ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರ ಚುನಾವಣೆ: ಮುಂಬೈನ 36 ಕ್ಷೇತ್ರಗಳಲ್ಲಿ 8 ಪಕ್ಷಗಳ ಮಧ್ಯೆ ಜಿದ್ದಾಜಿದ್ದಿನ ಹೋರಾಟ; ಕಾರಣ ಏನು? - MAHARASHTRA ELECTIONS

ಮುಂಬೈನ 36 ವಿಧಾನಸಭಾ ಕ್ಷೇತ್ರಗಳಲ್ಲಿ 8 ಪಕ್ಷಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿದೆ.

ಮಹಾರಾಷ್ಟ್ರದ ಪ್ರಮುಖ ರಾಜಕೀಯ ನೇತಾರರು
ಮಹಾರಾಷ್ಟ್ರದ ಪ್ರಮುಖ ರಾಜಕೀಯ ನೇತಾರರು (IANS)

By ETV Bharat Karnataka Team

Published : Nov 12, 2024, 6:27 PM IST

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಒಂದು ವಾರ ಮಾತ್ರ ಬಾಕಿ ಉಳಿದಿರುವ ಈ ಸಂದರ್ಭದಲ್ಲಿ ಮುಂಬೈನ 36 ವಿಧಾನಸಭಾ ಕ್ಷೇತ್ರಗಳಲ್ಲಿ ಎಂಟು ಪ್ರಮುಖ ರಾಜಕೀಯ ಪಕ್ಷಗಳ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿ, ಶಿವಸೇನೆ (ಯುಬಿಟಿ), ಕಾಂಗ್ರೆಸ್, ಶಿವಸೇನೆ, ಎನ್​ಸಿಪಿ, ಎನ್​ಸಿಪಿ (ಎಸ್ ಪಿ), ಸಮಾಜವಾದಿ ಪಕ್ಷ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಸೇರಿದಂತೆ ಎಂಟು ಪ್ರಮುಖ ಪಕ್ಷಗಳು ಈ 36 ಕ್ಷೇತ್ರಗಳಲ್ಲಿ ತೀವ್ರ ಜಿದ್ದಾಜಿದ್ದಿಯ ಹೋರಾಟ ನಡೆಸುತ್ತಿವೆ. ಮರಾಠಿ ಭಾಷಿಕ ಮತದಾರರು ಮಾತ್ರವಲ್ಲದೇ ಈ ಎಲ್ಲಾ ಪಕ್ಷಗಳು ಮರಾಠಿಯೇತರ ಮತದಾರರನ್ನು ಸೆಳೆಯಲು ತೀವ್ರ ಕಸರತ್ತು ನಡೆಸುತ್ತಿವೆ.

ಭಾರಿ ಮಹತ್ವ ಪಡೆದುಕೊಂಡು ಮಹಾನಗರ ಪಾಲಿಕೆ ವ್ಯಾಪ್ತಿಯ ಕ್ಷೇತ್ರಗಳು:ದೇಶದ ಅತ್ಯಂತ ಶ್ರೀಮಂತ ಪೌರಾಡಳಿತ ಸಂಸ್ಥೆಯಾಗಿರುವ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ಗೆ ದೀರ್ಘಕಾಲದಿಂದ ಚುನಾವಣೆ ನಡೆದಿಲ್ಲ. ಸುಮಾರು 25 ವರ್ಷಗಳ ಕಾಲ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ಬಿಎಂಸಿಯ ಮೇಲೆ ಅಧಿಪತ್ಯ ಸಾಧಿಸಿತ್ತು. ಮುಂಬರುವ ಬಿಎಂಸಿ ಚುನಾವಣೆಗಳಲ್ಲಿ ಬಿಜೆಪಿ - ಶಿವಸೇನೆ ಮೈತ್ರಿಕೂಟವು ಇದರ ಮೇಲೆ ಅಧಿಪತ್ಯ ಸಾಧಿಸಲು ಪ್ರಯತ್ನಿಸಲಿರುವುದರಿಂದ ಕೂಡ ಮುಂಬೈನ 36 ವಿಧಾನಸಭಾ ಕ್ಷೇತ್ರಗಳು ಬಹಳ ಪ್ರಮುಖ್ಯತೆ ಪಡೆದುಕೊಂಡಿವೆ.

ಶಿವಸೇನೆ ಯುಬಿಟಿಗೆ ಭಾರಿ ಅಗ್ನಿ ಪರೀಕ್ಷೆ:ಶಿವಸೇನೆಗೆ (ಯುಬಿಟಿ), ವಿಶೇಷವಾಗಿ ಜೂನ್ 2022 ರಲ್ಲಿ ವಿಭಜನೆಯ ನಂತರ ವಿಧಾನಸಭಾ ಚುನಾವಣೆಯು ಪುನರುಜ್ಜೀವನ ಮತ್ತು ಪ್ರತಿದಾಳಿ ನಡೆಸಲು ಒಂದು ಅವಕಾಶವಾಗಿದೆ. ಹಾಗೆಯೇ ಬಿಜೆಪಿಗೆ ಇದು ವಿಶೇಷವಾಗಿ 2017 ರ ನಾಗರಿಕ ಸಂಸ್ಥೆ ಚುನಾವಣೆಯಲ್ಲಿ ಮತ್ತು ನಂತರ 2019 ರ ವಿಧಾನಸಭಾ ಚುನಾವಣೆಯಲ್ಲಿ ಯಶಸ್ಸಿನ ನಂತರ ತನ್ನ ಶಕ್ತಿಯನ್ನು ಬಲಪಡಿಸುವ ಹೋರಾಟವಾಗಿದೆ.

ಶಿಂಧೆ ಶಿವಸೇನೆಗೆ ಭರ್ಜರಿ ಅವಕಾಶವೇ?:ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ, ಇದು ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಹಿಂದುತ್ವ ಚಿಂತನೆಗಳು ಮತ್ತು ವರ್ಚಸ್ಸಿನ ಮೇಲೆ ಸವಾರಿ ಮಾಡುವ ಮಹಾನಗರದಲ್ಲಿ ತನ್ನ ನೆಲೆಯನ್ನು ವಿಸ್ತರಿಸುವ ಅವಕಾಶವಾಗಿದೆ.

ಆದಾಗ್ಯೂ, ಮರಾಠಿ ಭಾಷಿಕ ಮತದಾರರ ಮತಗಳ ವಿಭಜನೆಯ ಮೇಲೆ ಅವಲಂಬಿತವಾಗಿರುವ ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್ ಗೆ, ಶಿವಸೇನೆಗೆ (ಯುಬಿಟಿ) ಬಲವಾದ ಪರ್ಯಾಯವಾಗಿ ಹೊರಹೊಮ್ಮಲು ಇದು ಆಸಿಡ್ ಪರೀಕ್ಷೆಯಾಗಿದೆ.

ಕಾಂಗ್ರೆಸ್​​​​ ಮರು ಸ್ಥಾಪನೆಗೂ ಒಂದು ಅವಕಾಶ:ಕಾಂಗ್ರೆಸ್ ಪಕ್ಷಕ್ಕೆ ಇದು ಪ್ರಸ್ತುತವಾಗಿ ಉಳಿಯಲು ಮತ್ತು ಮುಂಬೈನಲ್ಲಿ ತನ್ನ ಹಿಡಿತವನ್ನು ಮರಳಿ ಪಡೆಯಲು ಒಂದು ಅವಕಾಶವಾಗಿದೆ. ಎರಡೂ ಎನ್ ಸಿಪಿ ಬಣಗಳು ತಮ್ಮ ನಗಣ್ಯ ಉಪಸ್ಥಿತಿಯೊಂದಿಗೆ ನಾಗರಿಕ ಸಂಸ್ಥೆ ಚುನಾವಣೆಗೆ ಮುಂಚಿತವಾಗಿ ತಮ್ಮ ಬಲವನ್ನು ಹೆಚ್ಚಿಸಲು ಪ್ರಯತ್ನಿಸಬೇಕಿದೆ. ಮಹಾ ವಿಕಾಸ್ ಅಘಾಡಿಯನ್ನು ಮೀರಿಸಿ ಮುಸ್ಲಿಮೇತರ ಮತದಾರರನ್ನು ತಲುಪಲು ಸಮಾಜವಾದಿ ಪಕ್ಷವು ಹೆಣಗಾಡಬೇಕಾಗುತ್ತದೆ.

ಇದನ್ನೂ ಓದಿ : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಭಾರಿ ಕುಸಿತ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ಎಷ್ಟಿದೆ ಗೋಲ್ಡ್​ ರೇಟ್​?

ABOUT THE AUTHOR

...view details