ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ನ ಮಹಿಳಾ ಆರ್ಚರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿಂದ ಭಾರತ ಮಹಿಳಾ ತಂಡ ನೆದರ್ಲೆಂಡ್ಸ್ ವಿರುದ್ಧ 6-0 ಅಂತರದಿಂದ ಹೀನಾಯ ಸೋಲನುಭವಿಸಿದೆ. ನೆದರ್ಲೆಂಡ್ಸ್ 52-51, 54-49, 53-48 ಮೂರು ನೇರ ಸೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿದೆ.
ಅಂಕಿತಾ ಭಕ್ತ, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನು ಒಳಗೊಂಡ ನಾಲ್ಕನೇ ಶ್ರೇಯಾಂಕದ ಭಾರತೀಯ ಮಹಿಳಾ ಆರ್ಚರಿ ತಂಡವು ಮೂರು ಸೆಟ್‌ಗಳಲ್ಲಿ ಕೇವಲ 51, 49 ಮತ್ತು 48 ಅಂಕಗಳನ್ನು ಗಳಿಸಿತು. ಇದರಲ್ಲಿ ಐದು ಬಾರಿ 10 ಅಂಕಗಳನ್ನು ಕಲೆಹಾಕಿತು. ಒಲಂಪಿಕ್ ಪದಕ ವಿಜೇತ ಗ್ಯಾಬಿ ಸ್ಕ್ಲೋಸರ್ ನೇತೃತ್ವದ ನೆದರ್ಲೆಂಡ್ಸ್ ತಂಡವು ಇದಕ್ಕೆ ಪ್ರತ್ಯುತ್ತರವಾಗಿ ಕೇವಲ ಮೂರು 10 ಅಂಕಗಳನ್ನು ಗಳಿಸಿದರೆ, ಅವರು ಲೆಸ್ ಇನ್ವಾಲಿಡ್ಸ್‌ನಲ್ಲಿ ಸತತ 9 ಅಂಕಗಳನ್ನು ಗಳಿಸಿ ತಂಡದ ಗೆಲುವಿನಲ್ಲಿ ಸಹಾಯ ಮಾಡಿದರು.
🇮🇳 Update: Women's #Archery🏹 Recurve Team Quarter-Finals
— SAI Media (@Media_SAI) July 28, 2024
The trio of Deepika Kumari, Ankita Bhakat and Bhajan Kaur go down 0-6 to Netherlands
Let's #Cheer4Bharat🇮🇳
Keep streaming the #Olympics on DD Sports & @JioCinema! pic.twitter.com/Wxiu0pmd7m
ದೀಪಿಕಾ ಕುಮಾರಿ ಕಳಪೆ ಪ್ರದರ್ಶನ: ಭಾರತ ಪ್ಯಾರಿಸ್‌ನಲ್ಲಿ ಮಹಿಳಾ ಆರ್ಚರಿ ತಂಡದಿಂದ ಪದಕವನ್ನು ನಿರೀಕ್ಷಿಸಿತ್ತು, ಆದರೆ 140 ಕೋಟಿ ಭಾರತೀಯರ ನಿರೀಕ್ಷೆಯನ್ನು ತಲುಪುವಲ್ಲಿ ಮಹಿಳಾ ಆರ್ಚರಿ ತಂಡ ವಿಫಲವಾಯಿತು. ಅನುಭವಿ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರಿಂದಲೂ ಭಾರತ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಲವು ಕೆಟ್ಟ ಹೊಡೆತಗಳನ್ನು ದಾಖಲಿಸಿದ ಕಾರಣ ಸೋಲಿನೊಂದಿಗೆ ಭಾರತ ತನ್ನ ಅಭಿಯಾನವನ್ನು ಕೊನೆಗೊಳಿಸಿತು. ಪುರುಷರ ತಂಡ ಮತ್ತು ಮಿಶ್ರ ತಂಡವು ಬಿಲ್ಲುಗಾರಿಕೆಯಲ್ಲಿ ಭಾರತವನ್ನ ಪ್ರತಿನಿಧಿಸುತ್ತಿದ್ದು, ಇವರ ಮೇಲೆ ಪದಕದ ನಿರೀಕ್ಷೆ ಹೆಚ್ಚಿದೆ.
ಇದನ್ನೂ ಓದಿ: ಟೇಬಲ್ ಟೆನಿಸ್ನಲ್ಲಿ ಭಾರತಕ್ಕೆ ಹಿನ್ನಡೆ: ಒಲಿಂಪಿಕ್ನಿಂದ ಹೊರಬಿದ್ದ ಶರತ್ ಕಮಲ್ - Paris Olympics 2024