ETV Bharat / education-and-career

CBSEಯ ಸಿಂಗಲ್ ಗರ್ಲ್ ಚೈಲ್ಡ್’ ಮೆರಿಟ್ ಸ್ಕಾಲರ್‌ಶಿಪ್ ಕುರಿತು ನಿಮಗಿದೆಯಾ ಮಾಹಿತಿ?.. ಈಗಲೇ ಅರ್ಜಿ ಸಲ್ಲಿಸಿ, ಯೋಜನೆಯ ಲಾಭ ಪಡೆಯಿರಿ! - CBSE SCHOLARSHIP SCHEME

ಹೆಚ್ಚಿನ ಆದಾಯ ಹೊಂದಿಲ್ಲದ ಕುಟುಂಬದ ಹೆಣ್ಣು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಪಡೆಯಲು ಪ್ರೋತ್ಸಾಹಿಸುವ ಯೋಜನೆ ಇದಾಗಿದೆ.

cbse-single-girl-child-merit-scholarship-scheme-details
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ; ಸಿಬಿಎಸ್​ಸಿಯ ಸಿಂಗಲ್ ಗರ್ಲ್ ಚೈಲ್ಡ್’ ಮೆರಿಟ್ ಸ್ಕಾಲರ್‌ಶಿಪ್ ಕುರಿತು ಇದ್ಯಾ ಮಾಹಿತಿ? (ಎಎನ್​ಐ - ಸಾಂದರ್ಭಿಕ ಚಿತ್ರ)
author img

By ETV Bharat Karnataka Team

Published : Feb 6, 2025, 12:31 PM IST

ಹೈದರಾಬಾದ್: ಇರುವ ಓರ್ವ ಮಗಳನ್ನು ಉತ್ತಮ ವಿದ್ಯೆ ಕೊಡಿಸಿ, ಆಕೆಯನ್ನು ಸಬಲರಾನ್ನಾಗಿ ಮಾಡಬೇಕು ಎಂದು ಯೋಚಿಸುವ ಅನೇಕ ಪೋಷಕರಿಗೆ ಆಸರೆಯಾಗಿರುವುದು ಸಿಇಬಿಎಸ್​ಸಿಯ ಸಿಂಗಲ್ ಗರ್ಲ್ ಚೈಲ್ಡ್’ ಮೆರಿಟ್ ಸ್ಕಾಲರ್‌ಶಿಪ್. ಹೆಣ್ಣುಮಕ್ಕಳಿಗೆ ಶಿಕ್ಷಣದ ಸೌಲಭ್ಯವನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಮೂಲಕ ಪ್ರತಿಭಾನ್ವಿತ ಹೆಣ್ಣು ಮಕ್ಕಳನ್ನು ಶೈಕ್ಷಣಿಕವಾಗಿ ಬಲಗೊಳಿಸುವ ಕಾರ್ಯವನ್ನು ಹೊಂದಲಾಗಿದೆ. ಅಷ್ಟಕ್ಕೂ ಏನಿದು ಯೋಜನೆ, ಯಾರು ಇದಕ್ಕೆ ಅರ್ಹರು ಎಂಬ ಕುರಿತು ಯೋಚಿಸುತ್ತಿದ್ದರೆ ಇಲ್ಲಿದೆ ಆ ಬಗೆಗಿನ ಮಾಹಿತಿ.

ಸಿಬಿಎಸ್​ಸಿ ಸಿಂಗಲ್ ಗರ್ಲ್ ಚೈಲ್ಡ್’ ಮೆರಿಟ್ ಸ್ಕಾಲರ್‌ಶಿಪ್ ಯೋಜನೆಯ ಪ್ರಯೋಜನವನ್ನು ಕುಟುಂಬದಲ್ಲಿ ಒಂದೇ ಹೆಣ್ಣು ಮಗು ಹೊಂದಿರುವವರು ಪಡೆಯಬಹುದಾಗಿದೆ. ಈಗಾಗಲೇ 10ನೇ ತರಗತಿ ಪಾಸ್​ ಆಗಿ, ಮುಂದಿನ ಶಿಕ್ಷಣಕ್ಕೆ ಎದುರು ನೋಡುತ್ತಿರುವ ಪ್ರತಿಭಾನ್ವಿತ ಹೆಣ್ಣು ಮಗುವು ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ. ಪ್ರತಿವರ್ಷ ಈ ಯೋಜನೆಗಾಗಿ ಸಿಬಿಎಸ್​ಸಿ ಅರ್ಜಿ ಆಹ್ವಾನಿಸುವ ಮೂಲಕ ಅವರ ಮುಂದಿನ ಹಂತದ ಶಿಕ್ಷಣ ಪಡೆಯಲು ಆರ್ಥಿಕವಾಗಿ ಪ್ರೋತ್ಸಾಹಿಸುತ್ತದೆ. ಈ ಬಾರಿ ಕೂಡ ಈ ಸ್ಕಾಲರ್​ಶಿಪ್​ ಪಡೆಯಲು ಅರ್ಜಿ ಆಹ್ವಾನಿಸಲಾಗಿದ್ದು, ಇದಕ್ಕೆ ಅರ್ಜಿ ಸಲ್ಲಿಕೆಗೆ ಕಡೇಯ ದಿನ ಫೆಬ್ರವರಿ 8, 2025 ಆಗಿದೆ. ಈ ಸ್ಕಾಲರ್​ಶಿಪ್​ ಪಡೆಯಲು ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, https://cbseit.in/cbse/2024/sgcx/default.aspx ಈ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

ಸ್ಕಾಲರ್​ಶಿಪ್​ ಕುರಿತಾದ ಮಾಹಿತಿ:

  • ಕುಟುಂಬದಲ್ಲಿರುವ ಓರ್ವ ಹೆಣ್ಣು ಮಗಳಿಗೆ ಶಿಕ್ಷಣ ನೀಡಲು ಪ್ರೋತ್ಸಾಹಿಸಲು ಈ ಮೆರಿಟ್​ ಸ್ಕಾಲರ್​ಶಿಪ್​ ಜಾರಿಗೆ ತರಲಾಗಿದೆ.
  • ಈ ಸ್ಕಾಲರ್​ಶಿಪ್​ಗೆ ಆಯ್ಕೆಯಾದ ವಿದ್ಯಾರ್ಥಿನಿಗೆ ಎರಡು ವರ್ಷಗಳ ಕಾಲ ಪ್ರತಿ ತಿಂಗಳು 1000 ರೂ ಹಣವನ್ನು ನೀಡಲಾಗುವುದು. ಈ ಹಣವನ್ನು ವಿದ್ಯಾರ್ಥಿನಿಯ ಖಾತೆಯಲ್ಲಿ ಜಮೆ ಮಾಡಲಾಗುವುದು.
  • ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿ ಸಿಬಿಎಸ್​ಸಿಯಲ್ಲಿ 10ನೇ ತರಗತಿ ಪೂರ್ಣಗೊಳಿಸಿದ್ದು, ಇದೀಗ ಸಿಬಿಎಸ್​ಪಿ ಅನುಮೋದಿತ ಶಾಲೆಯಲ್ಲಿ 11 ಮತ್ತು 12ನೇ ತರಗತಿ ಓದುತ್ತಿರಬೇಕು.
  • 10ನೇ ತರಗತಿಯಲ್ಲಿ ಕನಿಷ್ಠ 70ರಷ್ಟು ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿದವರು ಮಾತ್ರ ಈ ಸ್ಕಾಲರ್​ಶಿಪ್​ಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
  • ವಿದ್ಯಾರ್ಥಿನಿಯ 10ನೇ ತರಗತಿಯ ಟ್ಯೂಷನ್​ ಫೀಸ್​ 2500 ರೂ ಮತ್ತು 11 ಹಾಗೂ 12ನೇ ತರಗತಿಯಲ್ಲಿ ಟ್ಯೂಷನ್​ ಫೀಸ್​ 3000 ರೂ ಮೀರಿರಬಾರದು.
  • ಸಿಬಿಎಸ್​ಸಿ ಬೋರ್ಡ್​​ನಲ್ಲಿ ಕಲಿಯುವ ಎನ್​ಆರ್​ಐ ವಿದ್ಯಾರ್ಥಿಗಳು ಕೂಡ ಇದರ ಪ್ರಯೋಜನ ಪಡೆಯಬಹುದು. ಅವರ ಟ್ಯೂಷನ್​ ಫೀಸ್​ ಮಾಸಿಕ 6,000 ರೂ ಮೀರಬಾರದು.
  • ಈಗಾಗಲೇ ಈ ಸ್ಕಾಲರ್​ಶಿಪ್​ಗೆ ಆಯ್ಕೆಯಾದ ವಿದ್ಯಾರ್ಥಿಗಳು 11ನೇ ತರಗತಿ ಬಳಿಕ ಇದನ್ನು ಪುನರ್​ನವೀಕರಣ ಮಾಡಬೇಕು. ಈ ರೀತಿ ನವೀಕರಿಸಲು ವಿದ್ಯಾರ್ಥಿಗಳು ಕ್ಲಾಸ್​ 11 ಮತ್ತು 12ರಲ್ಲೂ ಶೇ 70 ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿರಬೇಕು.
  • ಈ ಸ್ಕಾಲರ್​ಶಿಪ್​ ಪಡೆಯುವ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ 8 ಲಕ್ಷ ಮೀರಿರಬಾರದು.
  • ವಿದ್ಯಾರ್ಥಿ ಪ್ರತಿನಿಧಿಸುವ ಶಾಲೆಗಳು ಈ ಕುರಿತ ಅರ್ಜಿಯನ್ನು ಫೆ 15ರೊಳಗೆ ಪರಿಶೀಲಿಸಬೇಕು.

ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಬೇಕಾ?: ಈ ಸಲಹೆಗಳನ್ನು ಪಾಲಿಸಿದರೆ ನೀವೇ ಟಾಪರ್​

ಇದನ್ನೂ ಓದಿ: ನೀಟ್​ ಆಕಾಂಕ್ಷಿಗಳಿಗೆ ಶುಭ ಸುದ್ದಿ: ಈ ವರ್ಷದಿಂದ 1.2 ಲಕ್ಷ ಎಂಬಿಬಿಎಸ್​ ಸೀಟುಗಳು ಲಭ್ಯತೆ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.