ಚೆನ್ನೈ (ತಮಿಳುನಾಡು):ಮಾರ್ಚ್ 1 ರಂದು ಕರ್ನಾಟಕದ ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆ ರೆಸ್ಟೋರೆಂಟ್‌ನಲ್ಲಿ ಸ್ಫೋಟ ಸಂಭವಿಸಿತ್ತು. ರೆಸ್ಟೋರೆಂಟ್ನ ಇಬ್ಬರು ಕೆಲಸಗಾರರು ಸೇರಿದಂತೆ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಸಂಸತ್ ಚುನಾವಣೆ ಸಮೀಪ ಇರುವಾಗಲೇ ಈ ಘಟನೆಯು ದೇಶಾದ್ಯಂತ ಸಂಚಲನ ಮೂಡಿಸಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸ್ಫೋಟದ ಘಟನೆಯ ಬಗ್ಗೆ ಸಕ್ರಿಯವಾಗಿ ತನಿಖೆ ನಡೆಸುತ್ತಿದೆ.
ಈ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳನ್ನು ಎನ್‌ಐಎ ವಶಪಡಿಸಿಕೊಂಡಿದ್ದು, ಬೆಂಗಳೂರು ಪೊಲೀಸರೊಂದಿಗೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ಕೆಲವರಿಗಾಗಿ ಹುಡುಕಾಟ ನಡೆಸುತ್ತಿದೆ. ಭಯೋತ್ಪಾದನೆಯಲ್ಲಿ ಭಾಗಿಯಾಗಿರುವ ಶಂಕಿತರ ಕುರಿತು ಎನ್‌ಐಎ, ಸಿಸಿಟಿವಿ ದೃಶ್ಯಗಳಲ್ಲಿನ ಆರೋಪಿಗಳ ಫೋಟೋಗಳನ್ನು ಹೋಲಿಕೆ ಮಾಡಿ ತನಿಖೆ ನಡೆಸುತ್ತಿದೆ.
ಇದನ್ನು ಆಧರಿಸಿ ಸ್ಫೋಟದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ವ್ಯಕ್ತಿಯ ಹೊಸ ಛಾಯಾಚಿತ್ರಗಳನ್ನು ಮತ್ತು ಸ್ಫೋಟದ ನಂತರ ನಿಗೂಢ ವ್ಯಕ್ತಿಯೊಬ್ಬ ಟೋಪಿ ಧರಿಸಿ ಪರಾರಿಯಾಗುತ್ತಿರುವ ದೃಶ್ಯವನ್ನು ಎನ್‌ಐಎ ಬಿಡುಗಡೆ ಮಾಡಿತ್ತು. ಸ್ವಲ್ಪ ದೂರ ನಡೆದ ನಂತರ ಆ ವ್ಯಕ್ತಿ ಟೋಪಿಯನ್ನು ತೆಗೆದುಹಾಕಿದ್ದನು. ಅಲ್ಲದೆ, ಎನ್‌ಐಎ ಅಧಿಕಾರಿಗಳು, ಆ ಪ್ರದೇಶದ ಶೌಚಾಲಯದಿಂದ ಕ್ಯಾಪ್ ಅನ್ನು ವಶಪಡಿಸಿಕೊಂಡಿದ್ದರು. ಮತ್ತು ಡಿಎನ್‌ಎ ಪರೀಕ್ಷೆಗಾಗಿ ಕ್ಯಾಪ್‌ನಿಂದ ಕೂದಲನ್ನು ತೆಗೆದುಕೊಂಡಿದ್ದರು. ಈ ಡಿಎನ್‌ಎ ಪರೀಕ್ಷೆಯು ಬೇಕಾಗಿರುವ ವ್ಯಕ್ತಿಯ ಕುಟುಂಬಕ್ಕೆ ಹೊಂದಿಕೆಯಾಗುತ್ತದೆಯೇ ಎಂದು ಪರೀಕ್ಷೆ ನಡೆಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಕುರುಹುಗಳನ್ನು ಆಧರಿಸಿ ಆರೋಪಿ ಕರ್ನಾಟಕದ ಕುಟುಂಬದೊಂದಿಗೆ ಹೋಲಿಕೆಯಿರುವುದನ್ನು ದೃಢಪಡಿಸಿದ್ದರು. ಇದು ಕರ್ನಾಟಕ ರಾಜ್ಯದ ವಾಂಟೆಡ್ ಆರೋಪಿ ಶಕೀಬ್ನ ಕೂದಲು ಎಂಬುದು ಕೂಡ ದೃಢಪಟ್ಟಿದೆ. ಸ್ಫೋಟದ ನಂತರ ಆರೋಪಿ, ಕರ್ನಾಟಕದಿಂದ ಕೇರಳ ಮತ್ತು ತಮಿಳುನಾಡು ಮೂಲಕ ಆಂಧ್ರಪ್ರದೇಶದ ನೆಲ್ಲೂರಿಗೆ ಪ್ರಯಾಣಿಸಿದ್ದ. ಶಂಕಿತ ಆರೋಪಿ ಟ್ರಾವೆಲ್ ಹಿಸ್ಟರ್ ಮಾಹಿತಿ ಮಿಸ್ ಆಗಿದೆ ಎಂದು ಎನ್ಐಎ ತಿಳಿಸಿದೆ.
ಅಲ್ಲದೆ, 2020 ರಲ್ಲಿ ಐಎಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 4 ವರ್ಷಗಳಿಂದ ಬೇಕಾಗಿರುವ ಮುಸವೀರ್ ಹುಸೇನ್ ಶಾಕಿಬ್ ಮತ್ತು ಅಬ್ದುಲ್ ಮಡ್ರಿನ್ ತಾಹಾ ಎಂಬ ಇಬ್ಬರು ಶಂಕಿತ ವ್ಯಕ್ತಿಗಳ ಹೆಸರನ್ನು ಈಗಾಗಲೇ ಎನ್ಐಎ ಅಧಿಕಾರಿಗಳು ಘೋಷಿಸಿದ್ದಾರೆ. ಈ ಹಂತದಲ್ಲಿಯೇ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಇವರಿಬ್ಬರೂ ಭಾಗಿಯಾಗಿರುವುದು ಪತ್ತೆಯಾಗಿತ್ತು.