ಭದ್ರಾದ್ರಿ (ತೆಲಂಗಾಣ): ಉನ್ನತ ವ್ಯಾಸಂಗ ಮಾಡುವುದಾಗಿ ಹೇಳಿದ್ದರೂ ಮನೆಯವರು ಮದುವೆ ಮಾಡಿಸಿದ ಹಿನ್ನೆಲೆಯಲ್ಲಿ ನವವಧು ಆತ್ಮಹತ್ಯೆ ಮಾಡಿಕೊಂಡ ಘಟನೆ ಭದ್ರಾದ್ರಿಯ ಮಂಗಯ್ಯ ಬಂಜಾರ ಗ್ರಾಮದಲ್ಲಿ ನಡೆದಿದೆ. ದೇವಕಿ (23) ಆತ್ಮಹತ್ಯೆ ಮಾಡಿಕೊಂಡ ನವವಧು.
ಉನ್ನತ ವ್ಯಾಸಂಗದ ಕನಸು ಕಂಡಿದ್ದ ನವವಧು ಆತ್ಮಹತ್ಯೆ! - New bride commits suicide - NEW BRIDE COMMITS SUICIDE
ಉನ್ನತ ವ್ಯಾಸಂಗದ ಕನಸು ಕಂಡಿದ್ದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
Published : Apr 23, 2024, 1:47 PM IST
ಗ್ರಾಮದ ಕೃಷಿ ಕೂಲಿ ಕಾರ್ಮಿಕ ಶ್ರೀನು ಮತ್ತು ಪದ್ಮಾ ದಂಪತಿಯ ಪುತ್ರಿಯಾದ ದೇವಕಿ ಇತ್ತೀಚೆಗಷ್ಟೇ ಪದವಿಯನ್ನು ಪೂರ್ಣಗೊಳಿಸಿದ್ದಳು. ತಾನು ಬಿ.ಎಸ್ಸಿ ಉನ್ನತ ಶಿಕ್ಷಣ ಪಡೆಯುವುದಾಗಿ ದೇವಕಿ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು. ಆದರೆ, ಪುತ್ರಿಯ ಬಯಕೆಯನ್ನು ಅಷ್ಟು ಗಂಭೀರವಾಗಿ ಪರಿಗಣಿಸಿದ ತಾಯಿಯು, ಮಗಳ ಆರೋಗ್ಯ ಸರಿಯಿಲ್ಲ ಎಂಬ ಕಾರಣ ನೀಡಿ ಮದುವೆ ಮಾಡುವಂತೆ ಮನವೊಲಿಸಿದ್ದಾರೆ. ಅಂದುಕೊಂಡಂತೆ ಕಳೆದ ತಿಂಗಳು 28 ರಂದು ದುಬ್ಬತಂಡ ಗ್ರಾಮದ ಯುವಕನೊಂದಿಗೆ ವಿವಾಹ ಕೂಡ ಆಗಿತ್ತು.
ಆದರೆ, ಇದೇ ತಿಂಗಳ 14ರಂದು ರಾತ್ರಿ ತನ್ನ ತವರು ಮನೆಗೆ ಬಂದಿದ್ದ ದೇವಕಿ, ಎಲ್ಲರೂ ಮಲಗಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿದ ಕುಟುಂಬಸ್ಥರು ಆಕೆಯನ್ನು ತಕ್ಷಣ ಕೊತಗುಡೆಂ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಂತರ ಖಮ್ಮಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬೆಳಗ್ಗೆ ದೇವಕಿ ಮೃತಪಟ್ಟಿದ್ದಾಳೆ ಎಂದು ಚಂದ್ರಗೊಂಡ ಎಸ್‌ಐ ಮಚಿನೇನಿ ರವಿ ಮಾಹಿತಿ ನೀಡಿದ್ದಾರೆ. ಮೃತನ ತಾಯಿ ದೂರಿನ ಮೇರೆಗೆ ದೂರು ದಾಖಲಿಸಿಕೊಳ್ಳಲಾಗಿದೆ. ತನಿಖೆ ಕೂಡ ನಡೆಸಲಾಗುತ್ತಿದೆ ಎಂದು ಮಚಿನೇನಿ ರವಿ ಮಾಹಿತಿ ತಿಳಿಸಿದ್ದಾರೆ. ಮದುವೆಯಾಗಿ ಕೇವಲ 16 ದಿನಗಳು ಮಾತ್ರ ಆಗಿದ್ದವು. ಮೃತ ದೇವಕಿಗೆ ಇಂಜಿನಿಯರಿಂಗ್ ಓದಿದ ಓರ್ವ ಸಹೋದರನೂ ಇದ್ದಾನೆ.