ಕರ್ನಾಟಕ

karnataka

ETV Bharat / bharat

ಒಡಿಶಾದ ಪುರಿ ಬಳಿ ಕಂಪಿಸಿದ ಭೂಮಿ; ರಿಕ್ಟರ್​ ಮಾಪಕದಲ್ಲಿ 5.1 ರಷ್ಟು ತೀವ್ರತೆ ದಾಖಲು - EARTHQUAKE ODISHAS PURI

ಬಂಗಾಳ ಕೊಲ್ಲಿ ಸಾಗರದೊಳಗೆ ಈ ಭೂಕಂಪನ ಉಂಟಾಗಿರುವ ಹಿನ್ನೆಲೆಯಲ್ಲಿ ಪುರಿ ಬಳಿ ಕೂಡ ಭೂಮಿ ನಡುಗಿದ ಅನುಭವವಾಗಿದೆ. ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ

5-dot-1-magnitude-earthquake-recorded-in-bay-of-bengal-near-odishas-puri
ಸಾಂದರ್ಭಿಕ ಚಿತ್ರ (ಐಎಎನ್​ಎಸ್​​)

By ETV Bharat Karnataka Team

Published : Feb 25, 2025, 9:48 AM IST

ಭುವನೇಶ್ವರ್​/ಕೋಲ್ಕತ್ತಾ: ಇತ್ತೀಚೆಗಷ್ಟೇ ದೆಹಲಿಯಲ್ಲಿ ಭೂ ಕಂಪನದ ಅನುಭವದ ಬೆನ್ನಲ್ಲೇ ಇದೀಗ ಒಡಿಶಾದ ಪುರಿಯ ಬಳಿಯಲ್ಲಿ ಸಣ್ಣದಾಗಿ ಭೂಮಿ ಕಂಪಿಸಿದ್ದು, ರಿಕ್ಟರ್​ ಮಾಪಕದಲ್ಲಿ 5.1ರಷ್ಟು ತೀವ್ರತೆ ದಾಖಲಾಗಿದೆ.

ಪುರಿ ಸಮೀಪದ ಬಂಗಾಳ ಕೊಲ್ಲಿ ಸಾಗರದ 91 ಕಿ.ಮೀ ಆಳದಲ್ಲಿ ಇಂದು ಬೆಳಗ್ಗೆ ಸುಮಾರು 6.10 ನಿಮಿಷಕ್ಕೆ ಭೂಮಿ ಕಂಪಿಸಿದೆ. ಇಲ್ಲಿ ಭೂಕಂಪನವೂ ಅಕ್ಷಾಂಶ 19.52 ಎನ್​ ಮತ್ತು ರೇಖಾಂಶ 88.55 ಇ ನಡುವೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಈ ಭೂ ಕಂಪನವೂ ಜನರಲ್ಲಿ ಕೆಲಕಾಲ ಆತಂಕವನ್ನುಂಟು ಮಾಡಿತ್ತು. ಆದರೆ ಯಾವುದೇ ಆಸ್ತಿ ಪಾಸ್ತಿ ಹಾನಿ ಅಥವಾ ಸಾವು ನೋವಿನ ವರದಿಯಾಗಿಲ್ಲ. ಈ ಭೂಕಂಪವೂ ಬಂಗಾಳ ಕೊಲ್ಲಿಯಲ್ಲಿ ಆಗಿರುವುದರಿಂದ ಇದರ ಪರಿಣಾಮ ಕಂಡು ಬಂದಿಲ್ಲ ಎಂದು ಒಡಿಯಾದ ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪುರಿ ಸಮೀಪದಲ್ಲಿ ಇದು ಹೆಚ್ಚು ಅನುಭವಕ್ಕೆ ಬಂದಿದೆ. ಅದನ್ನು ಹೊರತುಪಡಿಸಿ, ಒಡಿಶಾದ ಪಾರಾದೀಪ್, ಪುರಿ, ಬರ್ಹಾಂಪುರ ಮತ್ತು ಇತರ ಕೆಲವು ಸ್ಥಳಗಳಲ್ಲಿ ಕಂಪನದ ಅನುಭವವಾಗಿದೆ ಎಂದು ವರದಿ ತಿಳಿಸಿದೆ.

ಕೋಲ್ಕತ್ತಾ ಭೂಕಂಪನ ವಲಯ III : ಕೋಲ್ಕತ್ತಾ ಭೂಕಂಪನ ವಲಯ III ರಲ್ಲಿ ಇಂದಿನ ಕಂಪನ ಬರುತ್ತದೆ. ಇದರರ್ಥ ನಗರವು ಭೂಕಂಪಗಳ ಮಧ್ಯಮ ಅಪಾಯದಲ್ಲಿದೆ ಎಂದು. ಇದು ಈಶಾನ್ಯ ಭಾರತ, ಹಿಮಾಲಯ ಅಥವಾ ಗುಜರಾತ್‌ನಂತಹ ಸ್ಥಳಗಳಂತೆ ದೊಡ್ಡ ಭೂಕಂಪಗಳಿಗೆ ಗುರಿಯಾಗದಿದ್ದರೂ, ಆಗಾಗ ಇಂತಹ ಕಂಪನಗಳು ಸದ್ದು ಮಾಡುತ್ತವೆ. ಇವುಗಳು ಸಾಮಾನ್ಯವಾಗಿ ಬಂಗಾಳಕೊಲ್ಲಿ, ನೇಪಾಳ, ಅಥವಾ ಈಶಾನ್ಯ ಭಾರತದಂತಹ ಹತ್ತಿರದ ಪ್ರದೇಶಗಳಲ್ಲಿ ಸಂಭವಿಸುತ್ತಿರುತ್ತವೆ. ಮ್ಯಾನ್ಮಾರ್ ಮತ್ತು ಈಶಾನ್ಯದ ಅಡಿಯಲ್ಲಿ ಕೋಲ್ಕತ್ತಾಗೆ ನೇರವಾಗಿ ಹತ್ತಿರದಲ್ಲಿಲ್ಲದ ಕಾರಣ ಸಾಮಾನ್ಯವಾಗಿ ನಡುಕ ಸಂಭವಿಸುವುದಿಲ್ಲ.

ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ 15 ಸಾವಿರ ಕಾರ್ಮಿಕರಿಂದ ಏಕಕಾಲಕ್ಕೆ ಸ್ವಚ್ಛತಾ ಅಭಿಯಾನ: ಐ ವರ್ಲ್ಡ್ ರೆಕಾರ್ಡ್

ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ 62ಕೋಟಿ ಮಂದಿ: ಪ್ರಯಾಗರಾಜ್​​​ ಗಾಳಿ ಈಗಲೂ ಶುದ್ಧ, ಸಮಾರೋಪಕ್ಕೆ ಕ್ಷಣಗಣನೆ

ABOUT THE AUTHOR

...view details