ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಭಾರತೀಯ ಸೇನೆಯ ಯೋಧರು ದೊಡ್ಡ ಅಪಘಾತಕ್ಕೀಡಾಗಿದ್ದಾರೆ. ಲಡಾಖ್ ಪ್ರದೇಶದ ದೌಲತ್ ಬೇಗ್ ಓಲ್ಡಿಯಲ್ಲಿರುವ ಮಂದಿರ ಮೋರ್‌ನಲ್ಲಿನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ - ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಅವರ ಟಿ-72 ಟ್ಯಾಂಕ್ ಅಪಘಾತಕ್ಕೀಡಾಗಿ ಇಂದು (ಶನಿವಾರ) ಬೆಳಗ್ಗೆ ಕಿರಿಯ ಆಯೋಗದ ಅಧಿಕಾರಿ (ಜೆಸಿಒ) ಸೇರಿದಂತೆ ಐವರು ಯೋಧರು ಮೃತಪಟ್ಟಿದ್ದಾರೆ.
ಲಡಾಖ್‌ನ ದೌಲತ್ ಬೇಗ್ ಓಲ್ಡಿ ಪ್ರದೇಶದಲ್ಲಿ ಸೇನಾ ಯೋಧರು ನದಿಯನ್ನು ಟ್ಯಾಂಕ್ ದಾಟುವ ಅಭ್ಯಾಸ ನಡೆಸುತ್ತಿದ್ದರು. ಈ ಸಮಯದಲ್ಲಿ, ನದಿಯ ನೀರಿನ ಮಟ್ಟವು ಇದ್ದಕ್ಕಿದ್ದಂತೆ ಹೆಚ್ಚಾಯಿತು. ಇದರಿಂದಾಗಿ ಐವರು ಸೇನಾ ಯೋಧರು ಕೊಚ್ಚಿಹೋಗಿದ್ದಾರೆ. ದೌಲತ್ ಬೇಗ್ ಓಲ್ಡಿ ಪ್ರದೇಶವು ಕಾರಕೋರಂ ಶ್ರೇಣಿಯಲ್ಲಿದ್ದು, ಇಲ್ಲಿ ಸೇನಾ ನೆಲೆ ಇದೆ.
ಲಡಾಖ್‌ನ ಎಲ್‌ಎಸಿ ಬಳಿ ಹಠಾತ್ ಪ್ರವಾಹದಲ್ಲಿ ಐವರು ಸೇನಾ ಯೋಧರು ಕೊಚ್ಚಿ ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇನಾ ಟ್ಯಾಂಕ್ ನದಿಯ ಆಳವಾದ ಭಾಗವನ್ನು ದಾಟುತ್ತಿದ್ದಾಗ ಸಿಲುಕಿಕೊಂಡಿತ್ತು. ಈ ವೇಳೆ ಏಕಾಏಕಿ ನೀರಿನ ಮಟ್ಟ ಏರಿದ್ದರಿಂದ ಸೈನಿಕರು ಕೊಚ್ಚಿ ಹೋಗಿದ್ದಾರೆ.