ಮಂಚ್ಯಾರ, ತೆಲಂಗಾಣ:ಹಾವು ಮತ್ತು ಮುಂಗುಸಿಗಳ ನಡುವಿನ ಘರ್ಷಣೆ ಬಹುತೇಕ ಹಳ್ಳಿ ಮಂದಿಗೆ ಗೊತ್ತೆ ಇರುತ್ತೆ. ಈ ಎರಡು ಪ್ರಾಣಿಗಳು ಪರಸ್ಪರ ಸಂದಿಸಿದರೆ ಅಲ್ಲಿ ಮಹಾ ಯುದ್ಧವೊಂದು ನಡೆದೇ ನಡೆಯುತ್ತೆ. ಅದೂ ನಿಮಗೆ ಗೊತ್ತಿರುವುದೇ.. ಯಾವುದೇ ಕಾರಣಕ್ಕೂ ಅವು ಪರಸ್ಪರ ಎದುರು - ಬದುರಾದರೆ ಜಗಳವನ್ನು ನಿಲ್ಲಿಸುವುದಿಲ್ಲ. ಇವುಗಳ ನಡುವೆ ಇರುವ ವೈಷಮ್ಯವೇ ಹಾಗೆ. ಇವುಗಳ ಹೊಡೆದಾಟಕ್ಕೆ ಯಾವುದೇ ನಿರ್ದಿಷ್ಟ ಘರ್ಷಣೆ ಇಲ್ಲದಿದ್ದರೂ, ಹಾವು ಮುಂಗುಸಿಯ ಆಹಾರವಾಗಿರುವುದರಿಂದ ಈ ಕಾದಾಟ ಸಹಜವಾಗ ಪ್ರಾರಂಭವಾಗುತ್ತದೆ.
ಸಾಮಾನ್ಯವಾಗಿ ನಾವು ಹಾವುಗಳನ್ನು ಬಹಳ ಬೇಗನೆ ಪ್ರತಿಕ್ರಿಯಿಸುತ್ತೇವೆ ಎಂದು ಭಾವಿಸುತ್ತೇವೆ. ಆದರೆ ಮುಂಗುಸಿಗಳು ಹಾವುಗಳಿಗಿಂತ ವೇಗವಾಗಿ ಪ್ರತಿಕ್ರಿಯಿಸುತ್ತವೆ. ಆದ್ದರಿಂದಲೇ ಅನೇಕ ಕಾದಾಟಗಳಲ್ಲಿ ಮುಂಗುಸಿಗಳದ್ದೇ ಮೇಲುಗೈ. ಕೆಲವು ಸಂದರ್ಭಗಳಲ್ಲಿ ಹಾವುಗಳು ತಪ್ಪಿಸಿಕೊಳ್ಳುವುದನ್ನು ಸಹ ಕಾಣಬಹುದಾಗಿದೆ.
ನಾಗರಹಾವು - ಮುಂಗುಸಿ ನಡುವೆ ರಣಭೀಕರ ಕಾಳಗ: ಕೊನೆಯಲ್ಲೊಂದು ಬಿಗ್ ಟ್ವಿಸ್ಟ್ (ETV Bharat) ಇಷ್ಟೆಲ್ಲ ಕಥೆಗೆ ಮೂಲ ಕಾರಣ, ಮಂಚ್ಯಾರ ಜಿಲ್ಲೆಯ ಜನ್ನಾರಂ ಮಂಡಲದ ರೋಟಿಗುಡದಲ್ಲಿ ಇಂತಹದ್ದೇ ಘಟನೆ ನಡೆದಿದೆ. ರೋಟಿಗುಡಾದ ರಸ್ತೆಯಲ್ಲಿ ನಾಗರ ಹಾವು ಬಿದ್ದಿರುವುದನ್ನು ಕಂಡು ವಾಹನ ಸವಾರರು ವಾಹನ ನಿಲ್ಲಿಸಿ ಭಯಭೀತರಾಗಿ ಅತ್ತ ಕಣ್ಣು ಹಾಯಿಸಿದ್ದಾರೆ. ಅದೇ ಸಮಯಕ್ಕೆ ಮುಂಗುಸಿಯೊಂದು ಹಾವಿನ ಮೇಲೆ ಇದ್ದಕ್ಕಿದ್ದಂತೆ ಎರಗಿತ್ತು. ಇದಕ್ಕೂ ಮೊದಲು, ಹಾವು ತನ್ನ ಹೆಡೆ ಎತ್ತಿ ನಾಲಿಗೆ ತೆರೆದು ಮುಂಗುಸಿಗೆ ಪಂಥಹ್ವಾನ ನೀಡಿತ್ತು. ಇದಕ್ಕೆ ಮುಂಗುಸಿಯೂ ಸಿದ್ಧವಾಗಿಯೇ ಬಂದಿತ್ತು. ಎರಡು ಪ್ರಾಣಿಗಳ ನಡುವೆ ಕೆಲವು ಸೆಕೆಂಡುಗಳ ಕಾಲ ಕಾದಾಟವೂ ನಡೆಯಿತು.
ಈ ಹೋರಾಟದಲ್ಲಿ ಮುಂಗುಸಿ ಮೇಲುಗೈ ತೋರಿತು. ಒಂದು ಹಂತದಲ್ಲಿ ಹಾವು ತಪ್ಪಿಸಿಕೊಳ್ಳಲು ಯತ್ನಿಸಿದರೂ ಮುಂಗುಸಿ ಬಿಡಲಿಲ್ಲ. ಅಂತಿಮವಾಗಿ, ಮುಂಗುಸಿಯ ಶಕ್ತಿ, ಕೌಶಲ್ಯ ಮತ್ತು ವೇಗದ ಮುಂದೆ ಹಾವು ನಿಲ್ಲಲು ಸಾಧ್ಯವಾಗಲಿಲ್ಲ. ಮುಂಗುಸಿಯು ಹಾವನ್ನು ಕೊಂದು ಬಾಯಿಯಲ್ಲಿ ಕಚ್ಚಿ ಪೊದೆಯೊಳಗೆ ಹೋಯಿತು. ಈ ಅಪರೂಪದ ಘಟನೆಯನ್ನು ಗ್ರಾಮಸ್ಥರು ಮತ್ತು ವಾಹನ ಸವಾರರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಈ ದೃಶ್ಯಗಳು ವೈರಲ್ ಆಗುತ್ತಿವೆ.
ಇದನ್ನು ಓದಿ:ಗುವಾಹಟಿಯಲ್ಲಿ ED ವಿಚಾರಣೆಗೆ ಹಾಜರಾದ ನಟಿ ತಮನ್ನಾ ಭಾಟಿಯಾ