Electricity Bill In MyJio App: ಜಿಯೋ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್‌ಗಳಲ್ಲಿ ಒಂದು. ಕಂಪನಿಯು ಅನ್ಲಿಮಿಟೆಡ್ ವಾಯ್ಸ್ ಕಾಲ್ಸ್, ಹೈ-ಸ್ಪೀಡ್ ಡೇಟಾ ಮತ್ತು ವಿವಿಧ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶ ನೀಡುವ ಕೈಗೆಟುಕುವ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳಿಗೆ ಹೆಸರುವಾಸಿ. 'ಮೈಜಿಯೋ' ಅಪ್ಲಿಕೇಶನ್ ನಿಸ್ಸಂದೇಹವಾಗಿ ನಿಮ್ಮ ಜಿಯೋ ಮೊಬೈಲ್ ಸಂಖ್ಯೆಯನ್ನು ರೀಚಾರ್ಜ್ ಮಾಡಲು ಅತ್ಯಂತ ವೇಗದ ವೇದಿಕೆಯಾಗಿದೆ.
ಇನ್ನು ಮುಂದೆ ಇದೇ ಆ್ಯಪ್ ಮೂಲಕ ನೀವು ಯುಟಿಲಿಟಿ ಬಿಲ್‌ಗಳನ್ನೂ ಸಹ ಪಾವತಿಸಬಹುದು. 'ಮೈಜಿಯೋ' ಆ್ಯಪ್ ಮೂಲಕ ನಿಮ್ಮ ಮನೆಯಿಂದಲೇ ನೀವು ವಿದ್ಯುತ್ ಬಿಲ್‌ಗಳನ್ನು ಸುಲಭವಾಗಿ ಪಾವತಿಸಬಹುದು.
ಮೈಜಿಯೋ ಆ್ಯಪ್‌ನಲ್ಲಿ ವಿದ್ಯುತ್ ಬಿಲ್ ಪಾವತಿ ಹೇಗೆ?:
- ಮೊದಲು, ಆ್ಯಪಲ್‌ನ ಆ್ಯಪ್ ಸ್ಟೋರ್ ಅಥವಾ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ 'ಮೈಜಿಯೊ' ಆ್ಯಪ್ ಡೌನ್‌ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.
- ನಂತರ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಮತ್ತು ಲಾಗಿನ್ ಆಗಿ.
- ಈ ಪ್ರಕ್ರಿಯೆಯ ನಂತರ ನಿಮ್ಮ ಸ್ಕ್ರೀನ್ ಅನ್ನು ಸ್ವಲ್ಪ ಕೆಳಗೆ ಸ್ಕ್ರಾಲ್ ಮಾಡಿ. ಕೆಳಭಾಗದಲ್ಲಿ 'Finance' ಸೆಕ್ಷನ್ ಕಾಣುತ್ತೆ. ಅದರಲ್ಲಿ 'Bills' ಮೇಲೆ ಟ್ಯಾಪ್ ಮಾಡಿ.
- ಈಗ ಅಲ್ಲಿ ಕಾಣಿಸಿಕೊಳ್ಳುವ 'Electricity' ಆಪ್ಷನ್ ಆಯ್ಕೆ ಮಾಡಿ. ನಂತರ ಅದು ನಿಮಗೆ ಬೆಂಬಲಿತ ವಿದ್ಯುತ್ ಆಪರೇಟರ್‌ಗಳ ಲಿಸ್ಟ್ ತೋರಿಸುತ್ತದೆ.
- ಅಲ್ಲಿ ಕಾಣಿಸಿಕೊಳ್ಳುವ ನಿಮ್ಮ ವಿದ್ಯುತ್ ಆಪರೇಟರ್ ಹೆಸರನ್ನು ಆಯ್ಕೆ ಮಾಡಿ. ನಿಮಗೆ ಇದು ತಿಳಿದಿಲ್ಲದಿದ್ದರೆ, ನಿಮ್ಮ ವಿದ್ಯುತ್ ಬಿಲ್‌ನಲ್ಲಿರುವ ಹೆಸರನ್ನು ನೀವು ಪರಿಶೀಲಿಸಬಹುದು ಮತ್ತು ಅದನ್ನು ಆಯ್ಕೆ ಮಾಡಬಹುದು.
- ಇದಾದ ಬಳಿಕ ನೀವು ನಿಮ್ಮ ಕಸ್ಟಮರ್ ಐಡಿ ನಮೂದಿಸಿ ಮತ್ತು 'Proceed' ಬಟನ್ ಕ್ಲಿಕ್ ಮಾಡಿ.
- ಈಗ ನೀವು ವಿದ್ಯುತ್ ಬಿಲ್ ಮೊತ್ತ ನಮೂದಿಸಬಹುದು ಮತ್ತು ಪಾವತಿಗಾಗಿ ನಿಮ್ಮ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ UPIನಿಂದ ಯಾವುದೇ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇದರಿಂದ ನೀವು ಅಗತ್ಯ ವಿವರಗಳನ್ನು ನಮೂದಿಸಿ ಪಾವತಿಯನ್ನು ಪೂರ್ಣಗೊಳಿಸಬಹುದು.
JioMoney ಆ್ಯಪ್ ಇನ್ನು ಮುಂದೆ ಲಭ್ಯವಿಲ್ಲ: ನೀವು ಆನ್‌ಲೈನ್ ಬಿಲ್ ಪಾವತಿಗಳಿಗಾಗಿ 'JioMoney' ಆಪ್ ಬಗ್ಗೆ ಯೋಚಿಸುತ್ತಿದ್ದರೆ, ರಿಲಯನ್ಸ್ ಜಿಯೋ ಈ ಆ್ಯಪ್ ಅನ್ನು ಆ್ಯಪಲ್ ಮತ್ತು ಗೂಗಲ್ ಸ್ಟೋರ್‌ಗಳಿಂದ ತೆಗೆದುಹಾಕಿದೆ ಎಂಬುದು ಗಮನಿಸಬೇಕಾದ ಸಂಗತಿ. ಆದರೂ ಈ 'JioMoney' ಅಪ್ಲಿಕೇಶನ್‌ನಲ್ಲಿರುವ ಅದೇ ವೈಶಿಷ್ಟ್ಯವು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಲಭ್ಯ. ಆದರೆ ನೀವು ಜಿಯೋ ಬಳಕೆದಾರರಾಗಿದ್ದರೆ, 'ಮೈಜಿಯೋ' ಅಪ್ಲಿಕೇಶನ್ ಸಹಾಯದಿಂದ ಬಿಲ್‌ಗಳನ್ನು ಪಾವತಿಸಬಹುದು. ಇದು ಆನ್‌ಲೈನ್ ಬಿಲ್ ಪಾವತಿಗಳನ್ನು ಹಿಂದೆಂದಿಗಿಂತಲೂ ಹೆಚ್ಚು ಸುಲಭ ಮತ್ತು ಅನುಕೂಲಕರವಾಗಿಸುತ್ತದೆ.
ಇದನ್ನೂ ಓದಿ: 3 ಕ್ಯಾಮೆರಾ, ಅದ್ಭುತ ಫೀಚರ್ಸ್: ಭಾರತ ಸೇರಿ ಜಾಗತಿಕ ಮಾರುಕಟ್ಟೆಗೆ ಬರ್ತಿದೆ ನಥಿಂಗ್ ನ್ಯೂ ಮಾಡೆಲ್