ETV Bharat / entertainment

ಸೋಷಿಯಲ್​ ಮೀಡಿಯಾದಲ್ಲಿ ರಣ್​​​ಬೀರ್ ಆಲಿಯಾ ಮಗಳದ್ದೇ ಸದ್ದು: ರಾಹಾ ಕ್ಯೂಟ್​ ವಿಡಿಯೋ ವೈರಲ್​ - Raha Cute Video - RAHA CUTE VIDEO

ಜನಪ್ರಿಯ ತಾರಾ ದಂಪತಿ ರಣ್​​​ಬೀರ್ ಕಪೂರ್ ಮತ್ತು ಆಲಿಯಾ ಭಟ್ ಪುತ್ರಿ ರಾಹಾ ಇಂದು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಬಾಲಿವುಡ್‌ನ ಅತ್ಯಂತ ಫೇಮಸ್​​ ಸ್ಟಾರ್ ಕಿಡ್ ಆಗಿ ಗುರುತಿಸಿಕೊಂಡಿರುವ ರಾಹಾಳ ಕ್ಯೂಟ್​​ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Ranbir Kapoor with daughter Raha
ಮಗಳು ರಾಹಾ ಜೊತೆ ರಣ್​ಬೀರ್​ ಕಪೂರ್​ (IANS)
author img

By ETV Bharat Karnataka Team

Published : Jul 28, 2024, 9:11 PM IST

ರಣ್​​​ಬೀರ್ ಕಪೂರ್ ಮತ್ತು ಆಲಿಯಾ ಭಟ್ ಬಾಲಿವುಡ್​ನ ಜನಪ್ರಿಯ ತಾರಾ ದಂಪತಿ. ಇಬ್ಬರ ಸಿನಿ ಸಾಧನೆ ಉನ್ನತ ಮಟ್ಟದಲ್ಲಿದೆ. ಸೆಲೆಬ್ರಿಟಿ ಕಪಲ್​ನ ವೃತ್ತಿಜೀವನದ ಜೊತೆಗೆ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ಉತ್ಸುಕರಾಗಿರುತ್ತಾರೆ. ಅದರಂತೆ, ರಾಲಿಯಾ ಪುತ್ರಿ ರಾಹಾ ಕೂಡಾ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್​​​. ಕ್ಯೂಟ್​ ಬೇಬಿಯ ವಿಡಿಯೋಗಳಿಗಾಗಿಯೇ ಕಾದು ಕೂರುವವರ ಸಂಖ್ಯೆ ಕೂಡ ದೊಡ್ಡದಿದೆ. ಇಂದು ಶೇರ್ ಆಗಿರುವ ರಾಹಾಳ ವಿಡಿಯೋ ಸೋಷಿಯಲ್​ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​​ ಆಗಿದ್ದು, ಹೆಚ್ಚಿನ ಸಂಖ್ಯೆಯ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಲಿಯಾ ಪುತ್ರಿ ರಾಹಾ ಸದ್ಯ ಬಾಲಿವುಡ್‌ನ ಅತ್ಯಂತ ಫೇಮಸ್​​ ಸ್ಟಾರ್ ಕಿಡ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಪುಟ್ಟ ಕಂದಮ್ಮ ಪಾಪರಾಜಿಗಳಿಂದ ಮಾತ್ರವಲ್ಲದೇ ಸೋಷಿಯಲ್​ ಮೀಡಿಯಾ ಬಳಕೆದಾರರು, ರಾಲಿಯಾ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿದೆ. ಇಂದು ಮುಂಬೈನ ಬಾಂದ್ರಾದಲ್ಲಿ ಅಪ್ಪ-ಮಗಳ ಜೋಡಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು, ವಿಡಿಯೋಗಳು ವ್ಯಾಪಕವಾಗಿ ವೈರಲ್​ ಆಗಿದೆ. ಹೆಚ್ಚಿನ ಸಂಖ್ಯೆಯ ಇಂಟರ್​ನೆಟ್​ ಬಳಕೆದಾರರಿಗೆ ಈ ವಿಡಿಯೋ ಇಷ್ಟ ಆಗಿದ್ದು, ರಾಹಾ ಸಖತ್​ ಕ್ಯೂಟ್​ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ರಾಹಾ ಇಂದು ತಂದೆ ರಣ್​ಬೀರ್​ ಕಪೂರ್​ ಜೊತೆ ಹೊರ ಬಂದಿದ್ದೇ ತಡ ಪಾಪರಾಜಿಗಳು ಸುಂದರ ಕ್ಷಣಗಳನ್ನು ಸೆರೆ ಹಿಡಿದಿದ್ದಾರೆ. ಎಂದಿನಂತೆ ತನ್ನ ಕ್ಯೂಟ್​ ಎಕ್ಸ್​​ಪ್ರೆಶನ್​ ಮೂಲಕ ನೋಡುಗರ ಖುಷಿಗೆ ಕಾರಣವಾಗಿದ್ದಾಳೆ. ತಂದೆ ರಣ್​ಬೀರ್​​ ಜೊತೆ ಹೆಜ್ಜೆ ಹಾಕಿದ್ದು, ಅಭಿಮಾನಿಗಳ ಗಮನ ಸೆಳೆದಿದ್ದಾಳೆ. ಕೆಲ ಹೊತ್ತಿನ ನಂತರ, ರಣ್​ಬೀರ್ ರಾಹಾಳನ್ನು ಹಿಡಿದು ಮುದ್ದು ಮಾಡುತ್ತಿರುವಂತೆ ಕಂಡುಬಂದಿದೆ. ರಾಹಾಳ ಕ್ಯೂಟ್​ ವಿಡಿಯೋವನ್ನು ಸೆಲೆಬ್ರಿಟಿ ಫೋಟೋಗ್ರಾಫರ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಇದನ್ನೂ ಓದಿ: ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಜೊತೆ ಸೂಪರ್​ಸ್ಟಾರ್ ರಾಮ್​ಚರಣ್​​: ಚಿರಂಜೀವಿ​​ ಫ್ಯಾಮಿಲಿಯ ಫೋಟೋ-ವಿಡಿಯೋ - Ram Charan and PV Sindhu

ವಿಡಿಯೋಗೆ ನೆಟಿಜನ್‌ಗಳು ಪ್ರತಿಕ್ರಿಯೆ ಕೊಡುತ್ತಿದ್ದಾರೆ. ವಿಡಿಯೋಗೆ ಕಾಮೆಂಟ್​ ಮಾಡಿದ ನೆಟ್ಟಿಗರೋರ್ವರು "ರಾಹಾ ಈಗ ನಿಜವಾಗಿಯೂ ಅಮ್ಮಾ ಆಲಿಯಾ ಭಟ್‌ನಂತೆ ಕಾಣುತ್ತಾಳೆ" ಎಂದು ತಿಳಿಸಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, "ಅವಳು ಅಲಿಯಾರಂತೆ ಕಾಣುತ್ತಿದ್ದಾಳೆ" ರಂದು ತಿಳಿಸಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ "ರಾಹಾ ಬಹಳ ಕ್ಯೂಟ್​. ಅಲಿಯಾರಂತೆ ಕಾಣುತ್ತಿದ್ದಾಳೆ" ಎಂದು ತಿಳಿಸಿದ್ದಾರೆ. ಇನ್ನೋರ್ವರು ಕೂಡಾ ಇದೇ ರೀತಿ ಕಾಮೆಂಟ್ ಮಾಡಿದ್ದು, "ರಾಹಾ ಪುಟ್ಟ ಆಲಿಯಾರಂತೆ ಕಾಣುತ್ತಾಳೆ, ಕ್ಯೂಟಿ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕುತೂಹಲ ಹೆಚ್ಚಿಸಿದ ಪ್ರಭಾಸ್​ ಪೋಸ್ಟರ್: ನಾಳೆ 'ದಿ ರಾಜಾ ಸಾಬ್‌' ಗ್ಲಿಂಪ್ಸ್​​ ರಿಲೀಸ್​​ - Prabhas Poster

ರಾಹಾ ಕಪೂರ್​ 2022ರ ನವೆಂಬರ್​ನಲ್ಲಿ ಜನಿಸಿದರು. ಅದೇ ವರ್ಷದ ಏಪ್ರಿಲ್‌ನಲ್ಲಿ ರಾಲಿಯಾ ತಮ್ಮ ನಿವಾಸದಲ್ಲೇ ಕಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನ ಆರಂಭಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.