NHAI Rajmarg Yatra App:ನಮಗೆ ತಿಳಿಯದಿರುವ ಹೊಸ ಜಾಗಕ್ಕೆ ಹೋಗಲು ಅದರ ರೂಟ್ ಮ್ಯಾಚ್ ಹಾಗೂ ಸರಿಯಾದ ಹಾದಿ ಗೊತ್ತಿರಬೇಕಾಗುತ್ತದೆ. ಇದಕ್ಕಂತಲೇ ಬಂದಿದೆ NHIAದ ಹೊಸ ಆ್ಯಪ್. ಈ ಆ್ಯಪ್ನಲ್ಲೇ ನೀವು ಫಾಸ್ಟ್ಯಾಗ್ ರೀಚಾರ್ಜ್ ಕೂಡಾ ಮಾಡಬಹುದು. ಪ್ರಯಾಣದ ಸಮಯದಲ್ಲಿ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಿದರೆ, ತಕ್ಷಣ ನೀವು ಗೂಗಲ್ ಮ್ಯಾಪ್ನ ಸಹಾಯ ಪಡೆಯಬೇಕಾಗುತ್ತದೆ.
ಇಂತಹ ಸಮಸ್ಯೆಗಳ ನಿವಾರಣೆಗೆ ಅಂತಾನೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರತಿಯೊಂದಕ್ಕೂ ಪ್ರತ್ಯೇಕ ಅಪ್ಲಿಕೇಶನ್‌ನ ಬದಲಿಗೆ ಎಲ್ಲರಿಗೂ ಒಂದೇ ಅಪ್ಲಿಕೇಶನ್ ವೊಂದನ್ನು ಹೊರ ತಂದಿದೆ. ಇದು ಹತ್ತಿರದ ಮಾರ್ಗ ಗಳಿಂದ ಹಿಡಿದು ಸ್ಮಾರ್ಟ್ ಎಚ್ಚರಿಕೆಗಳವರೆಗೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುತ್ತದೆ. ‘ರಾಜಮಾರ್ಗಯಾತ್ರೆ’ ಎಂಬ ಹೆಸರಿನಿಂದ ತಂದಿರುವ ಈ ಆ್ಯಪ್ ಕುರಿತು ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ.
ಆ್ಯಪ್ ಬಗ್ಗೆ ಒಂದಿಷ್ಟು ಮಾಹಿತಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರಿಗೆ ಅಗತ್ಯವಿರುವ ಪ್ರಮುಖ ಮಾಹಿತಿಯನ್ನು ಈ ಅಪ್ಲಿಕೇಶನ್ ಒದಗಿಸುತ್ತದೆ. ರೆಸ್ಟೋರೆಂಟ್‌ಗಳು, ಪೆಟ್ರೋಲ್ ಪಂಪ್‌ಗಳು, ಚಾರ್ಜಿಂಗ್ ಸ್ಟೇಷನ್‌ಗಳು, ಆಸ್ಪತ್ರೆಗಳು, ಎಟಿಎಂಗಳು, ಪೊಲೀಸ್ ಠಾಣೆಗಳು ಮತ್ತು ಪ್ರವಾಸಿ ಸ್ಥಳಗಳ ಮಾಹಿತಿ ಆ್ಯಪ್‌ನಲ್ಲಿ ಲಭ್ಯ ಇವೆ. ಈ ಅಪ್ಲಿಕೇಶನ್ ಹವಾಮಾನ ಪರಿಸ್ಥಿತಿ ಮತ್ತು ಟ್ರಾಫಿಕ್ ಎಚ್ಚರಿಕೆಗಳನ್ನೂ ಸಹ ನೀಡುತ್ತದೆ.
ಇದನ್ನು ಓದಿ:2025ರಲ್ಲಿ ವಿದೇಶಿ ಪ್ರಯಾಣಕ್ಕೂ ಡಿಜಿಯಾತ್ರಾ ಸೌಲಭ್ಯ ಅಳವಡಿಕೆ - Face Recognition Technology
ಇಲ್ಲಿಂದಲೇ ನೀಡಿ ದೂರು - Report An Issue On NH: ಪ್ರಮುಖ ರಸ್ತೆಗಳಿಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ಈ ಅಪ್ಲಿಕೇಶನ್‌ನಲ್ಲಿ ವರದಿ ಮಾಡಬಹುದು. ಇದಕ್ಕಾಗಿ ಆಪ್ ನಲ್ಲಿ 'Report An Issue On NH' ಎಂಬ ಆಯ್ಕೆ ಇದೆ. ಅದರ ಸಹಾಯದಿಂದ, ನೀವು ಫೋಟೋ, ವಿಡಿಯೋವನ್ನು ಸೇರಿಸಬಹುದು ಮತ್ತು ರಸ್ತೆಗೆ ಸಂಬಂಧಿಸಿದ ಸಮಸ್ಯೆಯ ಬಗ್ಗೆ ದೂರು ನೀಡಬಹುದು. ಸ್ವೀಕರಿಸಿದ ದೂರುಗಳಿಗೆ ಸ್ಪಂದಿಸಲು ಎನ್‌ಎಚ್‌ಎಐ ಕ್ರಮ ಕೈಗೊಳ್ಳಲಿದೆ. ಇದರಲ್ಲಿ ನಾವು ನಮ್ಮ ಅನುಸರಣೆ ಸ್ಥಿತಿಯನ್ನು ಕಾಲಕಾಲಕ್ಕೆ ತಿಳಿದುಕೊಳ್ಳಬಹುದು.
FASTAG ಸೇವೆ: ಈ ರಾಜಮಾರ್ಗಯಾತ್ರ ಅಪ್ಲಿಕೇಶನ್‌ನಿಂದ ನೀವು FASTAG ಸಂಬಂಧಿತ ಸೇವೆಗಳನ್ನು ಪಡೆಯಬಹುದು. FASTAG ರೀಚಾರ್ಜ್‌ಗಾಗಿ NHAI ವಿವಿಧ ಬ್ಯಾಂಕ್ ಪೋರ್ಟಲ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಹೊಸ FASTag ಅಪ್ಲಿಕೇಶನ್, ಮಾಸಿಕ ಪಾಸ್‌ಗಳು ಮತ್ತು FASTag ಗೆ ಸಂಬಂಧಿಸಿದ ಇತರ ಸೇವೆಗಳು ಸಹ ಈ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ.
ಟೋಲ್ ಪ್ಲಾಜಾದ ವಿವರಗಳೂ ಲಭ್ಯ: ನೀವು ಹೋಗುವ ರಸ್ತೆಯಲ್ಲಿರುವ ಟೋಲ್ ಪ್ಲಾಜಾಗಳ ಸಂಖ್ಯೆ, ಅವುಗಳ ಹೆಸರುಗಳು ಮತ್ತು ಪಾವತಿಸಬೇಕಾದ ಒಟ್ಟು ಮೊತ್ತವನ್ನು ಈ ಅಪ್ಲಿಕೇಶನ್ ಮೂಲಕ ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ಇದಕ್ಕಾಗಿ ಆ್ಯಪ್‌ನಲ್ಲಿ ‘ಟೋಲ್ ಪ್ಲಾಜಾ ಎನ್‌ರೂಟ್’ ಎಂಬ ಆಯ್ಕೆ ಇದೆ. ಇದರ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ನಿರ್ಗಮನ ಪ್ರದೇಶ ಮತ್ತು ಗಮ್ಯಸ್ಥಾನವನ್ನು ನಮೂದಿಸಿ ಮತ್ತು ಹುಡುಕಾಟದ ಮೇಲೆ ಕ್ಲಿಕ್ ಮಾಡಿ, ನಿಮಗೆ ಅಗತ್ಯವಿರುವ ಎಲ್ಲ ಟೋಲ್ ಪ್ಲಾಜಾ ವಿವರಗಳನ್ನು ಅದರಲ್ಲಿ ಪ್ರದರ್ಶಿಸಲಾಗುತ್ತದೆ.