ಕರ್ನಾಟಕ

karnataka

ETV Bharat / bharat

ಈ ಊರಲ್ಲಿ ಕಳೆದ 70 ವರ್ಷಗಳಿಂದ ದೀಪಾವಳಿಯನ್ನ ಆಚರಿಸಿಯೇ ಇಲ್ಲ: ಏಕೆ ಅಂತೀರಾ?

70 ವರ್ಷಗಳಿಂದ ದೀಪಾವಳಿ ಆಚರಿಸದ ಕಿತ್ತಂಪೇಟ ಗ್ರಾಮ - ಈ ಬಗ್ಗೆ ಗ್ರಾಮಸ್ಥರು ಏನು ಹೇಳಿದ್ದಾರೆ ಅಂತಾ ತಿಳಿಯಲು ಈ ಸುದ್ದಿ ಓದಿ

they-donot-celebrate-diwali-this-village-has-a-history-in-andhra-pradesh
ಈ ಊರಲ್ಲಿ ಕಳೆದ 70 ವರ್ಷಗಳಿಂದ ದೀಪಾವಳಿಯನ್ನ ಆಚರಿಸಿಯೇ ಇಲ್ಲ: ಯಾಕೆ ಅಂತೀರಾ? (ETV Bharat)

By ETV Bharat Karnataka Team

Published : Oct 30, 2024, 1:30 PM IST

ಅನಕಪಲ್ಲಿ, ಆಂಧ್ರಪ್ರದೇಶ: The Village do not Celebrate Diwali:ದೇಶಾದ್ಯಂತ ಈಗ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಜನರು ಸಂತಸ ದಿಂದ ದೀಪಗಳ ಹಬ್ಬವನ್ನು ಆಚರಿಸಲು ಅಣಿಯಾಗಿದ್ದಾರೆ. ಈ ಹಬ್ಬದಂದು ಸಂಬಂಧಿಕರಿಗೆ ಸಿಹಿ ಹಂಚಿ ಶುಭ ಕೋರುವುದು ಕಾಮನ್​. ಅಷ್ಟೇ ಅಲ್ಲ. ಬಗೆಬಗೆಯ ಸಿಹಿ ಅಡುಗೆ ತಯಾರಿಸಿ, ಹೊಸ ಬಟ್ಟೆಗಳನ್ನು ಧರಿಸಿ, ಸಂಜೆ ದೀಪ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮ ಪಡುತ್ತೇವೆ. ಮಕ್ಕಳು ಮತ್ತು ದೊಡ್ಡವರು ಪಟಾಕಿ ಸಿಡಿಸುವ ಮೂಲಕ ತುಸು ಹೆಚ್ಚೇ ಸದ್ದು ಮಾಡ್ತಾರೆ.

ಈ ಊರಲ್ಲಿ ಇಲ್ಲ ದೀಪಾವಳಿಯ ಬೆಳಕು:ಆದರೆ, ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಕಿತ್ತಂಪೇಟ ಎಂಬ ಗ್ರಾಮದಲ್ಲಿ ಸುಮಾರು 70 ವರ್ಷಗಳಿಂದ ದೀಪಾವಳಿ ಆಚರಣೆ ಮಾಡುತ್ತಿಲ್ಲ. ದೀಪಾವಳಿಯಿಂದ ಈ ಗ್ರಾಮ ದೂರವೇ ಉಳಿದಿದೆ. ಯಾಕೆ ಅಂತಾ ಗ್ರಾಮಸ್ಥರು ಹೇಳುವುದು ಹೀಗೆ

ಕಿತ್ತಂಪೇಟ ಗ್ರಾಮವು ರವಿಕಮಠ ಮಂಡಲ, ಬೆನ್ನಾವರಂ ಪಂಚಾಯತಿ ವ್ಯಾಪ್ತಿಯಲ್ಲಿ ಬರುತ್ತದೆ 450 ಮನೆಗಳಿದ್ದು, ಸುಮಾರು 1500 ಜನಸಂಖ್ಯೆ ಹೊಂದಿದ ಗ್ರಾಮವಾಗಿದೆ. ರಾಜಕೀಯ ಜಾಗೃತಿಯಿಂದ ಈ ಗ್ರಾಮದ ಜನರು ಸರಪಂಚರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಈ ಗ್ರಾಮ ದೀಪಾವಳಿ ಹಬ್ಬದಿಂದ ದೂರ ಉಳಿದಿದೆ ಎನ್ನುತ್ತಾರೆ ಗ್ರಾಮಸ್ಥರು. ಸ್ಥಳೀಯರಾದ ಜಾಜಿಮೊಗ್ಗಲ ಮಾಣಿಕ್ಯಂ, ಮುಚ್ಚಕ್ಕರ್ಲ ನೂಕುನಾಯ್ಡು ಮತ್ತು ಜಂಪಾ ಈಶ್ವರ ರಾವ್ ಅವರು ಮಾತನಾಡಿ, ನಾವು ಸಣ್ಣವರಿದ್ದಾಗಿಂದಲೂ ನಮ್ಮೂರಲ್ಲಿ ನಾವು ದೀಪಾವಳಿ ಆಚರಿಸಿರುವುದನ್ನು ನೋಡಿಲ್ಲ. ಅದೇ ಸಂಪ್ರದಾಯ ಈಗಲೂ ಮುಂದುವರೆದಿದೆ ಅಂತಾರೆ ಇವರೆಲ್ಲ.

ಬೆಂಕಿ ಹೊತ್ತಿ ಜೀವಗಳು ಬಲಿಯಾಗಿದ್ದರಿಂದ ಈ ರೂಢಿ:ನಮ್ಮ ಊರಿನಲ್ಲಿ ಎಲ್ಲರಂತೆ 70 ವರ್ಷಗಳ ಹಿಂದೆ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದರು. 70 ವರ್ಷಗಳ ಹಿಂದೆ ಇಡೀ ಊರು ತರಕಾರಿಗಳಿಂದ ತುಂಬಿತ್ತು. ಮನೆಯ ಆವರಣದಲ್ಲಿ ಹಸು, ಎಮ್ಮೆ, ಮೇಕೆ, ಕುರಿಗಳನ್ನು ಸಾಕಲಾಗಿತ್ತು. ದೀಪಾವಳಿಯ ದಿನದ ಸಂಭ್ರಮಾಚರಣೆ ವೇಳೆ, ಬೆಂಕಿಯ ಕಿಡಿಗಳು ಬಿದ್ದು ಮನೆಗಳೆಲ್ಲ ಸುಟ್ಟು ಕರಕಲಾಗಿದ್ದವು. ಭೀಕರ ಅಗ್ನಿ ದುರಂತದಲ್ಲಿ ಮೂಕ ಜೀವಿಗಳು ಪ್ರಾಣ ಕಳೆದುಕೊಂಡವು. ದೀಪಾವಳಿಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸಾವು ಸಂಭವಿಸಿದವು. ಹೀಗಾಗಿ ಗ್ರಾಮದ ಹಿರಿಯರೆಲ್ಲ ಸೇರಿ ದೀಪಾವಳಿಯಂದು ದೀಪಗಳನ್ನು ಹಚ್ಚುವುದನ್ನು ನಿಲ್ಲಿಸಿ ಬಿಟ್ಟರು. ಒಂದೊಮ್ಮೆ ದೀಪಗಳನ್ನು ಹಚ್ಚಿದರೆ ಅನಿಷ್ಟ ಸಂಭವಿಸುತ್ತಿದೆ ಎಂದು ಭಾವಿಸಿದ್ದರು. ಇಂತಹ ಭೀಕರ ಘಟನೆಗಳು ಮುಂದೆ ನಡೆಯಬಾರದು ಎಂಬ ಆಶಯದೊಂದಿಗೆ ಈ ದಿನಗಳಂದು ಗ್ರಾಮದಲ್ಲಿ ಯಾರೂ ಸಂಭ್ರಮಾಚರಣೆ ಮಾಡಬಾರದು ಎಂಬ ತೀರ್ಮಾನಕ್ಕೆ ಬಂದರಂತೆ. ಅಂದು ಗ್ರಾಮದ ಹಿರಿಯರೆಲ್ಲ ಸೇರಿ ತೆಗೆದುಕೊಂಡ ಆ ತೀರ್ಮಾನ, ಆಗ ಆಚರಿಸದಿರುವುದು ರೂಢಿಯಾಗಿ ಬರುತ್ತಿದೆಯಂತೆ.

ಗ್ರಾಮಸ್ಥರ ಹೇಳುವುದೇನು?; 'ನಾವು ಹುಟ್ಟುವ ಮೊದಲು ನಾನು ಊಹಿಸುವಷ್ಟು ದೀಪಾವಳಿಯನ್ನು ಗ್ರಾಮದಲ್ಲಿ ಆಚರಿಸುತ್ತಿರಲಿಲ್ಲ. ಆ ದಿನಗಳಲ್ಲಿ, ಹಬ್ಬದ ದಿನದಂದು ದುರಂತ ಘಟನೆಗಳು ಸಂಭವಿಸಿದವು ಮತ್ತು ಹಬ್ಬವು ಸರಿಯಾಗಿ ನಡೆಯದ ಕಾರಣ ಪಂಜು ಸುಡುವುದನ್ನು ನಿಲ್ಲಿಸಿದರು ಎಂದು ಹೇಳಲಾಗುತ್ತದೆ ಎಂದು ಗ್ರಾಮಸ್ಥರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಇದನ್ನು ಓದಿ:ಒಡಿಶಾ ರೈಲು ದುರಂತ: ಆರೋಪಿಗಳಿಗೆ ಹೈಕೋರ್ಟ್​ ಜಾಮೀನು

ಸೇತುವೆ ತಡೆಗೋಡೆಗೆ ರಭಸವಾಗಿ ಗುದ್ದಿದ ಬಸ್​: ರಾಜಸ್ಥಾನದಲ್ಲಿ 12 ಮಂದಿ ಸಾವು

ABOUT THE AUTHOR

...view details