ಕರ್ನಾಟಕ

karnataka

ETV Bharat / bharat

ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ​: ಪ್ರಮುಖ ಆರೋಪಿ ಬಂಧಿಸಿದ ಸಿಬಿಐ - NEET UG paper leak

ನೀಟ್​​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ಪ್ರಮುಖ ಆರೋಪಿ ಮತ್ತು ಆತನಿಗೆ ಸಹಾಯ ಮಾಡಿದ ಇನ್ನೊಬ್ಬನನ್ನೂ ಮಂಗಳವಾರ ಬಂಧಿಸಿದೆ. ಕೇಸ್​ನಲ್ಲಿ 14 ಜನರ ಬಂಧನವಾಗಿದೆ.

By ETV Bharat Karnataka Team

Published : Jul 16, 2024, 10:49 PM IST

ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ​
ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ​ (ETV Bharat)

ನವದೆಹಲಿ:ದೇಶಾದ್ಯಂತ ಸಂಚಲನ ಮೂಡಿಸಿದ್ದ ನೀಟ್ ಯುಜಿ ಪೇಪರ್ ಲೀಕ್​ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪೇಪರ್ ಸೋರಿಕೆಯ ಪ್ರಮುಖ ಆರೋಪಿಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ. ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯಿಂದ (ಎನ್​ಟಿಎ) ಪ್ರಶ್ನೆಪತ್ರಿಕೆ ಕದ್ದ ಪಂಕಜ್​ಕುಮಾರ್ ಬಂಧಿತ ವ್ಯಕ್ತಿ. ಪ್ರಕರಣದಲ್ಲಿ ಇದುವರೆಗೆ 14 ಜನರನ್ನು ಬಂಧಿಸಲಾಗಿದೆ.

ಆರೋಪಿ ಪಂಕಜ್​ ನೀಟ್​ ಜಮ್‌ಶೆಡ್‌ಪುರದ 2017ರ ಬ್ಯಾಚ್‌ನ ಸಿವಿಲ್ ಎಂಜಿನಿಯರ್. ಹಜಾರಿಬಾಗ್‌ನಲ್ಲಿರುವ ಎನ್‌ಟಿಐ ಟ್ರಂಕ್ ಬಾಕ್ಸ್‌ಗಳಿಂದ ನೀಟ್ ಪ್ರಶ್ನೆಪತ್ರಿಕೆಯನ್ನು ಕದ್ದಿದ್ದ ಎಂದು ಹೇಳಲಾಗಿದೆ. ನಂತರ ಅದನ್ನು ರಾಜು ಸಿಂಗ್ ಎಂಬ ಇನ್ನೊಬ್ಬಾತನಿಗೆ ಕೊಟ್ಟಿದ್ದ. ಆತ ಅದನ್ನು ತನ್ನ ಗ್ಯಾಂಗ್ ಸದಸ್ಯರಿಗೆ ಹಂಚಿದ್ದ. ಈ ಹಿನ್ನೆಲೆಯಲ್ಲಿ ಸಿಬಿಐ ಇಬ್ಬರನ್ನೂ ಬಂಧಿಸಿದೆ. ಬೊಕಾರೋ ಮೂಲದ ಪಂಕಜ್ ಕುಮಾರ್​ನನ್ನು ಬಿಹಾರ ರಾಜಧಾನಿ ಪಾಟ್ನಾದಲ್ಲಿ ಬಂಧಿಸಿದ್ದರೆ, ರಾಜು ಎಂಬಾತನನ್ನು ಹಜಾರಿಬಾಗ್‌ನಲ್ಲಿ ಹಿಡಿಯಲಾಗಿದೆ.

ಸಿಬಿಐ ಅಧಿಕಾರಿಗಳು ಈ ಪ್ರಕರಣದಲ್ಲಿ ಇದುವರೆಗೆ ಆರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಬಿಹಾರದಲ್ಲಿ ಪೇಪರ್ ಸೋರಿಕೆ ಪ್ರಕರಣ ದಾಖಲಾಗಿದ್ದರೆ, ಉಳಿದ ಐದು ವಂಚನೆ ಪ್ರಕರಣಗಳು ಗುಜರಾತ್, ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ದಾಖಲಾಗಿವೆ. ಇದರ ಜತೆಗೆ ಕೇಂದ್ರ ಶಿಕ್ಷಣ ಇಲಾಖೆಯ ಸೂಚನೆಯಂತೆ ಸಿಬಿಐ ಸ್ವಂತವಾಗಿ ಎಫ್​ಐಆರ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದೆ. ಈಗಾಗಲೇ ಹಜಾರಿಬಾಗ್‌ನ ಓಯಸಿಸ್ ಶಾಲೆಯ ಪ್ರಾಂಶುಪಾಲರು ಮತ್ತು ಉಪಪ್ರಾಂಶುಪಾಲರು ಸೇರಿ ಇತರ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದೆ. ಸುಟ್ಟು ಹಾಕಿದ ಪ್ರಶ್ನೆ ಪತ್ರಿಕೆಗಳನ್ನು ಬಿಹಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜುಲೈ 18 ರಂದು ವಿಚಾರಣೆ:ಈ ವರ್ಷದ ಮೇ 5 ರಂದು, ದೇಶಾದ್ಯಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ NEET-UG ಪರೀಕ್ಷೆಯನ್ನು ನಡೆಸಲಾಯಿತು. 571 ನಗರಗಳಲ್ಲಿ 4,750 ಕೇಂದ್ರಗಳಲ್ಲಿ ನಡೆದ ಈ ಪರೀಕ್ಷೆಗೆ 23 ಲಕ್ಷಕ್ಕೂ ಹೆಚ್ಚು ಮಂದಿ ಹಾಜರಾಗಿದ್ದರು. ಆದರೆ, ಪ್ರಶ್ನೆಪತ್ರಿಕೆ ನಡೆದಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಜುಲೈ 18 ರಂದು ಸುಪ್ರೀಂ ಕೋರ್ಟ್ ಈ ಅರ್ಜಿಗಳ ವಿಚಾರಣೆ ನಡೆಸಲಿದೆ.

ಇದನ್ನೂ ಓದಿ:ಪಿಜಿಇಟಿ -2024: ಆನ್​ಲೈನ್ ಅರ್ಜಿ ಸಲ್ಲಿಸಲು ಜುಲೈ 10 ರವರೆಗೆ ಅವಕಾಶ - PGET 2024 Online Application

ABOUT THE AUTHOR

...view details