಿಗಾಗಿ ಹೋರಾಡಿದ್ದೇವೆ, ಹೋರಾಡುತ್ತಲೇ ಇರುತ್ತೇವೆ. ರಾಜಕೀಯ ಲಾಭಕ್ಕಾಗಿ ರಾಮನ ಪ್ರತಿಷ್ಠಾಪನೆಯು ದೇಶಕ್ಕೆ ನಿಜವಾದ ಸ್ವಾತಂತ್ರ್ಯ ತಂದುಕೊಟ್ಟಿತು ಎನ್ನುವುದು ಅರ್ಥಹೀನ ಎಂದು ರಾವುತ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರ್​ಎಸ್​ಎಸ್​ ಮುಖ್ಯಸ್ಥರು ಹೇಳಿದ್ದೇನು?: ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಆರ್​ಎಸ್​​ಎಸ್​ ಮುಖ್ಯಸ್ಥರ ಮೋಹನ್​ ಭಾಗವತ್ ಅವರು, ರಾಮ ಮಂದಿರ ಪ್ರತಿಷ್ಠಾಪನಾ ದಿನವನ್ನು ಪ್ರತಿಷ್ಠಾ ದ್ವಾದಶಿ ಎಂದು ಆಚರಿಸಬೇಕು. ಕಾರಣ, ಶತಮಾನಗಳಿಂದ ಪರಾಚಕ್ರ (ವಿದೇಶಿ ಆಕ್ರಮಣ) ಎದುರಿಸಿದ್ದ ಭಾರತ ಅಂದು ನಿಜವಾದ ಸ್ವಾತಂತ್ರ್ಯ ಪ್ರಾಪ್ತಿ ಮಾಡಿಕೊಂಡಿತು ಎಂದಿದ್ದರು.

ಅಯೋಧ್ಯೆಯಲ್ಲಿ ವಿಶ್ವವೇ ಬೆರಗಾಗುವ ರೀತಿಯಲ್ಲಿ ನಿರ್ಮಿಸಲಾದ ರಾಮ ಮಂದಿರವನ್ನು 2024ರ ಜನವರಿ 22 ರಂದು ಉದ್ಘಾಟಿಸಲಾಯಿತು.

ಇದನ್ನೂ ಓದಿ: ಜನಸಂಖ್ಯಾ ಬೆಳವಣಿಗೆ ದರ ಶೇ 2.1ಕ್ಕಿಂತ ಕಡಿಮೆಯಾದರೆ ಅಪಾಯ, ಕನಿಷ್ಠ 3 ಮಕ್ಕಳನ್ನಾದರೂ ಹೆರಬೇಕು: ಭಾಗವತ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.