ಕರ್ನಾಟಕ

karnataka

ETV Bharat / bharat

ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಮಾನವರಹಿತ ಬೇಹುಗಾರಿಕೆ ವಿಮಾನ ಪತನ: ತನಿಖೆಗೆ ಆದೇಶ - Air Force plane Crashes - AIR FORCE PLANE CRASHES

ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಬೇಹುಗಾರಿಕಾ ವಿಮಾನ ಪತನಗೊಂಡಿದೆ. ಈ ಘಟನೆಯ ಕಾರಣ ಪತ್ತೆ ಹಚ್ಚಲು ತಂಡ ರಚಿಸಿ ತನಿಖೆಗೆ ವಾಯುಪಡೆ ಆದೇಶಿಸಿದೆ.

ಬೇಹುಗಾರಿಗೆ ವಿಮಾನ ಪತನ
ಬೇಹುಗಾರಿಗೆ ವಿಮಾನ ಪತನ

By ETV Bharat Karnataka Team

Published : Apr 25, 2024, 11:19 AM IST

Updated : Apr 25, 2024, 1:59 PM IST

ಮಾನವರಹಿತ ಬೇಹುಗಾರಿಕೆ ವಿಮಾನ ಪತನ

ಜೈಪುರ:ಇಂದು ಬೆಳಗ್ಗೆ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ವಾಯುಪಡೆಯ ಬೇಹುಗಾರಿಕಾ ವಿಮಾನ ಪತನಗೊಂಡಿದೆ. ಜೈಸಲ್ಮೇರ್ ಜಿಲ್ಲಾ ಕೇಂದ್ರದಿಂದ 30 ಕಿಲೋಮೀಟರ್ ದೂರದಲ್ಲಿರುವ ರೋಜಾನಿ ಕಿ ಧನಿ ಜಜಿಯಾ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.

ಈ ಬಗ್ಗೆ ಮಾಹಿತಿ ಬಂದ ತಕ್ಷಣ ಜಿಲ್ಲಾಡಳಿತದೊಂದಿಗೆ ವಾಯುಪಡೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಅಪಘಾತದಿಂದ ವಿಮಾನದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ದಳವು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ. ಈ ವಿಮಾನವನ್ನು ಬೇಹುಗಾರಿಕೆ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ನಿಯೋಜಿಸಲಾಗಿತ್ತು.

ಖಾಲಿ ಪ್ರದೇಶದಲ್ಲಿ ಘಟನೆ:ಜೈಸಲ್ಮೇರ್ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಚೌಧರಿ ಘಟನೆ ಬಗ್ಗೆ ಮಾತನಾಡಿ, 'ವಿಮಾನವು ಗ್ರಾಮೀಣ ಪ್ರದೇಶದ ಖಾಲಿ ಜಾಗದಲ್ಲಿ ಬಿದ್ದಿದ್ದು, ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ.

ಮಾನವರಹಿತ ವಿಮಾನ: ಈ ಬೇಹುಗಾರಿಕಾ ವಿಮಾನವು ಗಡಿ ಪ್ರದೇಶದಲ್ಲಿ ಕಣ್ಗಾವಲು ಕಾಯುವುದಾಗಿದೆ. ಇದು ಮಾನವರಹಿತ ವಿಮಾನವಾಗಿದೆ. ಹೀಗಾಗಿ ಈ ಘಟನೆಯಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಅಪಘಾತಕ್ಕೆ ಕಾರಣವೇನೆಂಬುದನ್ನು ಪತ್ತೆ ಹಚ್ಚಲು ವಾಯುಪಡೆ ತನಿಖೆಗೆ ಆದೇಶಿಸಿದೆ.

ಇದನ್ನೂ ಓದಿ:ಭೀಕರ ರಸ್ತೆ ಅಪಘಾತ: ಬಾಲಕಿ ಸೇರಿ ಆರು ಮಂದಿ ದುರ್ಮರಣ - Six killed in accident in Telangana

Last Updated : Apr 25, 2024, 1:59 PM IST

ABOUT THE AUTHOR

...view details