ಕರ್ನಾಟಕ

karnataka

ಕೊರೊನಾ ಟೆಸ್ಟ್​ನಲ್ಲಿ ನಾನು ಪಾಸ್: ರಿಪೋರ್ಟ್​ ಸಮೇತ ಟ್ವೀಟ್​ ಮಾಡಿದ ಜಮೀರ್ ಅಹಮದ್

By

Published : Apr 27, 2020, 12:58 PM IST

ಕಳೆದ ಕೆಲವು ದಿನಗಳಿಂದ ನಾನು ಸಾಕಷ್ಟು ಓಡಾಟ ಮಾಡಿದ್ದೇನೆ ಜೊತೆಗೆ ಅನೇಕ ಜನರ ಒಡನಾಟದಲ್ಲಿದ್ದೇನೆ. ಹಾಗಾಗಿ ನನ್ನಿಂದ ಇತರರಿಗೆ ಯಾವ ರೀತಿಯಲ್ಲೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸ್ವತಃ ನಾನೇ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದೆ. ಇದೀಗ ಕೊರೊನಾ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ ಎಂದು ಶಾಸಕ ಜಮೀರ್ ಅಹಮದ್ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಜಮೀರ್ ಅಹಮದ್
ಜಮೀರ್ ಅಹಮದ್

ಬೆಂಗಳೂರು: ನನ್ನ ಕೊರೊನಾ ವೈರಸ್​ ಪರೀಕ್ಷೆಯ ವರದಿ ನೆಗೆಟಿವ್ ಎಂದು ಬಂದಿದೆ ಎಂದು ಶಾಸಕ ಜಮೀರ್ ಅಹಮದ್ ಟ್ವೀಟ್​ ಮಾಡಿದ್ದಾರೆ.

ಜಮೀರ್ ಅಹಮದ್ ಟ್ವೀಟ್​

ಕಳೆದ ಕೆಲವು ದಿನಗಳಿಂದ ನಾನು ಸಾಕಷ್ಟು ಓಡಾಟ ಮಾಡಿದ್ದೇನೆ ಜೊತೆಗೆ ಅನೇಕ ಜನರ ಒಡನಾಟದಲ್ಲಿದ್ದೇನೆ. ಮೊನ್ನೆ ಅಗತ್ಯ ಮುಂಜಾಗ್ರತೆ ಕ್ರಮದೊಂದಿಗೆ ಕೊರೊನಾದಿಂದ ಸಾವಿಗೀಡಾದ ಮಹಿಳೆಯ ಅಂತ್ಯ ಸಂಸ್ಕಾರದಲ್ಲೂ ಭಾಗವಹಿಸಿದ್ದೆ. ಕೊರೊನಾವೆಂಬ ಮಾರಕ ಕಾಯಿಲೆ ಯಾರಿಗೆ ಬೇಕಾದರೂ ಹರಡುವ ಸಾಧ್ಯತೆಗಳಿದ್ದು, ತಳ್ಳಿಹಾಕುವಂತಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸುವುದಷ್ಟೇ ಅಲ್ಲ, ನನ್ನಿಂದ ಇತರರಿಗೆ ಯಾವ ರೀತಿಯಲ್ಲೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸ್ವತಃ ನಾನೇ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದೆ ಅಂತ ಶಾಸಕ ಜಮೀರ್ ಅಹಮದ್ ಟ್ವೀಟ್​ ಮಾಡಿದ್ದಾರೆ.‌

ಇನ್ನು ಕೊರೊನಾ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ. ಇದರಿಂದ ಕಷ್ಟದಲ್ಲಿರುವ ಜನರಿಗೆ ಇನ್ನಷ್ಟು ಸಹಾಯ ಮಾಡಲು ನನಗೆ ಬಲ ಬಂದಿದೆ ಎಂದು ಟ್ವೀಟ್​ ಮಾಡಿ, ತಮ್ಮ ವರದಿಯನ್ನು ಅಪ್​ಲೋಡ್ ಮಾಡಿದ್ದಾರೆ.

ABOUT THE AUTHOR

...view details