ಭರತ್‌ಪುರ (ರಾಜಸ್ಥಾನ) : ಭಾರತದ ಜೀವವೈವಿಧ್ಯ ಮತ್ತು ಪ್ರಕೃತಿ ಸೌಂದರ್ಯ ಮತ್ತೊಮ್ಮೆ ವಿಶ್ವ ವೇದಿಕೆಯಲ್ಲಿ ತನ್ನ ಛಾಪು ಮೂಡಿಸಿದೆ. ಮುಂಬೈ ಮೂಲದ ವನ್ಯಜೀವಿ ಛಾಯಾಗ್ರಾಹಕ ಹೀರಾ ಪಂಜಾಬಿ ತೆಗೆದ ಅಪರೂಪದ ಛಾಯಾಚಿತ್ರವು ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನಕ್ಕೆ (ಘಾನಾ) ಅಂತಾರಾಷ್ಟ್ರೀಯ ಮನ್ನಣೆಯನ್ನು ನೀಡಿದೆ.
ಗಿಳಿ ಮತ್ತು ಉಡುವಿನ ನಡುವಿನ ಸಂಘರ್ಷದ ಕ್ಷಣವನ್ನು ಸೆರೆಹಿಡಿದಿರುವ ಈ ಚಿತ್ರವು ಪ್ರಕೃತಿಯ ಸೌಂದರ್ಯ ಎತ್ತಿ ತೋರಿಸುತ್ತದೆ. ಮಾತ್ರವಲ್ಲದೇ ಅದರ ಸಂರಕ್ಷಣೆಯ ಮಹತ್ವ ಒತ್ತಿ ಹೇಳುತ್ತದೆ. ಈ ಒಂದು ಚಿತ್ರವು ಭಾರತ ಸೇರಿದಂತೆ 11 ದೇಶಗಳಲ್ಲಿ ಘಾನಾಗೆ ಹೊಸ ಗುರುತು ನೀಡಿದೆ.
ಮೂರು ದಿನಗಳಲ್ಲಿ ಕ್ಲಿಕ್ ಮಾಡಿದ ಅದ್ಭುತ ಚಿತ್ರ : ಹೀರಾ ಪಂಜಾಬಿ ಅವರು ಜನವರಿ 2024 ರಲ್ಲಿ ಘಾನಾದ ಈ ಐತಿಹಾಸಿಕ ಚಿತ್ರವನ್ನು ಕ್ಲಿಕ್ ಮಾಡಿರುವುದಾಗಿ ತಿಳಿಸಿದರು. ಈ ಚಿತ್ರದಲ್ಲಿ ಉಡುವಿನ ಮೇಲೆ ಗಿಳಿ ದಾಳಿ ಮಾಡುವುದು ಸೆರೆಯಾಗಿದೆ.
ಉಡುವೊಂದು ಗಿಳಿಗಳ ಗೂಡಿನ ಕಡೆಗೆ ಚಲಿಸಿದಾಗ ಗಿಳಿ ಅದರ ಬಾಲವನ್ನು ಕೊಕ್ಕಿನಿಂದ ಕಚ್ಚುತ್ತದೆ. ಈ ದೃಶ್ಯ ಸುಮಾರು 45 ನಿಮಿಷಗಳ ಕಾಲ ನಡೆದಿದೆ. ಚಿತ್ರದ ಈ ಕ್ಷಣವು ಪ್ರಕೃತಿಯ ಹೋರಾಟ ಮತ್ತು ಸಹಬಾಳ್ವೆಯ ಆಳವನ್ನು ನಿರೂಪಿಸುತ್ತದೆ. ಈ ಚಿತ್ರವನ್ನು ಬಿಬಿಸಿ ವನ್ಯಜೀವಿ ಸೇರಿದಂತೆ 11 ದೇಶಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರಕಟಿಸಲಾಗಿದೆ.
ಈ ಚಿತ್ರವು ಜಾಗತಿಕ ಮಟ್ಟದಲ್ಲಿ ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನದ ಜೀವವೈವಿಧ್ಯಕ್ಕೆ ಹೊಸ ಗುರುತನ್ನು ನೀಡಿದೆ. ಈ ಫೋಟೋವನ್ನು ಭಾರತ, ಫ್ರಾನ್ಸ್, ಇಟಲಿ, ಸ್ಪೇನ್, ಬೆಲ್ಜಿಯಂ, ರೊಮೇನಿಯಾ, ಪೋರ್ಚುಗಲ್, ಕ್ಯಾಲಿಫೋರ್ನಿಯಾ, ರಷ್ಯಾ, ವಾಷಿಂಗ್ಟನ್ ಮತ್ತು ಲಂಡನ್‌ನಲ್ಲಿ ಪ್ರಕಟಿಸಲಾಗಿದೆ.
ಘಾನಾದೊಂದಿಗೆ ವಿಶೇಷ ಸಂಪರ್ಕ: ಹೀರಾ ಪಂಜಾಬಿ ಮತ್ತು ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನಕ್ಕೆ ಸುಮಾರು 34 - 35 ವರ್ಷಗಳ ಒಡನಾಟ. ಪ್ರತಿ ವರ್ಷ ಈ ಉದ್ಯಾನವನಕ್ಕೆ ಭೇಟಿ ನೀಡುವ ಪಂಜಾಬಿಯವರು ಈ ಸ್ಥಳವು ವನ್ಯಜೀವಿ ಛಾಯಾಗ್ರಹಣಕ್ಕೆ ಸ್ವರ್ಗವಾಗಿದೆ ಎಂದು ಹೇಳುತ್ತಾರೆ. ಪ್ರತಿ ಬಾರಿಯೂ ಇಲ್ಲಿ ಹೊಸದನ್ನು ನೋಡಬಹುದು ಮತ್ತು ಅನುಭವಿಸಬಹುದು. 1999ರಲ್ಲಿ ಘಾನಾದಲ್ಲಿ ಕ್ಲಿಕ್ಕಿಸಿದ ಫೋಟೋವೊಂದಕ್ಕೆ ತೈವಾನ್‌ನಲ್ಲಿ ತನ್ನ ಮೊದಲ ಅಂತಾರಾಷ್ಟ್ರೀಯ ಚಿನ್ನದ ಪದಕವನ್ನು ಪಡೆದಿದ್ದೇನೆ ಎಂದು ಹೀರಾ ಪಂಜಾಬಿ ಹೇಳಿದ್ದಾರೆ.
50 ದೇಶಗಳಲ್ಲಿ ಪ್ರಕಟವಾದ ಫೋಟೋಗಳು : ಹೀರಾ ಪಂಜಾಬಿಯ ಹತ್ತಾರು ಫೋಟೋಗಳನ್ನು ಇದುವರೆಗೆ 50 ದೇಶಗಳ ನಿಯತಕಾಲಿಕೆಗಳು ಮತ್ತು ಮಾಧ್ಯಮ ವೇದಿಕೆಗಳಲ್ಲಿ ಪ್ರಕಟಿಸಲಾಗಿದೆ. ಅವರ ಛಾಯಾಗ್ರಹಣಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳೂ ಸಂದಿವೆ.
ಕಾಡುಗಳ ಮೇಲಿನ ಮೋಹ : ಹೀರಾ ಪಂಜಾಬಿಗೆ ಕಾಡುಗಳ ಮೇಲೆ ಇನ್ನಿಲ್ಲದ ಮೋಹವಿದೆ. ತಮ್ಮ 60ರ ಹರೆಯದಲ್ಲೂ ವರ್ಷದ 200 ದಿನಗಳನ್ನು ಕಾಡಿನಲ್ಲೇ ಕಳೆಯುತ್ತಾರೆ. ನನಗೆ ಬದುಕಲು ಅರಣ್ಯವೇ ಸ್ಫೂರ್ತಿ ಎಂದಿದ್ದಾರೆ. ಕಾಡಿನಲ್ಲಿ ಕಳೆದ ಪ್ರತಿ ಕ್ಷಣವೂ ನನ್ನನ್ನು ಜೀವಂತಗೊಳಿಸುತ್ತದೆ. ಅವರ ಘಾನಾದ ಈ ಚಿತ್ರವು ಪ್ರಕೃತಿಯ ಅದೃಶ್ಯ ಅಂಶಗಳನ್ನು ಜಗತ್ತಿಗೆ ತರಲು ಬಯಸುವ ಎಲ್ಲ ಛಾಯಾಗ್ರಾಹಕರಿಗೆ ಸ್ಫೂರ್ತಿಯಾಗಿದೆ.
ಘಾನಾಗೆ ಹೊಸ ಸಾಧ್ಯತೆಗಳು: ಈ ಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾದ ನಂತರ ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನವು ಪ್ರವಾಸೋದ್ಯಮ ಮತ್ತು ಸಂಶೋಧನೆಗೆ ಹೊಸ ಅವಕಾಶಗಳನ್ನು ಪಡೆಯುವ ನಿರೀಕ್ಷೆಯಿದೆ.
ಜಾಗತಿಕ ಮಟ್ಟದಲ್ಲಿ ಭಾರತದ ಜೀವವೈವಿಧ್ಯವನ್ನು ಪ್ರದರ್ಶಿಸಲು ಇದು ಉತ್ತಮ ಉದಾಹರಣೆಯಾಗಿದೆ. ಹೀರಾ ಪಂಜಾಬಿಯ ಈ ಸಾಧನೆಯು ವನ್ಯಜೀವಿ ಛಾಯಾಗ್ರಹಣ ಮತ್ತು ಸಂರಕ್ಷಣೆಯ ಕಡೆಗೆ ಹೊಸ ಸ್ಫೂರ್ತಿಯನ್ನು ನೀಡಿದೆ. ಅವರ ಕೆಲಸವು ಮುಂದಿನ ಪೀಳಿಗೆಗೆ ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅದನ್ನು ಸಂರಕ್ಷಿಸುವ ಸಂದೇಶವನ್ನು ನೀಡುತ್ತದೆ.
ಇದನ್ನೂ ಓದಿ : ಗುಬ್ಬಚ್ಚಿಗಳು ಏಕೆ ಕಣ್ಮರೆಯಾದವು?: ವನ್ಯಜೀವಿ ತಜ್ಞ ಕೃಪಾಕರ ಸಂದರ್ಶನ - wildlife expert Krupakar