ಕರ್ನಾಟಕ

karnataka

ETV Bharat / bharat

ಒಂದೇ ಕುಟುಂಬದ ಮೂವರ ಬರ್ಬರ ಹತ್ಯೆ: ಪತಿ, ಪತ್ನಿ, ಮಗಳ ಕತ್ತು ಸೀಳಿ ಕೊಲೆ, ಮಗನ ಸ್ಥಿತಿ ಚಿಂತಾಜನಕ - Triple Murder In Bihar - TRIPLE MURDER IN BIHAR

ಬಿಹಾರದ ಬೇಗುಸರಾಯ್‌ನಲ್ಲಿ ಒಂದೇ ಕುಟುಂಬದ ಮೂವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶುಕ್ರವಾರ ತಡರಾತ್ರಿ ಮಲಗಿದ್ದ ವೇಳೆ ದುಷ್ಕರ್ಮಿಗಳು ಒಂದೇ ಕುಟುಂಬದ 4 ಮಂದಿಯ ಕತ್ತು ಸೀಳಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಪತಿ, ಪತ್ನಿ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಪುತ್ರನ ಸ್ಥಿತಿ ಚಿಂತಾಜನಕವಾಗಿದೆ.

MURDER IN BIHAR  BEGUSARAI TRIPLE MURDER  Triple Murder In Bihar
ಬಿಹಾರದಲ್ಲಿ ಒಂದೇ ಕುಟುಂಬದ ಮೂವರ ಬರ್ಬರ ಹತ್ಯೆ: ಪತಿ, ಪತ್ನಿ, ಮಗಳ ಕತ್ತು ಸೀಳಿ ಕೊಲೆ, ಮಗನ ಸ್ಥಿತಿ ಚಿಂತಾಜನಕ (ETV Bharat)

By ETV Bharat Karnataka Team

Published : Aug 10, 2024, 2:14 PM IST

ಬೇಗುಸರಾಯ್ (ಬಿಹಾರ):ಏಕಕಾಲಕ್ಕೆ ಒಂದೇ ಕುಟುಂಬದ ಮೂವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಗುಸರಾಯ್‌ನಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ದುಷ್ಕರ್ಮಿಗಳು ಒಂದೇ ಕುಟುಂಬದ 4 ಮಂದಿಯ ಕತ್ತು ಸೀಳಿದ್ದಾರೆ. ಈ ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಬಚ್ವಾರಾ ಪೊಲೀಸ್ ಠಾಣೆ ವ್ಯಾಪ್ತಿಯ ರಸಿದ್‌ಪುರದಲ್ಲಿರುವ ಚಿರಂಜೀವಿಪುರ ಗ್ರಾಮದಲ್ಲಿ ಈ ಘಟನೆ ಜರುಗಿದೆ.

ಗ್ರಾಮದಲ್ಲಿ ಭೀತಿ ಸೃಷ್ಟಿ:ಮೃತರನ್ನು ನಾಗೇಂದ್ರ ಸಿಂಗ್‌ ಸಂಜೀವನ್ ಮಹತೋ (40), ಅವರ ಪತ್ನಿ ಸಂಜಿತಾ ದೇವಿ ಮತ್ತು 10 ವರ್ಷದ ಪುತ್ರಿ ಸಪ್ನಾ ಕುಮಾರಿ ಎಂದು ಗುರುತಿಸಲಾಗಿದೆ. ಗಾಯಗೊಂಡ ಅವರ ಪುತ್ರ 8 ವರ್ಷದ ಅಂಕುಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಈ ಘಟನೆ ಕುರಿತು ಸ್ಥಳೀಯರು ಬಚವಾಡ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಚ್ವಾರಾ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿ ತನಿಖೆ ಆರಂಭಿಸಿದ್ದಾರೆ.

ಇಡೀ ಕುಟುಂಬ ಮನೆಯಲ್ಲಿ ಮಲಗಿದ್ದ ವೇಳೆ ಹತ್ಯೆ: ಕುಟುಂಬ ಸದಸ್ಯರ ಪ್ರಕಾರ, ಸಂಜೀವನ್ ಮಹತೋ ತನ್ನ ಕುಟುಂಬದೊಂದಿಗೆ ಮನೆಯಲ್ಲಿ ಮಲಗಿದ್ದಾಗ, ದುಷ್ಕರ್ಮಿಗಳು ಮನೆಗೆ ನುಗ್ಗಿ ಪತಿ, ಪತ್ನಿ ಮತ್ತು ಇಬ್ಬರು ಮಕ್ಕಳ ಕತ್ತು ಸೀಳಿ ಹರಿತವಾದ ಆಯುಧದಿಂದ ಕೊಂದಿದ್ದಾರೆ. ಈ ಘಟನೆಯಲ್ಲಿ ಪತಿ, ಪತ್ನಿ ಹಾಗೂ ಮಗಳು ಸಾವನ್ನಪ್ಪಿದ್ದಾರೆ. ಮಗ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಿನ ಜಾವ ಮನೆಯ ಸ್ಥಿತಿ ಕಂಡು ಜನ ಕಣ್ಣೀರು ಹಾಕಿದರು. ಇಡೀ ಕೋಣೆ ನೆಲದ ಮೇಲೆ ರಕ್ತದಿಂದ ಆವೃತ್ತವಾಗಿತ್ತು.

ವೈಯುಕ್ತಿಕ ವೈಷಮ್ಯದಿಂದ ಕೊಲೆ ಶಂಕೆ:ಈ ಕೃತ್ಯವನ್ನು ಆರೋಪಿಗಳು ವೈಯಕ್ತಿಕ ವೈಷಮ್ಯದಿಂದ ನಡೆಸಿದ್ದಾರೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕಾಗಮಿಸಿದ ಬೇಗುಸರಾಯ್​ ಎಸ್ಪಿ ಮನೀಶ್ ಅವರು, ಮನೆಯಲ್ಲಿ ಮೂವರ ಶವ ಪತ್ತೆಯಾಗಿದೆ. ಮೂವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಸಲು ಎಫ್‌ಎಸ್‌ಎಲ್ ತಂಡ ಮತ್ತು ಶ್ವಾನ ದಳವನ್ನು ಕರೆಸಲಾಗಿದೆ. ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಮಾನಹಾನಿ ಪ್ರಕರಣ: ಯೂಟ್ಯೂಬರ್ ಸವುಕ್ಕು ಶಂಕರ್ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ಆದೇಶ - YouTuber Savukku Shankar

ABOUT THE AUTHOR

...view details