ETV Bharat / bharat

ಎಫ್​ಐಆರ್​ ದಾಖಲಾದ ಬೆನ್ನಲ್ಲೇ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಪ್ರಶಾಂತ್​ ಕಿಶೋರ್​ - PRASHANT KISHOR HUNGER STRIKE

ಬಿಹಾರ ಲೋಕಸೇವಾ ಆಯೋಗದಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಅವರಿಗೆ ಬಲ ತುಂಬಲು ನಾವು ಅವರ ಜೊತೆ ನಿಲ್ಲುತ್ತೇವೆ ಎಂದು ಪ್ರಶಾಂತ್​ ಕಿಶೋರ್​ ತಿಳಿಸಿದ್ದಾರೆ.

After FIR case Prashant Kishor to begin hunger strike over BPSC aspirants concerns
ಜನ ಸುರಾಜ್​ ಪಕ್ಷದ ಸಂಸ್ಥಾಪಕ ಪ್ರಶಾಂತ್​ ಕಿಶೋರ್ (ANI)
author img

By ETV Bharat Karnataka Team

Published : Jan 2, 2025, 1:27 PM IST

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಖಾಡ ಸಿದ್ಧಪಡಿಸಿಕೊಳ್ಳುತ್ತಿರುವ ಜನ ಸುರಾಜ್​ ಪಕ್ಷದ ಸಂಸ್ಥಾಪಕ ಪ್ರಶಾಂತ್​ ಕಿಶೋರ್​, ಅಮರಣಾಂತ ಉಪವಾಸ ಕೈಗೊಳ್ಳಲು ಮುಂದಾಗಿದ್ದಾರೆ. ಬಿಹಾರ ಲೋಕಸೇವಾ ಆಯೋಗ (ಬಿಪಿಎಸ್​ಸಿ)ದಿಂದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಅವರಿಗೆ ನ್ಯಾಯ ದೊರಕಿಸುವ ಸಲುವಾಗಿ ನಮ್ಮ ಹೋರಾಟ ಸಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಡಿ.13ರಂದು ನಡೆದ 70ನೇ ಬಿಪಿಎಸ್​ಸಿ ಪ್ರಿಲಿಮಿನರಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಅಭ್ಯರ್ಥಿಗಳ ಹೋರಾಟ ಮುಂದುವರೆದ ಬೆನ್ನಲ್ಲೇ ಪ್ರಶಾಂತ್ ಕಿಶೋರ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಬಿಹಾರ ಸರ್ಕಾರಕ್ಕೆ 48 ಗಂಟೆಗಳ ಗಡುವು ನೀಡಿರುವ ಅವರು​, ಪ್ರತಿಭಟನಾನಿರತ ವಿದ್ಯಾರ್ಥಿಗಳ ಬೇಡಿಕೆಯಂತೆ, ಈಗಾಗಲೇ ನಡೆದ ಪರೀಕ್ಷೆ ರದ್ದು ಮಾಡಿ, ಹೊಸ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡುತ್ತಾ ಪ್ರಶಾಂತ್​ ಕಿಶೋರ್​, ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಅವರಿಗೆ ಬಲ ತುಂಬಲು ನಾವು ಅವರ ಜೊತೆ ನಿಲ್ಲುತ್ತೇವೆ ಎಂದಿದ್ದಾರೆ.

ಏನಿದು ಪರೀಕ್ಷಾ ಅಕ್ರಮ?: ಬಿಪಿಎಸ್​ಸಿ 2,031 ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಸಿತ್ತು. ಇದರಲ್ಲಿ 200 ಉಪ ವಿಭಾಗ ಮ್ಯಾಜಿಸ್ಟ್ರೇಟರ್​ ಹಾಗೂ 136 ಡಿಎಸ್​ಪಿ ಹುದ್ದೆಗಳಿದ್ದವು. ರಾಜ್ಯದಲ್ಲಿ ಇತ್ತೀಚಿಗೆ ನಡೆದ ಮಹತ್ವದ ಪರೀಕ್ಷೆಗಳಲ್ಲಿ ಇದು ಪ್ರಮುಖವಾಗಿತ್ತು. ಆದರೆ ಪರೀಕ್ಷೆಯಲ್ಲಿ ಕೇಳಲಾದ ಪರೀಕ್ಷೆಗಳು ಗುಣಮಟ್ಟದ್ದಾಗಿರಲಿಲ್ಲ. ಅಲ್ಲದೇ ಈ ಪ್ರಶ್ನೆಗಳು ಕೋಚಿಂಗ್​ ಸಂಸ್ಥೆಯೊಂದು ನೀಡಿದ್ದ ಮಾದರಿ ಪತ್ರಿಕೆಯನ್ನು ಹೋಲುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು.

ಭಾನುವಾರ ಪಟ್ನಾದ ಗಾಂಧಿ ಮೈದಾನದಲ್ಲಿ ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಕಿಶೋರ್, ಪ್ರತಿಭಟನೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಅವರ ವಿರುದ್ದ ಹಾಗೂ 700 ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬಿಪಿಎಸ್​ಸಿ ಅಧ್ಯಕ್ಷ ರವಿ ಮನು ಬಾಯ್​ ಪರ್ಮಾರ್​ ಸೋಮವಾರ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್​ ಅರ್ಲೆಕರ್​ ಅವರನ್ನು ಭೇಟಿಯಾಗಿದ್ದು, ಈ ಕುರಿತು ಚರ್ಚಿಸಿದ್ದಾರೆ. ಆದರೆ, ಪರೀಕ್ಷೆ ರದ್ದು ಮಾಡಲಾಗಿದೆಯೇ ಅಥವಾ ಮರು ಪರೀಕ್ಷೆ ನಡೆಸಲಾಗುತ್ತದೆಯೇ ಎಂಬ ಕುರಿತು ಸ್ಪಷ್ಟನೆ ಸಿಕ್ಕಿಲ್ಲ.

ಇದನ್ನೂ ಓದಿ: ವಿದ್ಯಾರ್ಥಿಗಳು, ಪೊಲೀಸರ ಮಧ್ಯೆ ಘರ್ಷಣೆ: ಪ್ರಶಾಂತ್ ಕಿಶೋರ್ ವಿರುದ್ಧ ಎಫ್​ಐಆರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.