ಹರ್ದೋಯಿ (ಉತ್ತರಪ್ರದೇಶ):ಭಿಕ್ಷೆ ಬೇಡಲು ಮನೆಗೆ ಬರುತ್ತಿದ್ದವನ ಜೊತೆ ಪತ್ನಿ ಓಡಿ ಹೋಗಿದ್ದಾಳೆ ಎಂದು ಪತಿ ಆರೋಪಿದ್ದ ಪ್ರಕರಣ ಸುಳ್ಳು ಮತ್ತು ಆಧಾರರಹಿತ ಎಂದು ಪೊಲೀಸರು ತಿಳಿಸಿದ್ದಾರೆ. 'ಪತಿಯ ಕಿರುಕುಳ, ಚಿತ್ರಹಿಂಸೆ ತಾಳಲಾರದೇ ಸಂಬಂಧಿಕರ ಮನೆಗೆ ಹೋಗಿದ್ದೆ' ಎಂದು ಪೊಲೀಸರ ಮುಂದೆ ಮಹಿಳೆ ಸ್ಪಷ್ಟಪಡಿಸಿದ್ದಾರೆ.
ಪತಿಯ ಕಿರುಕುಳ ತಾಳಲಾರದೇ ಸಂಬಂಧಿಕರ ಮನೆಗೆ ಹೋಗಿದ್ದೆ ಎಂದು ಮಹಿಳೆ ಹೇಳಿಕ ದಾಖಲಿಸಿದ್ದಾರೆ. ಆದ್ದರಿಂದ ಮಹಿಳೆ ಓಡಿ ಹೋಗಿದ್ದಾಳೆ ಎನ್ನುವುದು ಆಧಾರ ರಹಿತ ಮತ್ತು ಸುಳ್ಳು. ಈ ಕುರಿತು ತನಿಖೆ ಕೈಗೊಂಡಿರುವುದಾಗಿ ಹರ್ದೋಯಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ: ರಾಜು ಎಂಬಾತ ನೀಡಿದ ದೂರಿನ ಪ್ರಕಾರ, ತಾವು ಹರ್ದೋಯಿ ನಗರದ ನಿವಾಸಿಯಾಗಿದ್ದು, ಪತ್ನಿ ಮತ್ತು 6 ಮಕ್ಕಳು ಇದ್ದಾರೆ. ನಾವು ವಾಸಿಸುವ ಓಣಿಯಲ್ಲಿ ನನ್ಹೆ ಪಂಡಿತ್ ಎಂದು ಗುರುತಿಸಲಾಗುವ ಭಿಕ್ಷುಕ ದಿನವೂ ಭಿಕ್ಷೆಗೆ ಬರುತ್ತಿದ್ದ. ಭಿಕ್ಷೆ ಪಡೆಯುವ ನೆಪದಲ್ಲಿ ಮನೆಯೊಡತಿಯನ್ನು ಪುಸಲಾಯಿಸಿದ್ದಾನೆ. ಜನವರಿ 3 ರಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಪತ್ನಿಯು ಬಟ್ಟೆ ಮತ್ತು ತರಕಾರಿ ಖರೀದಿಸಲು ಮಾರುಕಟ್ಟೆಗೆ ತೆರಳುವುದಾಗಿ ತನ್ನ ಮಗಳಿಗೆ ತಿಳಿಸಿದ್ದಳು. ಸಂಜೆಯಾದರೂ ಆಕೆ ಮನೆಗೆ ವಾಪಸ್ ಬರಲಿಲ್ಲ. ಆತಂಕದಲ್ಲಿ ನಾವು ಎಲ್ಲ ಕಡೆಯೂ ಹುಡುಕಾಡಿದೆವು. ಎಲ್ಲೂ ಪತ್ತೆಯಾಗದ ಕಾರಣ, ಭಿಕ್ಷುಕನ ಜೊತೆ ಹೋಗಿರುವ ಶಂಕೆಯ ಮೇಲೆ ದೂರು ನೀಡಿದ್ದಾಗಿ ಪತಿ ಹೇಳಿದ್ದರು.