ಕರ್ನಾಟಕ

karnataka

ETV Bharat / bharat

ಸಲ್ಮಾನ್​ ಖಾನ್​ಗೆ ನಿಲ್ಲದ ಬೆದರಿಕೆ: ಬಿಷ್ಣೋಯಿ ಸಹೋದರನ ಹೆಸರಲ್ಲಿ ₹5 ಕೋಟಿ ಹಣಕ್ಕೆ ಬೇಡಿಕೆ - SALMAN KHAN GETS ANOTHER THREAT

ಮುಂಬೈ ಟ್ರಾಫಿಕ್​ ಪೊಲೀಸ್​ ಸಹಾಯವಾಣಿಗೆ ಮಧ್ಯರಾತ್ರಿ ಬೆದರಿಕೆ ಕರೆ ಬಂದಿದ್ದು, 5 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಡಲಾಗಿದೆ.

salman-khan-gets-another-threat-asked-to-cough-up-rs-5-cr
ನಟ ಸಲ್ಮಾನ್​ ಖಾನ್​ (ANI)

By PTI

Published : Nov 5, 2024, 11:37 AM IST

Updated : Nov 5, 2024, 12:03 PM IST

ಮುಂಬೈ:ಎನ್​ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಬಳಿಕ ನಟ ಸಲ್ಮಾನ್​ ಖಾನ್​ಗೆ ಒಂದರ ಮೇಲೊಂದಂತೆ ಬೆದರಿಕೆಗಳು ಬರುತ್ತಲೇ ಇವೆ. ಇದೀಗ ಮತ್ತೊಂದು ಬೆದರಿಕೆ ಕರೆ ನಟನಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ ಟ್ರಾಫಿಕ್​ ಪೊಲೀಸ್​ ಸಹಾಯವಾಣಿಗೆ ಮಧ್ಯರಾತ್ರಿ ಈ ಬೆದರಿಕೆ ಕರೆ ಬಂದಿದ್ದು, ನಟನಿಗೆ 5 ಕೋಟಿ ರೂ ನೀಡುವಂತೆ ಬೇಡಿಕೆ ಇರಿಸಲಾಗಿದೆ. ಬೆದರಿಕೆ ಕರೆ ಮಾಡಿರುವ ವ್ಯಕ್ತಿ ತನ್ನನ್ನು ಗ್ಯಾಂಗ್​ಸ್ಟರ್​ ಬಿಷ್ಣೋಯಿ ಸಹೋದರ ಎಂದು ಗುರುತಿಸಿಕೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

"ಸಲ್ಮಾನ್​ ಖಾನ್​ ಜೀವಂತವಾಗಿರಬೇಕು ಎಂದರೆ, ಆತ ನಮ್ಮ ಬಿಷ್ಣೋಯಿ ಸಮುದಾಯದ ದೇಗುಲಕ್ಕೆ ತೆರಳಿ ಕ್ಷಮೆ ಕೋರಬೇಕು ಅಥವಾ 5 ಕೋಟಿ ರೂಪಾಯಿ ನೀಡಬೇಕು. ಈ ಎರಡನ್ನೂ ಮಾಡಲು ಮುಂದಾಗದಿದ್ದರೆ, ಕೊಲೆ ಮಾಡುತ್ತೇವೆ. ನಮ್ಮ ಗ್ಯಾಂಗ್​ ಇನ್ನೂ ಸಕ್ರಿಯವಾಗಿದೆ" ಎಂದು ಸಂದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆದರಿಕೆ ಕರೆ ಬಳಿಕ ಸಲ್ಮಾನ್​ ಖಾನ್​ಗೆ ಮತ್ತಷ್ಟು ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಲಾರೆನ್ಸ್​​ ಬಿಷ್ಣೋಯಿ ಗ್ಯಾಂಗ್​ನಿಂದ ಈ ಸಂದೇಶ ಬಂದಿದೆಯೇ ಎಂಬ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಸಲ್ಮಾನ್​ ಖಾನ್‌ಗೆ​ ಅಕ್ಟೋಬರ್​ 30ರಂದು ಅನಾಮಧೇಯ ವ್ಯಕ್ತಿಯಿಂದ ಕೊಲೆ ಬೆದರಿಕೆ ಬಂದಿತ್ತು. ಈ ವೇಳೆ ಕರೆ ಮಾಡಿದವರು 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು.

ಅಕ್ಟೋಬರ್​ 28ರಂದು ಕೂಡ ಸಲ್ಮಾನ್​ ಖಾನ್​ ಮತ್ತು ಬಾಬಾ ಸಿದ್ದಿಕಿ ಪುತ್ರ ಜೀಶನ್​ ಸಿದ್ಧಿಕಿಗೆ ಕೊಲೆ ಬೆದರಿಕೆ ಹಾಕಿದ್ದ 20 ವರ್ಷದ ಯುವಕನನ್ನು ಪೊಲೀಸರು ನೋಯ್ಡಾದಲ್ಲಿ ಬಂಧಿಸಿದ್ದರು.

ಇದನ್ನೂ ಓದಿ: ನಟ ಸಲ್ಮಾನ್​, ಜೀಶನ್​ ಸಿದ್ದಿಕಿಗೆ ಕೊಲೆ ಬೆದರಿಕೆ ಹಾಕಿದ ಯುವಕನ ಬಂಧನ

Last Updated : Nov 5, 2024, 12:03 PM IST

ABOUT THE AUTHOR

...view details