ನವದೆಹಲಿ: 18ನೇಲೋಕಸಭೆ ಚುನಾವಣೆಯ 7 ಹಂತದ ಮತದಾನಗಳು ಮುಗಿದಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಅದಕ್ಕೂ ಮೊದಲು ವಿವಿಧ ಸಂಸ್ಥೆಗಳು ಮತ್ತು ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆ ನಡೆಸಿವೆ. ಎಲ್ಲಾ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 350 ಕ್ಕೂ ಅಧಿಕ ಸ್ಥಾನ ಗಳಿಸಿಲಿದೆ ಎಂದು ತಿಳಿಸಿವೆ. ಇದರಿಂದ ಬಿಜೆಪಿ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಿಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ.
ಕರ್ನಾಟಕದಲ್ಲೂ ಎನ್ಡಿಎ ಒಕ್ಕೂಟ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದಾಗಿ ಸಮೀಕ್ಷೆಗಳಲ್ಲಿ ಹೇಳಲಾಗಿದೆ. ಎನ್ಡಿಟಿವಿ ಪೋಲ್ ಆಫ್ ಪೋಲ್ಸ್, ನ್ಯೂಸ್ ನೇಷನ್, ಝೀ ನ್ಯೂಸ್, ಇಂಡಿಯಾ ನ್ಯೂಸ್- ಡಿ ಡೈನಾಮಿಕ್ಸ್, ಜನ್ ಕೀ ಬಾತ್, ಆ್ಯಕ್ಸಿಸ್ ಮೈ ಇಂಡಿಯಾ, ರಿಪಬ್ಲಿಕ್ ಟಿವಿ-ಪಿ ಮಾರ್ಕ್ಯೂ, ರಿಪಬ್ಲಿಕ್ ಭಾರತ್/ಮ್ಯಾಟ್ರೀಜ್ ಸೇರಿದಂತೆ ಅನೇಕ ಸಂಸ್ಥೆಗಳು ಮತಗಟ್ಟೆ ಸಮೀಕ್ಷೆ ನಡೆಸಿವೆ.