ಬೆಂಗಳೂರು: ಪ್ರೋ ಕಬಡ್ಡಿ ಲೀಗ್ನಲ್ಲಿ ಮುಖ್ಯ ತರಬೇತುದಾರ ಹುದ್ದೆಯಿಂದ ರಣಧೀರ್ ಸಿಂಗ್ ಸೆಹ್ರಾವತ್ ಅವರನ್ನ ಬೆಂಗಳೂರು ಬುಲ್ಸ್ ಫ್ರಾಂಚೈಸಿ ಬಿಡುಗಡೆಗೊಳಿಸಿದೆ.
ಈ ಕುರಿತು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಮಾಹಿತಿ ನೀಡಿರುವ ಬೆಂಗಳೂರು ಬುಲ್ಸ್ ಫ್ರಾಂಚೈಸಿ, 'ತಂಡದ ಅವಿಭಾಜ್ಯ ಅಂಗವಾಗಿದ್ದ ರಣಧೀರ್ ಸಿಂಗ್ ಅವರ ಸಮರ್ಪಣೆಯು ನಾವು ಒಟ್ಟಾಗಿ ಆಚರಿಸಿದ ಯಶಸ್ಸು ಮತ್ತು ಸಾಧನೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಬಣ್ಣಿಸಿದೆ.
𝗧𝗲𝗮𝗺 𝗕𝗲𝗻𝗴𝗮𝗹𝘂𝗿𝘂 𝗕𝘂𝗹𝗹𝘀 𝗮𝗻𝗻𝗼𝘂𝗻𝗰𝗲𝘀 𝘁𝗵𝗲 𝗿𝗲𝗹𝗲𝗮𝘀𝗲 𝗼𝗳 𝗥𝗮𝗻𝗱𝗵𝗶𝗿 𝗦𝗶𝗻𝗴𝗵 𝗦𝗲𝗵𝗿𝗮𝘄𝗮𝘁 𝗮𝘀 𝗵𝗲𝗮𝗱 𝗰𝗼𝗮𝗰𝗵.
— Bengaluru Bulls (@BengaluruBulls) January 28, 2025
For over a decade, “Coach Saab” Randhir has been a cornerstone of our team’s journey, playing an integral role (1/3) pic.twitter.com/tlIds31f3Y
ಸುದೀರ್ಘ ಕೋಚಿಂಗ್ ಪಯಣದಲ್ಲಿ ಪಿಕೆಎಲ್ ಮ್ಯಾನೇಜ್ಮೆಂಟ್, ಬೆಂಗಳೂರು ಬುಲ್ಸ್ ಫ್ರಾಂಚೈಸಿಯ ಸಹಕಾರ ಹಾಗೂ ತಂಡದ ಆಟಗಾರರು ತಮ್ಮ ಮೇಲಿರಿಸಿದ ನಂಬಿಕೆಗೆ ಧನ್ಯವಾದ ಸೂಚಿಸಿರುವ ರಣಧೀರ್ ಸಿಂಗ್, ಫ್ರಾಂಚೈಸಿಯ ಮುಂದಿನ ಪಯಣಕ್ಕೆ ಶುಭಾಶಯ ಕೋರಿದ್ದಾರೆ.
ಲೀಗ್ನ ಚೊಚ್ಚಲ ಆವೃತ್ತಿಯಿಂದ ಬೆಂಗಳೂರು ಬುಲ್ಸ್ ತಂಡದ ಮುಖ್ಯ ತರಬೇತುದಾರರಾಗಿ ರಣಧೀರ್ ಸಿಂಗ್ ಸೆಹ್ರಾವತ್ ಕಾರ್ಯ ನಿರ್ವಹಿಸಿದ್ದರು. ರಣಧೀರ್ ಸಿಂಗ್ ಅವರ ತರಬೇತಿಯಲ್ಲಿಯೇ ಪ್ರೋ ಕಬಡ್ಡಿಯ 6ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಚಾಂಪಿಯನ್ ಪಟ್ಟಕ್ಕೇರಿತ್ತು.
ಆದರೆ ಕಳೆದ ಎರಡು ಆವೃತ್ತಿಗಳಲ್ಲಿ 8 ಹಾಗೂ 12ನೇ ಸ್ಥಾನಕ್ಕೆ ಕುಸಿಯುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಸದ್ಯ ರಣಧೀರ್ ಸಿಂಗ್ ಅವರಿಂದ ತೆರವಾದ ಸ್ಥಾನಕ್ಕೆ ಬುಲ್ಸ್ ಫ್ರಾಂಚೈಸಿ ಯಾರನ್ನ ಕರೆತರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಐಸಿಸಿ ವರ್ಷದ ಅತ್ಯುತ್ತಮ ಟಿ-20 ತಂಡ ಪ್ರಕಟ: ಭಾರತೀಯನಿಗೆ ನಾಯಕ ಪಟ್ಟ!