ಹೈದರಾಬಾದ್:ದೇಶದೆಲ್ಲೆಡೆ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಅದೇ ರೀತಿ ವಿಶ್ವವಿಖ್ಯಾತ ರಾಮೋಜಿ ಫಿಲ್ಮ್ ಸಿಟಿಯಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಡೆದಿದೆ. ರಾಮೋಜಿ ಫಿಲ್ಮ್ ಸಿಟಿ ವ್ಯವಸ್ಥಾಪಕ ನಿರ್ದೇಶಕಿ ವಿಜಯೇಶ್ವರಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಭದ್ರತಾ ಸಿಬ್ಬಂದಿಯಿಂದ ಗೌರವ ವಂದನೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾನವ ಸಂಪನ್ಮೂಲ ಅಧ್ಯಕ್ಷ ಗೋಪಾಲ್ ರಾವ್, ಯುಕೆಎಂಎಲ್ (ಉಷಾಕಿರಣ ಮೂವೀ ಲಿಮಿಟೆಡ್) ನಿರ್ದೇಶಕ ಶಿವರಾಮಕೃಷ್ಣ, ಪ್ರಚಾರ ವಿಭಾಗದ ಉಪಾಧ್ಯಕ್ಷ ಎ. ವಿ ರಾವ್, ತೋಟಗಾರಿಕೆ ಉಪಾಧ್ಯಕ್ಷ ರವಿಚಂದ್ರಶೇಖರ್ ಸೇರಿದಂತೆ ಸಂಸ್ಥೆಯ ಉನ್ನತಾಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು. ಫಿಲ್ಮ್ ಸಿಟಿ ಸಿಇಒ ಶೇಷಸಾಯಿ ಅವರು ಎಂಡಿ ವಿಜೇಶ್ವರಿ ಅವರನ್ನು ಸ್ವಾಗತಿಸಿದರು.