ನವದೆಹಲಿ: ಈ ಬಾರಿ ಬಜೆಟ್ಲ್ಲಿ ಮೊಬೈಲ್ ಮೇಲಿನ ಕಸ್ಟಮ್ಸ್ ಸುಂಕವನ್ನು ಕೇಂದ್ರ ಸರ್ಕಾರ ಕಡಿತ ಮಾಡಿದೆ. ಪರಿಣಾಮವಾಗಿ ಐಫೋನ್ ಬೆಲೆಳಗಳಲ್ಲಿ ಭಾರೀ ಇಳಿಕೆ ಮಾಡಿ ಭಾರತೀಯರಿಗೆ ಆ್ಯಪಲ್ ಸಿಹಿ ಸುದ್ದಿ ನೀಡಿದೆ. ಆ್ಯಪಲ್ ಹೊರಡಿಸಿರುವ ದರದ ಪಟ್ಟಿ ಅನುಸಾರ, ಆಮದು ಮಾಡಿಕೊಳ್ಳುವ ಐಫೋನ್ ಪ್ರೊ ಮಾಡೆಲ್ಗಳಲ್ಲಿ 5,100-6000 ಕಡಿತವಾಗಲಿದೆ.
ಈ ಮೊದಲು ಆ್ಯಪಲ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮಾಕ್ಸ್ ಆರಂಭಿಕ ಬೆಲೆ ಕ್ರಮವಾಗಿ 1,34,900 ಮತ್ತು 1,59,900 ರೂ. ಇತ್ತು.
128 ಜಿಬಿ ಸ್ಟೊರೇಜ್ನ ಐಫೋನ್ ಪ್ರೊ ಮಾಡೆಲ್ ಬೆಲೆ ಭಾರತದಲ್ಲಿ 1,29,000 ರೂ.ಗೆ ಇದೀಗ ಕೊಳ್ಳಬಹುದಾಗಿದೆ. ಅಂದರೆ ಐಫೋನ್ ಬೆಲೆಗಳ ಮೇಲೆ 3.7ರಷ್ಟು ಕಡಿತ ಮಾಡಲಾಗಿದೆ. ಇನ್ನು, 265 ಜಿಬಿ ಸ್ಟೊರೇಜ್ನ ಐಫೋನ್ ಪ್ರೊ ಮ್ಯಾಕ್ಸ್ ಬೆಲೆಯಲ್ಲಿ ಶೇ 10ರಷ್ಟು ತಗ್ಗಿಸಲಾಗಿದೆ. 1,59,00 ಬದಲಾಗಿ 1,54,000 ರೂಗೆ ಇದೀಗ ಕೊಳ್ಳಬಹುದಾಗಿದೆ.
ಭಾರತದಲ್ಲೇ ತಯಾರಿಸಿದ ಮೇಡ್ ಇನ್ ಇಂಡಿಯಾ ಐಫೋನ್ಗಳಾಗ 13, 14 ಮತ್ತು 15 ಮಾದರಿಗಳ ಬೆಲೆಗಳು ಕೂಡ 300 ರೂ ತಗ್ಗಿದೆ. ಐಫೋನ್ ಎಸ್ಇ ಬೆಲೆ 2,300 ಕಡಿಮೆಯಾಗಿದೆ. ಪ್ರವೇಶ ಹಂತದ ಐಫೋನ್ ಎಸ್ಇ ಬೆಲೆ ಇದೀಗ 49,900 ರೂ ಬದಲಾಗಿ 47,600 ರೂ ಆಗಿದೆ.
ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ್ದ ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್, ಗ್ರಾಹಕರ ಹಿತದೃಷ್ಟಿಯಿಂದ, ಮೊಬೈಲ್ ಫೋನ್‌ಗಳು, ಮೊಬೈಲ್ ಪಿಸಿಬಿಎ ಮತ್ತು ಮೊಬೈಲ್ ಚಾರ್ಜರ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 15 ಕ್ಕೆ ಇಳಿಸುವುದಾಗಿ ಘೋಷಿಸಲಾಗಿತ್ತು. ಈ ಘೋಷಣೆ ಒಂದು ವಾರದೊಳಗೆ ಮೊಬೈಲ್ ಬೆಲೆ ಬದಲಾವಣೆಗಳು ಜಾರಿಗೆ ಬರಲಿದೆ.
ಕೇಂದ್ರ ಸರ್ಕಾರ ಎಲೆಕ್ಟ್ರಾನಿಕ್ ಉತ್ಪನ್ನ ಮೇಲಿನ ಕಸ್ಟಮ್ಸ್ ಸುಂಕ ಇಳಿಕೆ ಮಾಡಿದ್ದನ್ನು ಮಾರುಕಟ್ಟೆ ವಿಶ್ಲೇಷಕರು ಕೂಡ ಸ್ವಾಗತಿಸಿದ್ದರು. ಭಾರತದಲ್ಲಿ ಐಫೋನ್ ಮಾರುಕಟ್ಟೆ ವಿಸ್ತರಣೆ ಕಾಣುತ್ತಿದ್ದು, ಭಾರತದಲ್ಲಿ ಆರ್ಥಿಕ ಸುಧಾರಣೆಗಳ ನಡುವೆ ಭಾರತದಲ್ಲಿ ಐಫೋನ್‌ಗಳ ಮಾರುಕಟ್ಟೆ ಪಾಲು ಕೂಡ ಹೆಚ್ಚುತ್ತಿದೆ. ಆ್ಯಪಲ್ ಸಂಸ್ಥೆ ಕೂಡ ಭಾರತದಲ್ಲಿ ಮಾರುಕಟ್ಟೆ ವೃದ್ಧಿಗೆ ಒತ್ತು ನೀಡುತ್ತಿದ್ದು, ಸರ್ಕಾರದ ನಡೆಯನ್ನು ಸ್ವೀಕರಿಸಿದ್ದು, ಕಸ್ಟಮ್ ಸುಂಕ ಕಡಿತದ ಹಿನ್ನಲೆ ಬೆಲೆ ಇಳಿಕೆಗೆ ಮುಂದಾಗಿದೆ. (ಪಿಟಟಿಐ)
ಇದನ್ನೂ ಓದಿ: ಮೊಬೈಲ್ ಪ್ರಿಯರಿಗೆ ಗುಡ್ ನ್ಯೂಸ್: ಮೊಬೈಲ್ ಫೋನ್, ಬಿಡಿಭಾಗಗಳ ಮೇಲಿನ ಕಸ್ಟಮ್ಸ್ ಸುಂಕ ಶೇ.15ಕ್ಕೆ ಇಳಿಕೆ